ಮಾಣಿ ಮಠದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 100 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅನುಗ್ರಹ

ಶಿಕ್ಷಣ

 

ಮಾಣಿ-ಪೆರಾಜೆ (ಶ್ರೀರಾಮಚಂದ್ರಾಪುರ ಮಠ): ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಒಟ್ಟು 100 ಮಂದಿ ವಿದ್ಯಾರ್ಥಿಗಳಿಗೆ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಪ್ರತಿಭಾ ಪುರಸ್ಕಾರ ಅನುಗ್ರಹಿಸಿದರು.

ಮಾಣಿ ಮಠದಲ್ಲಿ ದಿನಾಂಕ 09-02-2019 ಮತ್ತು 10-02-2019 ರಂದು ನಡೆದ ಮಂಗಳೂರು ಹೋಬಳಿ ವಾರ್ಷಿಕೋತ್ಸವ, ಶ್ರೀರಾಮ ವೇದ ಪಾಠಶಾಲೆಯ ವಾರ್ಷಿಕೋತ್ಸವ ಮತ್ತು ಸೂತ್ರಸಂಗಮ ಕಾರ್ಯಕ್ರಮಗಳ ಶುಭ ಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನೀ ವಿಭಾಗದಿಂದ ಗುರುತಿಸಲ್ಪಟ್ಟ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀಸಂಸ್ಥಾನದವರಿಂದ ಅನುಗ್ರಹ ಪೂರ್ವಕ ಪ್ರತಿಭಾ ಪುರಸ್ಕಾರ ಪ್ರಾಪ್ತವಾಯಿತು.
ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಶ್ರೀಸಂಸ್ಥಾನದವರು ಮಾತನಾಡಿಸಿ ಮಂತ್ರಾಕ್ಷತೆಯಿತ್ತು, ಮುಂದೆ ಇನ್ನೂ ಹೆಚ್ಚಿನ ಸಾಧನೆಗೈಯುವಂತಾಗಲಿ, ಒಳಿತಾಗಲೆಂದು ಹರಸಿದರು.
ಶ್ರೀಮಠದ ವಾರ್ಷಿಕೋತ್ಸವ ಸಮಿತಿಯ ಪದಾಧಿಕಾರಿಗಳು, ಹವ್ಯಕ ಮಹಾಮಂಡಲ ಹಾಗೂ ಮೂರು ಮಂಡಲಗಳ ಪದಾಧಿಕಾರಿಗಳು, ಕಾರ್ಯಕರ್ತರು ಶ್ರೀಪರಿವಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *