ಮಾಲೂರು: ಕೋಲಾರ ಪಶುಸಂಗೋಪನಾ ಇಲಾಖೆ ವತಿಯಿಂದ ಮಾಲೂರು ಪಶುವೈದ್ಯಕೀಯ ಚಿಕಿತ್ಸಾಲಯದ ಸಹೋಯೋಗದಲ್ಲಿ ಮಾಲೂರು ತಾಲೂಕು ಬರ ಗೋಶಾಲೆಯನ್ನು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ತೆರೆಯಲಾಗಿದೆ.
ಮಾಲೂರು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ಗೋಶಾಲೆಯನ್ನು ಉದ್ಘಾಟಿಸಿದರು. ಸಂಚಾರಿ ಗೋಶಾಲೆಯ ಪಶು ವೈದ್ಯಾಧಿಕಾರಿ ಡಾ. ರೆಡ್ಡಪ್ಪ, ಗೋಆಶ್ರಮದ ವಿಶೇಷ ಕರ್ತವ್ಯ ಅಧಿಕಾರಿ ರಾಮಚಂದ್ರ ಅಜ್ಜಕಾನ, ಗೋಶಾಲೆಯ ಕೃಷ್ಣ ಭಟ್, ಅನಂತ ಹೆಗಡೆ ಹಾಜರಿದ್ದರು.
ಮಾಲೂರು ತಾಲೂಕಿನಲ್ಲಿ ತೀವ್ರ ಬರದ ಹಿನ್ನಲೆಯಲ್ಲಿ ಸರ್ಕಾರ ಈ ಗೋಶಾಲೆಯನ್ನು ಇಲ್ಲಿ ತೆರೆದಿದೆ. ಈಗಾಗಲೇ ಸುಮಾರು ೨೧೩ ಗೋವುಗಳು ಪ್ರಯೋಜನ ಪಡೆದುಕೊಳ್ಳುತ್ತಿದೆ. ಸರ್ಕಾರದ ವತಿಯಿಂದ ನೀರು, ಒಣಹುಲ್ಲು ಹಾಗೂ ಹಸಿ ಹುಲ್ಲು ವಿತರಣೆ ಮಾಡುವ ಅವಕಾಶವಿದೆ. ಸರ್ಕಾರದಿಂದ ಅರ್ಧ ಲೋಡ್ ಒಣಹುಲ್ಲು ಮಾಲೂರು ಬರ ಗೋಶಾಲೆಗೆ ಬಂದಿದ್ದು, ಉಳಿದ ಅರ್ಧ ಬಂಗಾರಪೇಟೆ ಬರ ಗೋಶಾಲೆಗೆ ಹೋಗಿರುತ್ತದೆ.