ಹೊಸನಗರ: ಪರಮಪೂಜ್ಯ ಶ್ರೀ ಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ಮಾರ್ಗಶೀರ್ಷ ಕೃಷ್ಣ ಅಮಾವಾಸ್ಯೆಯಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿರುವ ಶ್ರೀ ಚಂದ್ರಮೌಳೀಶ್ವರ ದೇವರ ಸನ್ನಿಧಿಯಲ್ಲಿ ಸೂರ್ಯಗ್ರಹಣ ಶಾಂತಿ ಹವನ ಮತ್ತು ಶತಾಧಿಕ ರುದ್ರಮಂತ್ರ ಪಠಣ, ಅಭಿಷೇಕ, ಹಾಗೂ ರುದ್ರ ಹವನ ಸಂಪನ್ನಗೊಂಡಿದೆ. ೧೩೦ ರುದ್ರಾಧ್ಯಾಯಿಗಳ ಕೂಡುವಿಕೆಯಲ್ಲಿ ೧೪೧೫ ರುದ್ರ ಸಮರ್ಪಣೆ ಆಗಿದೆ.