ಕೊರೋನಾ ಸಂಕಷ್ಟಕ್ಕೆ ಶ್ರೀರಾಮಚಂದ್ರಾಪುರಮಠ ಸ್ಪಂದನೆ

ಮಠ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಗುರುವಾರ ಕೋವಿಡ್-19 ಪರಿಹಾರ ನಿಧಿಗೆ 2 ಲಕ್ಷ ರೂಪಾಯಿಗಳ ದೇಣಿಗೆ ನೀಡಲಾಯಿತು.
ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್ ಮತ್ತು ಸಂದೇಶ ತಲಕಾಲಕೊಪ್ಪ ಶ್ರೀಮಠದ ಪರವಾಗಿ ದೇಣಿಕೆ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.
ಶ್ರೀಮಠದ ವಿವಿಧ ಅಂಗಸಂಸ್ಥೆಗಳು ಈಗಾಗಲೇ ವಲಸೆ ಕಾರ್ಮಿಕರು ಮತ್ತು ಬಡವರಿಗೆ ಆಹಾರ ಕಿಟ್‍ಗಳನ್ನು ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿವೆ.
ಶ್ರೀಮಠದ ಭಾರತೀಯ ಗೋ ಪರಿವಾರ ಟ್ರಸ್ಟ್ ವತಿಯಿಂದ ಅಧ್ಯಕ್ಷ ಆರ್.ಕೆ.ಬೆಳ್ಳಾರೆಯವರ ನೇತೃತ್ವದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಿಒಬನಗಳ್ಳಿಯಲ್ಲಿ 100 ಬಡ ಕುಟುಂಬಗಳಿಗೆ ಮತ್ತು 250 ವಲಸೆ ಕಾರ್ಮಿಕರ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಗಿದೆ.
ಗೋಸ್ವರ್ಗ ವತಿಯಿಂದ ಕೊರೋನಾ ಕರ್ತವ್ಯ ನಿರತ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರಿಗೆ ಪ್ರತಿದಿನ ಆಹಾರ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ. ಕುಮಟಾ ಹಾಗೂ ಹೊನ್ನಾವರದಲ್ಲಿ ಪೊಲೀಸರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಉದ್ಯಮಿ ಮಂಜುನಾಥ್ ಸುವರ್ಣಗದ್ದೆ ಪ್ರಾಯೋಜಕತ್ವದಲ್ಲಿ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಕೈಗವಸು ಮತ್ತು ಮಾಸ್ಕ್‍ಗಳನ್ನು ನೀಡಲಾಗಿದೆ.
ಹೊಸನಗರ ಗ್ರಾಮಪಂಚಾಯ್ತಿ ವ್ಯಾಪ್ತಿಯ 300ಕ್ಕೂ ಹೆಚ್ಚು ಬಡಕುಟುಂಬಗಳಿಗೆ ಶ್ರೀಮಠದ ವತಿಯಿಂದ ದಿನಸಿ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ನೀಡಲಾಗಿದ್ದು, ಬೆಂಗಳೂರಿನ ಬನಶಂಕರಿ ಪ್ರದೇಶದ 300ಕ್ಕೂ ಹೆಚ್ಚು ಬಡಕುಟುಂಬಗಳಿಗೆ ಗಿರಿನಗರ ರಾಮಾಶ್ರಮ ವತಿಯಿಂದ ಊಟದ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವೆಡೆ ಪಶು ಆಹಾರ ಕೊರತೆ ಉದ್ಭವಿಸಿರುವ ಹಿನ್ನೆಲೆಯಲ್ಲಿ ಹಲವು ಗೋಶಾಲೆಗಳಿಗೆ ಶ್ರೀಮಠದ ವತಿಯಿಂದ 10 ಲೋಡ್‍ಗೂ ಅಧಿಕ ಮೇವು ವಿತರಿಸಲಾಗಿದೆ.

Author Details


Srimukha

Leave a Reply

Your email address will not be published. Required fields are marked *