ವ್ಯಕ್ತಿಯ ನಡೆ ನುಡಿಗಳಿಂದ ಯೋಗ್ಯತೆಯನ್ನು ತಿಳಿಯಬಹುದು – ಶ್ರೀಸಂಸ್ಥಾನ

ಸುದ್ದಿ

ಗಿರಿನಗರ: ಬೇಡುವ ಭಾವ ಇರುವವರೆಲ್ಲಾ ದೇಹಿಗಳಾಗಿರುತ್ತಾರೆ. ಗಗನವೇ ಗಡಿ ಎಂಬಷ್ಟು ಅವಕಾಶಗಳಿರುವ ಸಾಧನೆಗೆ ಆದರ್ಶ ವ್ಯಕ್ತಿಗಳ ಸ್ಫೂರ್ತಿ ಬಹಳಷ್ಟು ಕಾರ್ಯ ಮಾಡುತ್ತದೆ. ಮನಸ್ಸು ಮಾಡಿದರೆ ಎಂಥಹಾ ಪಾತಾಳದಿಂದ ಎದ್ದು ಬರಲು ಸಾಧ್ಯವಿದೆ. ವ್ಯಕ್ತಿಯ ನಡೆ ನುಡಿಗಳಿಂದ ಯೋಗ್ಯತೆಯನ್ನು ತಿಳಿಯಬಹುದು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

 

ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನೇಳನೇ ದಿನ ಆಶೀರ್ವಚನ ನೀಡಿದರು.

 

ವಿಶ್ವಾಮಿತ್ರರ ಜತೆಗೆ ಮಿಥಿಲೆಯ ಕಡೆಗೆ ಹೋಗುತ್ತಿದ್ದ ರಾಮ ಲಕ್ಷ್ಮಣರಿಗೆ ನಗರ ಪ್ರವೇಶದ ಮೊದಲು ಆಶ್ರಮವೊಂದು ಕಾಣಿಸುತ್ತದೆ. ಗೌತಮರ ಆಶ್ರಮಕ್ಕೆ ಪಾದಾರ್ಪಣೆ ಮಾಡಿದ ರಾಮ ಅಹಲ್ಯೆಗೆ ಶಾಪ ವಿಮೋಚನೆ ಮಾಡಿದ. ಜನಕರ ಯಜ್ಞದಲ್ಲಿ ಪಾಲ್ಗೊಳ್ಳುತ್ತಾರೆ. ಇವರ ಆಗಮನದ ಅರಿವಾದ ಜನಕ ಭೇಟಿ ಮಾಡಿ ಉಪಚರಿಸುತ್ತಾನೆ. ರಾಮ ಲಕ್ಷ್ಮಣರ ಕಡೆಗೆ ಗಮನ ಹರಿಸುತ್ತಾನೆ ಎಂಬ ಸಮಗ್ರ ಚಿತ್ರಣವನ್ನು ಪ್ರವಚನದಲ್ಲಿ ವಿವರಿಸಿದರು.

 

ಧರ್ಮಕರ್ಮ ಖಂಡದ ಶ್ರೀಸಂಯೋಜಕ ರಾಮಕೃಷ್ಣ ಕೂಟೇಲು ಪ್ರಸ್ತಾವನೆಗೈದರು. ವಿನಾಯಕ ಎನ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Author Details


Srimukha

Leave a Reply

Your email address will not be published. Required fields are marked *