ಪ್ರತಿಜ್ಞೆಯನ್ನು ಪೂರೈಸಿದಾಗ ಎಲ್ಲರಿಗಿಂತ ಮಿಗಿಲಾಗಬಹುದು – ಶ್ರೀಸಂಸ್ಥಾನ

ಸುದ್ದಿ

ಗಿರಿನಗರ: ಪ್ರತಿಜ್ಞೆಯನ್ನು ಪೂರೈಸಿದಾಗ ಎಲ್ಲರಿಗಿಂತ ಮಿಗಿಲಾಗಬಹುದು. ಪ್ರತಿಯೊಂದು ದೇವರಿಗೆ ತಿಳಿಯುತ್ತದೆ ಎಂಬುದು ದೃಢವಾದಾಗ ಒಳ್ಳೆಯವರಾಗುತ್ತೇವೆ. ಮಕ್ಕಳು ಗ್ರಹಿಕೆ ಉಳ್ಳವರಾಗಿದ್ದಾಗ ಮಾತ್ರ ಸೂಕ್ಷ್ಮಗಳು ತಿಳಿಯಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

 

ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನಾರನೇ ದಿನ ಆಶೀರ್ವಚನ ನೀಡಿದರು.

 

ನಮ್ಮ ಸಂಪಾದನೆಯಲ್ಲಿ ಪ್ರಕೃತಿ ಸೇರಿ ಪ್ರತಿಯೊಬ್ಬರಿಗೂ ಪಾಲಿದೆ ಎಂಬುದನ್ನು ಅರಿತುಕೊಳ್ಳಬೇಕು. ಗೌರವ ಯಾರಿಗೆ ಎಷ್ಟು ಸಲ್ಲಿಸಬೇಕೋ, ಅಷ್ಟು ಗೌರವ ಕೊಡಬೇಕು. ಕರ್ತವ್ಯವನ್ನು ಮಾಡಬೇಕಾದ ರೀತಿಯಲ್ಲಿ ಮಾಡದಿದ್ದಾಗ ಒಳಿತಾಗುವುದಿಲ್ಲ. ದರ್ಪವನ್ನು ವಿಧಿ ಯಾವತ್ತೂ ಸಹಿಸುವುದಿಲ್ಲ. ಗರ್ವ ಇದ್ದಲ್ಲಿ ಪಥನ ನಿಶ್ವಿತ ಎಂದು ತಿಳಿಸಿದರು.

 

ವಿಶ್ವಾಮಿತ್ರರು ಗಂಗಾವತರಣದ ಕಥೆಯನ್ನು ಮುಂದುವರಿಸಿದರು. ಗಂಗೆ ಭೂಮಿಗೆ ಬರುವ ಸಮಯ ಶಿವನನ್ನೇ ಕೊಚ್ಚಿಕೊಂಡು ಹೋಗುವ ಆಲೋಚನೆ ಮಾಡುತ್ತಾಳೆ. ಅದನ್ನು ತಿಳಿದ ಶಿವ ಜಟೆಯನ್ನು ಬಿಡಿಸಿ ನಿಂತು ಗಂಗೆಯ ಸೊಕ್ಕನ್ನು ಅಡಗಿಸುವ ಕಾರ್ಯ ಮಾಡಿದ. ಧರಣಿಯನ್ನು ಗಂಗೆ ಸ್ಪರ್ಷಿಸಿದ್ದೇ ವಿಶೇಷವಾಗಿತ್ತು. ಎಲ್ಲಾ ಗರ್ವ ಭಂಗವಾಗಿ ಸಗರ ಪುತ್ರರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ರಾಮ ಲಕ್ಷ್ಮಣ ಸಹಿತವಾಗಿ ವಿಶ್ವಾಮಿತ್ರರು ಮಿಥಿಲೆಯ ಕಡೆಗೆ ಹೆಜ್ಜೆಹಾಕುತ್ತಾರೆ ಎಂಬ ಸಮಗ್ರ ಚಿತ್ರಣವನ್ನು ಪ್ರವಚನದಲ್ಲಿ ವಿವರಿಸಿದರು.

 

ಧರ್ಮಕರ್ಮ ಖಂಡದ ಶ್ರೀಸಂಯೋಜಕ ರಾಮಕೃಷ್ಣ ಕೂಟೇಲು ಪ್ರಸ್ತಾವನೆಗೈದರು. ವಿನಾಯಕ ಎನ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Author Details


Srimukha

Leave a Reply

Your email address will not be published. Required fields are marked *