ಬೆಂಗಳೂರು: ಮೊಬೈಲ್ ಇಂದು ಜೀವನಾವಶ್ಯಕ ವಸ್ತುಗಳ ಸಾಲಿಗೆ ಸೇರಿಹೋಗಿದೆ. ಮೊಬೈಲ್ ಇಲ್ಲದೇ ಒಂದು ಕ್ಷಣವೂ ಇರುವುದು ಸಾಧ್ಯವಿಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಮೊಬೈಲ್ ಗಳಲ್ಲಿ ನೂರಾರು ವೈರೈಟಿ, ಬೇರೆ ಬೇರೆ ದರ. ಇಂಥ ಮೊಬೈಲ್ ಗಳನ್ನು ಸಿಂಗರಿಸೋದೂ ಒಂದು ರೀತಿ ಸಂಭ್ರಮವೇ. ಸಿನಿಮಾ ನಟರು, ಬಾರ್ಬಿ ಗೊಂಬೆ, ಹೀಗೆ ವಿಭಿನ್ನ ಚಿತ್ರ-ಡಿಸೈನ್ ಹೊಂದಿದ ಮೊಬೈಲ್ ಕವರ್ ಗಳು ಮಾರುಕಟ್ಟೆ ಯಲ್ಲಿ ಲಭ್ಯ. ಇದಕ್ಕೆ ಈಗ ಹೊಸ ಸೇರ್ಪಡೆ ಶ್ರೀಸಂಸ್ಥಾನದ ಚಿತ್ರವಿರುವ ಮೊಬೈಲ್ ಕವರ್.
ಶ್ರೀಸಂಸ್ಥಾನ ಗೋರಕ್ಷಣೆ ಮೊದಲಾದ ನೂರಾರು ಸಮಾಜಕ್ಕೆ ದಿಗ್ದರ್ದಶ ಮಾಡುವ ಕೆಲಸಗಳಲ್ಲಿ ತೊಡಗಿಕೊಂಡ ಬಳಿಕ ಭಾರತದಾದ್ಯಂತ ಶ್ರೀಸಂಸ್ಥಾನದವರ ಶಿಷ್ಯವರ್ಗ ಹಾಗೂ ಭಕ್ತರಿದ್ದಾರೆ. ಇವರೆಲ್ಲರಿಗೂ ತಮ್ಮ ತಮ್ಮ ಮೊಬೈಲ್ ಗಳಿಗೆ ಶ್ರೀಸಂಸ್ಥಾನದ ಚಿತ್ರವಿರುವ ಮೊಬೈಲ್ ಕವರ್ ಬೇಕೆಂಬ ಕೋರಿಕೆ ಇದ್ದರೂ ಈಡೇರಿರಲಿಲ್ಲ. ಇದೀಗ ಮೊಬೈಲ್ ಮಾರುಕಟ್ಟೆಗೆ ಶ್ರೀಸಂಸ್ಥಾನದವರ ಚಿತ್ರಹೊಂದಿರುವ ಕವರ್ ಕಾಲಿಟ್ಟಿದೆ.
ಇದರಿಂದ ಶ್ರೀಮಠದ ಭಕ್ತರಿಗೆ ಸಂತೋಷವಾಗಿದೆ. ಆದರೆ ಸದ್ಯಕ್ಕೆ ಈ ಮೊಬೈಲ್ ಕವರ್ ಆ್ಯಪಲ್ ಪೋನ್ ಗೆ ಮಾತ್ರ ಲಭ್ಯವಿದ್ದು ಉಳಿದ ಪೋನ್ ಗಳಿಗೆ ಸಿದ್ಧವಾಗಬೇಕಿದೆ. ಶ್ರೀಸಂಸ್ಥಾನದವರ ಚಿತ್ರ ಆಕರ್ಷಕವಾಗಿ ಮೂಡಿಬಂದಿದ್ದು ಆಸಕ್ತರು ಈ ಕೆಳಗಿನ ಲಿಂಕ್ ನಲ್ಲಿ ಕವರ್ ಖರೀದಿಸಬಹುದಾಗಿದೆ.
http://nudiangadi.com/product/sri-raghaveshwara-bharathi-mobile-phone-art-back-case
ಹರೇ ರಾಮ