ಶ್ರೀಮಠದ ಶಿಷ್ಯ, ಹಿನ್ನೆಲೆ ಧ್ವನಿ ಕಲಾವಿದ, ನಿರೂಪಕ ಶ್ರೀ ಪ್ರದೀಪ ಬಡೆಕ್ಕಿಲ ಅವರಿಗೆ ‘ಸೃಷ್ಟಿ ಕಲೋಪಾಸಕ ಪ್ರಶಸ್ತಿ’

ಕಲೆ ~ ಸಾಹಿತ್ಯ ಸುದ್ದಿ

ಬೆಂಗಳೂರು: ಜಯನಗರದ ಜೆ‌.ಎಸ್.ಎಸ್. ಆಡಿಟೋರಿಯಂನಲ್ಲಿ ಶನಿವಾರ ನಡೆದ ಸೃಷ್ಟಿ ಕಲಾವಿದ್ಯಾಲಯದ ಸಂಗೀತ-ನೃತ್ಯೋತ್ಸವ ಸಮಾರಂಭದಲ್ಲಿ ಚಲನಚಿತ್ರ-ಕಿರುತೆರೆ‌ ನಟ, ಟಿವಿ ನಿರೂಪಕ, ಲೇಖಕ, ಶ್ರೀರಾಮಚಂದ್ರಾಪುರ‌ಮಠದ ಹಲವು ಪ್ರಸ್ತುತಿಗಳ ಧ್ವನಿ ಕಲಾವಿದರಾಗಿರುವ, ಶ್ರೀಮಠದ ಶಿಷ್ಯರೂ ಆಗಿರುವ ಶ್ರೀ ಪ್ರದೀಪ‌ ಬಡೆಕ್ಕಿಲ ಅವರಿಗೆ ಸೃಷ್ಟಿ ಕಲೋಪಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

 

ಕಿರುತೆರೆಯ‌ ಹಲವು ಜನಪ್ರಿಯ ಕಾರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿ ನೀಡಿರುವ ಇವರು ಮೆಟ್ರೋ ರೈಲಿನ ಉದ್ಘೋಷಗಳಿಗೂ ಧ್ವನಿಯಾಗಿದ್ದಾರೆ. ಶ್ರೀಯುತರಿಗೆ ಸಂದ ಗೌರವಕ್ಕೆ ಶ್ರೀಸಂಸ್ಥಾನ ಹಾಗೂ ಶಿಷ್ಯವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.

 

ಇದೇ ಸಮಾರಂಭದಲ್ಲಿ ಸಾಹಿತಿ ಶ್ರೀ ದೊಡ್ಡರಂಗೇಗೌಡರಿಗೆ ‘ಸೃಷ್ಟಿ ಕಲಾಭೂಷಣ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀ ಲೀಲಾಶಂಕರ್, ಉದ್ಯಮಿ ಡಾ. ಎಂ. ಶ್ಯಾಮಸುಂದರ, ಸೃಷ್ಟಿ ಕಲಾವಿದ್ಯಾಲಯದ ಗೌರವಾಧ್ಯಕ್ಷ ಶ್ರೀ ಶ್ರೀಕಾಂತ ಎಂ. ಜಿ., ಸೃಷ್ಟಿಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಛಾಯಾಪತಿ ಕಂಚಿಬೈಲ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *