ಮಹಾಮಾರಿ ಕರೊನಾ ಹಿನ್ನಲೆಯಲ್ಲಿ ಮನೆಯಲ್ಲಿ ಇರಬೇಕಾದ ಪರಿಸ್ಥಿತಿಯಲ್ಲಿ ರಾಮನವಮಿಯನ್ನು ಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಆಚರಿಸಿದರು.
ಸಿದ್ದಾಪುರ ನಿವಾಸಿ ರಾಮಕೃಷ್ಣ ಹೆಗಡೆ ಮತ್ತು ರೇಖ ಆರ್ ಹೆಗಡೆ ದಂಪತಿಗಳ ಪುತ್ರ ರವೀಂದ್ರ ಆರ್. ಹೆಗಡೆ ರಾಮಸೇತು ನಿರ್ಮಾಣದ ಸಮಯ ಅಳಿಲು ಜೊತೆಗೆ ಶ್ರೀರಾಮನ ಚಿತ್ರ ಬಿಡಿಸಿದರು.
ಪೆಲತ್ತಡಿ ನಿವಾಸಿ ಗೋಪಾಲಕೃಷ್ಣ ಭಟ್ ಮತ್ತು ಸೌಮ್ಯ ಪ್ರಭಾ ದಂಪತಿಗಳ ಪುತ್ರಿ ೯ನೇ ತರಗತಿಯ ಶ್ರೀಲಕ್ಷ್ಮೀ ರಾಮನ ಚಿತ್ರ ಹಾಗೂ ಶ್ರೀರಾಮ ಹನುಮನ ಚಿತ್ರವನ್ನು ಬಿಡಿಸಿದರು.