ಮಂಗಳೂರು: ಪರಮಪೂಜ್ಯ ಶ್ರೀಸಂಸ್ಥಾನದವರು 05-07-2026 ರಂದು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗೆ ಚಿತ್ತೈಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ನವೀಕೃತಗೊಂಡ ಸಭಾಭವನವನ್ನು ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು. ಸಭಾಭವನಕ್ಕೆ ‘ಬೋಧಶ್ರೀ ಸಭಾಭವನ’ ಎಂಬ ಹೆಸರನ್ನು ಅನುಗ್ರಹಿಸಿದರು.

‘ಈ ಸಭಾಭವನ ಎಲ್ಲರನ್ನೂ ಆಹ್ವಾನಿಸುತ್ತಿದೆ. ಉತ್ತಮವಾಗಿ ರೂಪುಗೊಂಡಿದೆ. ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ವೃಂದದವರು ಸಮಿತಿ ಪದಾಧಿಕಾರಿಗಳು ಈ ಸಭಾಭವನ ನವೀಕರಣ ಕಾರ್ಯದಲ್ಲಿ ಶ್ರಮಪಟ್ಟಿರುವುದು ಕಂಡುಬರುತ್ತದೆ. ಕೆಲ ಕೆಲಸಗಳು ಧನವ್ಯಯ ಮಾಡಿದರೂ ಇಷ್ಟು ಸುಂದರವಾಗಿ ಮೂಡಿಬರುವುದಿಲ್ಲ. ಹಾಗಾಗಿ ಇದು ಶ್ರೇಷ್ಠವಾಗಿದೆ. ಶ್ರಮವಹಿಸಿದವರೆಲ್ಲರಿಗೂ ಸಹಕರಿಸಿದವರೆಲ್ಲರಿಗೂ ಆಶೀರ್ವಾದಗಳು’ ಎಂದು ಅವರು ಹರಸಿದರು.
ಸಂಸ್ಥೆಯ ಕಚೇರಿ, ಆಡಳಿತ ಕಚೇರಿ, ಸ್ಮಾರ್ಟ್ ತರಗತಿ ಕೊಠಡಿಗಳನ್ನು ವೀಕ್ಷಿಸಿ, ಬೆಳವಣಿಗೆಯ ಹಾದಿಯನ್ನು ಶ್ಲಾಘಿಸಿ, ಇನ್ನಷ್ಟು ಏರುಗತಿಯಲ್ಲಿ ಸಂಸ್ಥೆ ಬೆಳೆಯಲಿ ಎಂದು ಆಶೀರ್ವದಿಸಿದರು. ‘ಅನಂತಶ್ರೀ ಗೋಶಾಲೆ’ಗೆ ತೆರಳಿ ಗೋವುಗಳಿಗೆ ಗೋಗ್ರಾಸ ನೀಡಿದರು.