ಮುಂಬೈನಲ್ಲಿ ರಕ್ತದಾನ ಶಿಬಿರ: ಶ್ರೀಮಠದ ಶಿಷ್ಯ ವರ್ಗ ಹಾಗೂ ಪೇಜಾವರ ಮಠದ ಸಹಯೋಗದಲ್ಲಿ ಆಯೋಜನೆ

ಸುದ್ದಿ

ಮುಂಬೈ: ಶ್ರೀರಾಮಚಂದ್ರಾಪುರ ಮಠದ ಮುಂಬೈ ಹಾಗೂ ಡೊಂಬಿವಿಲಿ ವಲಯದ ಶಿಷ್ಯರು ಪೇಜಾವರ ಮಠದ ಸಹಯೋಗದಲ್ಲಿ, ಶ್ರೀಸಂಸ್ಥಾನದ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಮುಂಬೈನ ಪ್ರಭಾತ ಕಾಲೋನಿಯಲ್ಲಿರುವ ಮಾಧ್ವಭವನದಲ್ಲಿ ಇದೇ ನವೆಂಬರ್ 25 ರಂದು ರಕ್ತದಾನ ಶಿಬಿರ ಅಯೋಜಿಸಿದ್ದಾರೆ.

 

ಆ ದಿನ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ರಕ್ತದಾನ ಶಿಬಿರ ನಡೆಯಲಿದ್ದು, ಆರೋಗ್ಯವಂತ ಜನರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಅವಶ್ಯಕತೆ ಇರುವ ರೋಗಿಗಳಿಗೆ ನೆರವಾಗುವಂತೆ ಕೋರಲಾಗಿದೆ.

 

ರಕ್ತದಾನಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿದ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ.
ಶ್ರೀ ಡಾ. ಎನ್. ಜಿ. ಭಟ್ – 9833987562
ಶ್ರೀಮತಿ ಉಷಾ ಭಟ್ – 9869482205
ಶ್ರೀಮತಿ ಈಶ್ವರಿ ಪಿ ಭಟ್ – 9158064444
ಶ್ರೀ ಕೆ.ಎಸ್.ಭಟ್ – 9869488979
ಶ್ರೀ ಎಲ್.ಎ.ಹೆಗಡೆ – 8108287244
ಶ್ರೀ ಎಮ್.ಎನ್.ಮಾರ್ಕಾಂಡೆ – 9833615085
ಶ್ರೀ ರಮಣ್ ಭಟ್ – 9820158256
ಶ್ರೀ ಯು.ಟಿ.ಕೃಷ್ಣಮೂರ್ತಿ – 9158018555

 

Author Details


Srimukha

Leave a Reply

Your email address will not be published. Required fields are marked *