ಕೇರಳದ ಬುಡಕಟ್ಟು ಜನಾಂಗಕ್ಕೆ ಪರಿಹಾರ ವಸ್ತುಗಳ ಪೂರೈಕೆ

ಸುದ್ದಿ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಜಗದ್ಗುರು ಶಂಕರಾಚಾರ್ಯ ಶ್ರಿಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟು ಮತ್ತು ಮೇಪಾಡಿ ಗ್ರಾಮಗಳ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಸುಮಾರು ೧೫೦ ನೆರೆ ಸಂತ್ರಸ್ತ ಬುಡಕಟ್ಟು ಕುಟುಂಬಗಳಿಗೆ ಹೊದಿಕೆ, ಮಹಿಳೆ-ಪುರುಷ-ಮಕ್ಕಳ ದಿನಬಳಕೆ ಉಡುಪುಗಳು, ಅಕ್ಕಿ-ಬೇಳೆ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

 

ಈ ಪ್ರದೇಶಗಳು ದಟ್ಟ ಅರಣ್ಯದಲ್ಲಿ ಇರುವುದರಿಂದ ನಗರ ಜೀವನದೊಂದಿಗೆ ಅಷ್ಟಾಗಿ ಸಂಪರ್ಕವನ್ನು ಹೊಂದಿರುವುದಿಲ್ಲ, ಹಾಗಾಗಿ ಸರ್ಕಾರವಾಗಲಿ, ಸಂಘ ಸಂಸ್ಥೆಗಳಾಗಲಿ ಅವರನ್ನು ತಲುಪಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ಬುಡಕಟ್ಟು ಜನರಿಗೆ ಅತ್ಯಾವಶ್ಯಕತೆಯನ್ನು ಮಂಗಳೂರಿನ ಖ್ಯಾತ ಯೋಗ ಶಿಕ್ಷಕಿ ಚೇತನಾ ಅಜಿತ್‌ಕುಮಾರ್ ಅವರಿಂದ ತಿಳಿದುಕೊಂಡ ಶ್ರೀರಾಮಚಂದ್ರಾಪುರಮಠದ ಕಾರ್ಯಕರ್ತರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.

ಸಪ್ಟೆಂಬರ್ 8ರ ಬೆಳಿಗ್ಗೆ ಕಲ್ಪೆಟ್ಟಾ ಪ್ರಾಂತ್ಯದ ಇಡಿಯಂವಾಯಲ್ ಬುಡಕಟ್ಟು ಪ್ರದೇಶ ಎರಡು ಕಾಲೋನಿಗಳಲ್ಲಿ 94, ವಯನಂಕುನ್ನು ಕಾಲೋನಿಯಲ್ಲಿ 10, ಪುನ್ನಿಯೋರಕುನ್ನು ಭಾಗದಲ್ಲಿ 9, ವೆಂಗಪ್ಪಲ್ಲಿಯ ಚತ್ತೊತ್ ಕ್ಯಾಂಪಿನಲ್ಲಿ 18, ಮೆಲ್ಮುರಿಯಲ್ಲಿ 19 ಕುಟುಂಬಗಳಿಗೆ ಸೇರಿ ಒಟ್ಟು 150 ಕುಟುಂಬಗಳಿಗೆ ಪರಿಹಾರ ಸಾಮಾಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು. ಪ್ರತ್ಯೇಕವಾಗಿ ಸುಮಾರು ೩೦-೪೦ ಮಕ್ಕಳಿಗೆ ಉಡುಪುಗಳನ್ನು ವಿತರಿಸಲಾಯಿತು.

 

ಕಲ್ಪೆಟ್ಟಾ ಸೆಕ್ಷನ್ ಫಾರೆಸ್ಟ್ ಆಫೀಸರ್ ಎನ್.ಎನ್. ಉಣ್ಣಿ ಮಾತನಾಡಿ ಇಲ್ಲಿನವರೇ ಇವರಿಗೆ ಸಹಾಯ ಮಾಡಲಿಲ್ಲ, ನೀವು ಕರ್ನಾಟಕದಿಂದ ನಮ್ಮನ್ನು ಹುಡುಕಿಕೊಂಡು ಬಂದಿದ್ದು ನಿಜಕ್ಕೂ ಶ್ರೇಷ್ಠ ಸಂಗತಿ. ರಾಮಚಂದ್ರಾಪುರ ಮಠ ಮಾಡುತ್ತಿರುವ ಪರಿಹಾರ ಕಾರ್ಯವನ್ನು ಶ್ಲಾಘನೀಯ. ಸ್ವಾಮೀಜಿಯವರಿಗೆ ನಮ್ಮ ನಮಸ್ಕಾರಗಳನ್ನು ತಿಳಿಸಿ ಎಂದು ಹೇಳಿದರು.

ಬೀಟ್ ಫಾರೆಸ್ಟ್ ಆಫೀಸರ್ ಅನಿಲ್‌ಕುಮಾರ್ ಅವರು ಸಂಪೂರ್ಣ ಮಾಹಿತಿಗಳನ್ನು ನೀಡಿದರು. ಬೀಟ್ ಫಾರೆಸ್ಟ್ ಆಫೀಸರ್ ಗಳಾದ ಈ.ಪಿ. ಸ್ರೀಜಿತ್, ಜಿ.ರಾಹುಲ್ ಅವರು ಎಲ್ಲರಿಗೂ ಸಮರ್ಪಕವಾಗಿ ಸಾಮಾಗ್ರಿಗಳು ತಲುಪುವಲ್ಲಿ ಸಹಕರಿಸಿದರು. ಟ್ರೈಬಲ್ ಫಾರೆಸ್ಟ್ ವಾಚರ್ ಗಳಾದ ಎ.ಜಾನು, ಕೆ.ಲಕ್ಷ್ಮಿ ಅವರು ವಿತರಣಾ ಕಾರ್ಯದಲ್ಲಿ ಸಹಕರಿಸಿದರು.

ಹಾರಕೆರೆ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಅಗತ್ಯವಸ್ತುಗಳ ಸಂಗ್ರಹ ಮತ್ತು ಕಿಟ್ ತಯಾರಿಸಿ, ವಾಹನದಲ್ಲಿ ಕಳುಹಿಸುವ ಕಾರ್ಯವನ್ನು ನಿರ್ವಹಿಸಿದರು. ಸಾಮಾಗ್ರಿಗಳ ವಾಹನದೊಂದಿಗೆ ಮಾಣಿ ಮಠದ ಪ್ರಸನ್ನ, ಕಾರ್ಯಕರ್ತರಾಗಿ ಅಶ್ವಿನಿರಮಣ, ಮಹೇಶ ಕಂಕಿಲ, ಶ್ಯಾಮನಟೇಶ್, ಶಿಶಿರ ಹೆಗಡೆ ಹಾಜರಿದ್ದರು.

Author Details


Srimukha

Leave a Reply

Your email address will not be published. Required fields are marked *