ಹೊನ್ನಾವರ: ವಲಯದ ಜಿ ಜಿ ಭಟ್ ಚೌಕಿ ಅವರ ಮನೆಯಲ್ಲಿ ಭಾನುವಾರ ನಡೆದ ಹೊನ್ನಾವರ ಮಂಡಲ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಚರ್ಚಿಸಲ್ಪಟ್ಟ ಪ್ರಮುಖ ವಿಷಯಗಳು:
1. ಅಪ್ಸರ ಕೊಂಡ ಶಾಖಾಮಠದ ಕಾರ್ಯಕ್ರಮ ನಿಮಿತ್ತ ಕುಂಕುಮಾರ್ಚನೆ ಕಾಣಿಕೆ ಉಪಾಸನಾ ಖಾತೆಗೆ ಜಮಾ ಮಾಡುವುದು.
2. ಲಕ್ಷ್ಮೀಲಕ್ಷಣ ತಂತ್ರಾಂಶದ ವಿಚಾರ.
3. ಶಿವರಾತ್ರಿ ಮಹೋತ್ಸವ.
4.ವಾಲ್ಮೀಕೀ ರಾಮಾಯಣ.
5. ಜೀವನದಾನ.
6. ಹೈಗುಂದದಲ್ಲಿ ವರ್ಷಾವಧಿ ತಾಂತ್ರಿಕೋತ್ಸವ.
7. ಕಿತ್ರೆಯಲ್ಲಿ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವಗಳ ಸಭೆ
ಹಾಗೂ ಈ ಸಂದರ್ಭದಲ್ಲಿ ಆಚಾರ್ ಭಟ್ ಉಪಸ್ಥಿತರಿದ್ದು, ಗುರುಕುಲದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಹೊನ್ನಾವರ ಹವ್ಯಕ ಮಂಡಲದ ಸಭೆ ರಾಜಾರಾಮ ಹೆಬ್ಬಾರರ ಅಧ್ಯಕ್ಷತೆಯಲ್ಲಿ ಜಿ.ಜಿ.ಭಟ್ (ಚೌಕಿ)ರವರ ಮನೆಯಲ್ಲಿ ನಡೆದಿದೆ. ಶಾಸನತಂತ್ರದ ಜಿ.ಜಿ. ಭಟ್, ಮಹಾಮಂಡಲದ ವಿದ್ಯಾರ್ಥಿ ವಾಹಿನಿ ಪ್ರಧಾನ ಎಸ್.ಜಿ.ಭಟ್ ಕಬ್ಬಿನಗದ್ದೆ, ಮಂಡಲ ವೃತ್ತಿಪರ, ಆರೋಗ್ಯ, ಸೇವಾ ಪ್ರಧಾನರು, ವಲಯದ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯದರ್ಶಿ ವಸಂತಕುಮಾರ್ ಹಿಂದಿನ ಸಭೆಯ ವರದಿ ಮಂಡಿಸಿದರು.