ಕೇಪು: ಬಾಲ್ಯದಲ್ಲಿ ಹಲ್ಲಿನ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಹಲ್ಲಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಹಳ್ಳಿ ಪ್ರದೇಶಕ್ಕೆ ವೈದ್ಯರು ಬಂದು ನೀಡುತ್ತಿರುವ ಸೇವೆಯನ್ನು ಸದುಪಡಿಸಿಕೊಳ್ಳಬೇಕು ಎಂದು ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ರೈ ಹೇಳಿದರು.
ಅವರು ಪುಣಚ ಶ್ರೀದೇವಿನಗರ ಶ್ರೀದೇವಿ ಪ್ರೌಢಶಾಲೆಯಲ್ಲಿ ಕೇಪು ಹವ್ಯಕ ವಲಯದ ಆಶ್ರಯದಲ್ಲಿ ವಿಟ್ಲ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ವಿಟ್ಲ, ಶ್ರೀದೇವಿ ಪ್ರೌಢಶಾಲೆಯಲ್ಲಿ ನಿಟ್ಟೆ ಎಬಿ ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಸಮುದಾಯ ದಂತ ವೈದ್ಯಕೀಯ ವಿಭಾಗದ ವತಿಯಿಂದ ನಡೆದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಂಡಲ ಸೇವಾ ಪ್ರಧಾನ ಡಾ. ರಾಜೇಂದ್ರ ಪ್ರಸಾದ್ ವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್, ನಿಟ್ಟೆ ಎಬಿ ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಸಮುದಾಯ ದಂತ ವೈದ್ಯಕೀಯ ವಿಭಾಗದ ಡಾ. ಶಿಲ್ಪಾ ನಂದಕಿಶೋರ್, ಶ್ರೀದೇವಿ ಪ್ರೌಢಶಾಲೆ ಸಂಚಾಲಕ ಜಯಶ್ಯಾಮ ನೀರ್ಕಜೆ, ಮುಖ್ಯ ಶಿಕ್ಷಕಿ ಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.
ಕೇಪು ಹವ್ಯಕ ವಲಯ ಅಧ್ಯಕ್ಷ ಕೃಷ್ಣಮೂರ್ತಿ ಕಟ್ಟೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಜನಾರ್ಧನ ಭಟ್ ಅಮೈ ವಂದಿಸಿದರು. ಶಿಕ್ಷಕಿ ತಾರಾ ಕಾರ್ಯಕ್ರಮ ನಿರೂಪಿಸಿದರು.