ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ಬೆಂಗಳೂರಿನಲ್ಲಿ

ಸುದ್ದಿ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ 26ನೇ ಚಾತುರ್ಮಾಸ್ಯ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದ ಆವರಣದಲ್ಲಿ ನಡೆಯಲಿದೆ.

 

ಜುಲೈ 16ರಂದು ಆರಂಭವಾಗುವ ಚಾತುರ್ಮಾಸ್ಯ ಸೆಪ್ಟೆಂಬರ್ 14ರಂದು ಸಂಪನ್ನವಾಗಲಿದ್ದು, ಈ ಬಾರಿಯ ಚಾತುರ್ಮಾಸ್ಯಕ್ಕೆ ರಾಮಾಯಣ ಚಾತುರ್ಮಾಸ್ಯ ಎಂದು ಹೆಸರಿಸಲಾಗಿದೆ. ಸೆಪ್ಟೆಂಬರ್ 14ರಂದು ಶನಿವಾರ ಸೀಮೋಲ್ಲಂಘನ ನಡೆಯಲಿದೆ.

 

ಶ್ರೀಗಳು ಸನ್ಯಾಸ ಸ್ವೀಕರಿಸಿ 25 ವರ್ಷಗಳನ್ನು ಪೂರೈಸಿದ್ದು, ಈ ಬಾರಿ 26ನೇ ವರ್ಷದ ಚಾತುರ್ಮಾಸ್ಯವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲು ಶ್ರೀಮಠದ ಶಿಷ್ಯರು ಹಾಗೂ ಭಕ್ತರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ ಚಾತುರ್ಮಾಸ್ಯ ಸಮಿತಿ ರಚನೆಯಾಗಿದ್ದು, ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ.

 

Author Details


Srimukha

Leave a Reply

Your email address will not be published. Required fields are marked *