ನಂತೂರು: ರಕ್ತದಾನದ ಮಹಾಕಾರ್ಯದಲ್ಲಿ ನಂತೂರು ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ತೊಡಗಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಅನಾರೋಗ್ಯದಿಂದ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿರುವ ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮದ ಹೊದಿಕೆಶಿರೂರು ಘಟಕದ ಗುರಿಕ್ಕಾರರಾದ ಗಣಪತಿ ಹೆಗಡೆಯವರು ಅವರಿಗೆ ತುರ್ತಾಗಿ ೫ ಯೂನಿಟ್ ರಕ್ತದ ಆವಶ್ಯಕತೆಯಿದೆ ಎಂಬ ವಿಚಾರವನ್ನು ಶ್ರೀರಾಮಚಂದ್ರಾಪುರಮಠದ ಶಾಸ್ತ್ರಿಗಳಾದ ವಿನಾಯಕ ಶಾಸ್ತ್ರಿಗಳು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಅವರಿಗೆ ತಿಳಿಸಿದ್ದರು.
ಇದರಂತೆ ಕಾರ್ಯ ಪ್ರವೃತ್ತರಾದ ಶ್ರೀಕೃಷ್ಣ ನೀರಮೂಲೆ ಅವರು ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲ ಪ್ರೊ. ಜೀವನ್ ದಾಸ್ ಮತ್ತು ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್. ಅವರಲ್ಲಿ ವಿಚಾರಿಸಿದ್ದಾರೆ. ತಕ್ಷಣ ಎನ್ನೆಸ್ಸೆಸ್ ವಿದ್ಯಾರ್ಥಿಗಳಾದ ಸುಪ್ರೀತ್, ಸಂದೀಪ್, ಸ್ವರಾಜ್, ಕೃಷ್ಣಪ್ರಸಾದ್, ಗುಣಕರ್ ಸಜ್ಜಾದರು. ಪ್ರಾಂಶುಪಾಲರೂ ಅವರ ಜತೆಗೂಡಿದರು.
ಕೆ. ಎಸ್ ಹೆಗ್ಡೆ ಹಾಸ್ಪಿಟಲ್ ದೇರಳಕಟ್ಟೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರವಾರ ನಿವಾಸಿ ಮಧುಕರ್ ಪಿ. ಕುರುಮ್ಕರ್ ಅವರಿಗೆ ರಕ್ತದ ಅವಶ್ಯಕತೆ ಇರುವ ಬಗ್ಗೆ ಅವರ ಪತ್ನಿ ಪ್ರಾಂಶುಪಾಲರಾದ ಪ್ರೊ.ಜೀವನ್ ದಾಸ್ ಅವರಲ್ಲಿ ಬೇಡಿಕೊಂಡಿದ್ದರಿಂದ ಈಬಗ್ಗೆ ಕಾಲೇಜಿನಲ್ಲಿ ವಿಚಾರಿಸಿದ್ದಾರೆ. ಈ ಸಂದರ್ಭ ವಿದ್ಯಾರ್ಥಿಗಳಾದ ಮಿಥುನ್, ವಿವೇಕ್ ಮತ್ತು ಧನುಷ್ ಅವರು ರಕ್ತದಾನ ಮಾಡಿದರು.