ಹವ್ಯಕ ಮಹಾಸಭಾದಿಂದ ಗುರುಭಿಕ್ಷಾಸೇವೆ.

ಸುದ್ದಿ
ಹವ್ಯಕ ಮಹಾಸಭೆಯು ಸಮಾಜಮುಖೀ ಕಾರ್ಯದಲ್ಲಿ ನಿರತವಾಗಿದ್ದು, ಸಮಾಜಕ್ಕೆ ಶಕ್ತಿ ತುಂಬುವ; ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ. ಮಹಾಸಭೆಯ ಕಾರ್ಯಗಳ ಬಗ್ಗೆ ಹೆಮ್ಮೆಯಿದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಗಿರಿನಗರದ ಶಾಖಾಮಠದಲ್ಲಿ ಚಾತುರ್ಮಾಸ್ಯವ್ರತವನ್ನು ನಡೆಸುತ್ತಿರುವ ಪೂಜ್ಯ ಶ್ರೀಗಳು, ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಮಹಾಸಭೆಯ ಕಾರ್ಯಗಳ ಬಗ್ಗೆ ಪದಾಧಿಕಾರಿಗಳಿಂದ ಮಾಹಿತಿಪಡೆದು, ಮಹಾಸಭೆಗೆ ಗುರುಪೀಠದ ಆಶೀರ್ವಾದ ಹಾಗೂ ಮಾರ್ಗದರ್ಶನ ಸದಾ ಇರಲಿದೆ ಎಂದರು.
ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ದ್ವಿತೀಯ ವಿಶ್ವಹವ್ಯಕ ಸಮ್ಮೇಳನದ ನಂತರ ದೇಶ – ವಿದೇಶಗಳಿಂದ ಕಾರ್ಯಕ್ರಮದ ಕುರಿತಾಗಿ ವ್ಯಕ್ತವಾದ ಅಭಿಪ್ರಾಯಗಳನ್ನು, ನಾಡಿನಲ್ಲಿ ಸಮಾಜದ ಕುರಿತಾಗಿ ಉಂಟಾದ ಧನಾತ್ಮಕ ಪ್ರತಿಕ್ರಿಯೆಗಳ ಕುರಿತು  ಹಾಗೂ ಮಹಾಸಭೆಯ ಸದಸ್ಯತ್ವ ಅಭಿಯಾನದ ಕುರಿತು ಶ್ರೀಗಳ ಗಮನಕ್ಕೆ ತಂದರು.
ಉಪಾಧ್ಯಕ್ಷರಾದ ಕೆಕ್ಕಾರು ಶ್ರೀಧರ್ ಭಟ್ ಅಮೇರಿಕಾದ ಟೊರಂಟೋದಲ್ಲಿ ನಡೆದ ಹವ್ಯಕ ಸಮ್ಮೇಳನದ ಕುರಿತಾಗಿ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಮಹಾಸಭೆ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿಯನ್ನು ನೀಡಿದರು.
ಕಾರ್ಯದರ್ಶಿ ಶ್ರೀಧರ್ ಭಟ್ ಸಾಲೆಕೊಪ್ಪ ದಂಪತಿಗಳು ಮಹಾಸಭೆಯ ಪರವಾಗಿ ಶ್ರೀಗುರುಭಿಕ್ಷಾಸೇವೆ, ಶ್ರೀಗುರುಪಾದುಕಾ ಪೂಜಾಧಿ ಸೇವೆಗಳನ್ನು ಸಲ್ಲಿಸಿದರು. ಮಹಾಸಭೆಯಿಂದ ಕುಲಗುರುಗಳಿಗೆ ಫಲಕಾಣಿಕೆ ಸಮರ್ಪಿಸಿ ಪೂಜ್ಯ ಶ್ರೀಗಳಿಂದ ಆಶೀರ್ಮಂತ್ರಾಕ್ಷತೆಯನ್ನು ಪದಾಧಿಕಾರಿಗಳು ಪಡೆದರು. ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್ ಯಲ್ಲಾಪುರ, ಮಹಾಬಲೇಶ್ವರ ಭಟ್ ಚಿಂಚನೂರು, ನಿರ್ದೇಶಕರಾದ ನಿತಿನ್ ಶಾಸ್ತ್ರಿ, ಪ್ರಸನ್ನಕುಮಾರ್ ಕೆ.ಎಸ್, ಡಾ. ನರಹರಿ ರಾವ್, ಆದಿತ್ಯ ಕಲಗಾರು ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು, ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದು ಕುಲಗುರುಗಳಿಂದ ಆಶೀರ್ವಾದ ಪಡೆದರು.

Author Details


Srimukha

Leave a Reply

Your email address will not be published. Required fields are marked *