ಕೋಲಾರ: ಅಧಿಕ ಜ್ಯೇಷ್ಠ ಶುಕ್ಲ ದ್ವಾದಶಿಯಂದು (28-05-2026) ಮಾಲೂರಿನ ಶ್ರೀರಾಘವೇಂದ್ರ ಗೋ ಆಶ್ರಮಕ್ಕೆ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಗೋಶಾಲೆಯಲ್ಲಿ ನೆಲೆಸಿರುವ ಶ್ರೀ ಸಿದ್ಧಾಂಜನೇಯಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡು, ₹85,000 ಮೌಲ್ಯದ (65 ಚೀಲ) ಹಿಂಡಿ ದಾನ ನೀಡಿದರು.


ಗೋವುಗಳಿಗೆ ಸ್ವತಃ ಗ್ರಾಸ ನೀಡಿ ಗೋಶಾಲೆ ಪರಿಸರದಲ್ಲಿದ್ದು ಸಂತೋಷ ಪಟ್ಟರು. ದೇಶದ ಅಪೂರ್ವ ಗೋಸಂಪತ್ತನ್ನು ಉಳಿಸುವ ಮಹಾಕಾರ್ಯದಲ್ಲಿ ಹಿರಿಯರ ಈ ಗೋಸೇವೆ ಎಲ್ಲರಿಗೂ ಮಾದರಿಯಾಗಿದೆ.