ಗೋಸ್ವರ್ಗದಲ್ಲಿ ಶ್ರೀಸಾನ್ನಿಧ್ಯ

ಸುದ್ದಿ

ಬಾನ್ಕುಳಿ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ರಾಮಾಯಣ ಚಾತುರ್ಮಾಸ್ಯವನ್ನು ಸಂಪನ್ನಗೊಳಿಸಿ, ಸೀಮೋಲ್ಲಂಘನದ ಬಳಿಕ ಶ್ರೀಸವಾರಿ ಗೋಸ್ವರ್ಗಕ್ಕೆ ಚಿತ್ತೈಸಿದರು.

 

ಸೆ.15ರ ಸಂಜೆ 5.45ಕ್ಕೆ ಆಗಮಿಸಿದ ಶ್ರೀಸಂಸ್ಥಾನದವರನ್ನು ಸಿದ್ಧಾಪುರ ಮಂಡಲ, ಗೋಸ್ವರ್ಗ ಹಾಗೂ ಸಮಸ್ತ ಶಿಷ್ಯಭಕ್ತರ ಪರವಾಗಿ ಗುಂಜಗೋಡು ಜಯರಾಮ ಭಟ್ ದಂಪತಿಗಳು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

 

ಸೆ.16ರಂದು ಸಿದ್ಧಾಪುರ ಮಂಡಲದ ಶಿಷ್ಯಭಕ್ತರಿಂದ ಗುರುಪಾದುಕಾ ಪೂಜೆ ಹಾಗೂ ಭಿಕ್ಷಾಸೇವೆಗಳು ನಡೆಯಿತು. ಸಾರ್ವಜನಿಕ ಮಂತ್ರಾಕ್ಷತೆ ನೀಡಿದ ಶ್ರೀಸಂಸ್ಥಾನದವರು ಮಂಡಲದ ಪದಾಧಿಕಾರಿಗಳು ಹಾಗೂ ಗೋಸ್ವರ್ಗ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

 

ಮಂಡಲದ ಅಧ್ಯಕ್ಷರಾದ ಸುಬ್ರಾಯ ಹೆಗಡೆ ಸುಂಗೊಳ್ಳಿಮನೆ, ಮಹಾಮಂಡಲದ ಅಧ್ಯಕ್ಷರಾದ ಆರ್.ಎಸ್ ಹೆಗಡೆ ಹರಗಿ, ಮಂಡಲ ಹಾಗೂ ಮಹಾಮಂಡಲದ ಪದಾಧಿಕಾರಿಗಳು ನೂರಾರು ಶಿಷ್ಯಭಕ್ತರು ಪಾಲ್ಗೊಂಡರು.

Author Details


Srimukha

Leave a Reply

Your email address will not be published. Required fields are marked *