ತಳಗೇರಿ: ದೇವರ ಸೊತ್ತನ್ನು ನುಂಗುವುದರಿಂದ ಪಾಪವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಬದುಕಿನಲ್ಲಿ ನಮ್ಮ ಪೂರ್ವ ಕರ್ಮಕ್ಕನುಗುಣವಾಗಿ ಎಲ್ಲವೂ ಬರುತ್ತದೆ. ಗುರುಪರಂಪರೆ ಕೃಪೆ ಮಾಡಿ ದೇವರ ಇಚ್ಛೆ ಇದ್ದಾಗ ಮಾತ್ರ ಸಾತ್ವಿಕ ಅಪೇಕ್ಷೆಗಳು ಈಡೇರುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಹೇಳಿದರು.
ತಳಗೇರಿ ವಿಜಯಕುಮಾರ್ ನಿವಾಸದಲ್ಲಿ ಭಿಕ್ಷಾ ಸೇವಾ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಒಳ್ಳೆಯ ದಾರಿಯಲ್ಲಿ ಇದ್ದಾಗ ಹಲವು ಶುಭಗಳು ಸೇರಿ ಬರುತ್ತವೆ. ಧರ್ಮ ಯಾವತ್ತಿದ್ದರೂ ದೊಡ್ಡದು, ದ್ರವ್ಯವಲ್ಲ. ಸೇವೆ ತ್ಯಾಗದ ಮೂಲಕ ಧರ್ಮ ಪ್ರಾಪ್ತಿಯಾಗುತ್ತದೆ. ಗೋವನ್ನು ಮೇಯಿಸಿ ತರುವ ಪುಣ್ಯ ಹೋಮ, ಪೂಜೆ, ದಾನದ ಎಲ್ಲಾ ಫಲ ಅಲ್ಲೇ ಬಂತು. ನಿರಂತರ ಗೋಸೇವೆಯಿಂದ ಬ್ರಹ್ಮಜ್ಞಾನಿಯಾಗಲು ಸಾಧ್ಯವಿದೆ ಎಂದು ತಿಳಿಸಿದರು.
ವಿಜಯಕುಮಾರ್ ಮತ್ತು ಕುಟುಂಬದವರ 24 ವರ್ಷಗಳ ಅಪೇಕ್ಷೆಯಂತೆ ಮಂಗಳವಾರ ಭಿಕ್ಷಾ ಸೇವೆ ನಡೆಯಿತು. ಸುವರ್ಣಮಂಟಪದಲ್ಲಿ ಶ್ರೀಕರಾರ್ಚಿತ ಶ್ರೀಸೀತಾರಾಮಚಂದ್ರ, ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವರುಗಳ ಪೂಜೆ ನಡೆಯಿತು.