ಶ್ರೀರಾಮಚಂದ್ರಾಪುರ ಮಠವು ನಿರಂತರವಾಗಿ ಸಮಾಜದ ಒಳಿತನ್ನು ಬಯಸುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿರುವುದು ಸರ್ವವಿದಿತ.
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂನ್ಯಾಸ ಸ್ವೀಕಾರದ ದಿನದಂದು ಶ್ರೀಮಠದ ಶಾಸನತಂತ್ರದ ಸೇವಾಖಂಡವು ಬೆಂಗಳೂರಿನ ದಕ್ಷಿಣ ಹಾಗೂ ಉತ್ತರ ಮಂಡಲಗಳ ಸಹಕಾರದೊಂದಿಗೆ *ರಕ್ತಬಂಧ* ಎನ್ನುವ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದೆ.
ದಿನಾಂಕ: ಮಾರ್ಚ್ 22, 2026
ಸಮಯ: ಬೆಳಗ್ಗೆ 9 ರಿಂದ ಅಪರಾಹ್ಣ 3 ಗಂಟೆಯವರೆಗೆ
ಸ್ಥಳ: ಶ್ರೀಭಾರತೀ ವಿದ್ಯಾಲಯ, ವಿಜಯನಗರ, ಬೆಂಗಳೂರು
ಆಸಕ್ತ , ಅರ್ಹ ರಕ್ತದಾನಿಗಳು ಅಲ್ಲಿ ಬಂದು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಸ್ಪಂದಿಸೋಣ.
🗒️ಕೆಳಗಿನ ಗೂಗಲ್ ಫಾರ್ಮ್ ಕೊಂಡಿ ಬಳಸಿ ತಮ್ಮ ಬರುವಿಕೆ ಖಚಿತಗೊಳಿಸಬಹುದು:
https://forms.gle/PAfeSdN39zRZh16m9
*ವಿಶೇಷ ಮನವಿ:* ರಕ್ತದಾನಿಗಳು ಮೊದಲೇ ಗೂಗಲ್ ಫಾರ್ಮ್ ನಲ್ಲಿ ನೋಂದಣಿ ಮಾಡಿದರೆ ಒಟ್ಟು ವ್ಯವಸ್ಥೆ ದೃಷ್ಟಿಯಿಂದ ಅನುಕೂಲವಾಗುವುದು.
✔️ಸ್ಥಳದಲ್ಲಿಯೇ ನೋಂದಣಿ ಮಾಡೊಕೊಳ್ಳುವ ವ್ಯವಸ್ಥೆ ಕೂಡಾ ಇರುತ್ತದೆ.