ಬೆಂಗಳೂರು: ಚದುರಂಗ ಕ್ಷೇತ್ರದ ವಿಶೇಷ ಪ್ರತಿಭೆ, ಹೊನ್ನಾವರದ ಸಮರ್ಥ ಜಗದೀಶ ರಾವ್ ಗೆ ಗುರುವಾರ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಪ್ರತಿಭಾ ಪುರಸ್ಕಾರವನ್ನು ಅನುಗ್ರಹಿಸಿದರು.
ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದ ವಿಶ್ವಮಟ್ಟದ ಕಿರಿಯ ವಿಕಲ ಚೇತನರ ಚೆಸ್ ಚಾಂಪಿಯನ್ ಶಿಪ್‌ನ 7ಸುತ್ತಿನಲ್ಲಿ 5.5 ಅಂಕ ಗಳಿಸಿ, ದೈಹಿಕ ದುರ್ಬಲರ ವಿಭಾಗದಲ್ಲಿ ಸಮರ್ಥ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅನುಪಮ ಸಾಧನೆಗೈದಿದ್ದಾನೆ.
ಹೊನ್ನಾವರದ ಎಸ್.ಡಿ.ಎಂ ಕಾಲೇಜ್ ನಲ್ಲಿ 2ನೇ ಬಿ.ಕಾಮ್ ನಲ್ಲಿರುವ ಸಮರ್ಥ್ ಜಗದೀಶ್ ರಾವ್ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಎರಡನೇ ಬಾರಿ ಅಮೆರಿಕದಲ್ಲಿ ಹಾರಿಸಿದ್ದಾನೆ. ಚೆಸ್ ತರಬೇತುದಾರ ಅಜಿತ್. ಎಂ.ಪಿ. ಮೈಸೂರು ಇವರ ಶಿಷ್ಯನಾಗಿರುವ ಸಮರ್ಥ, ಈ ಮೊದಲು, ದಿ. ವಿ ಆರ್. ಶಾಸ್ತ್ರಿ ಹೊನ್ನಾವರ, ಪ್ರಸಾದ್ ಹೆಗ್ಡೆ ಸಿರ್ಸಿ, ವಿನಯ್ ಕುಮಾರ್ ಹಿರೇಮಠ ಸಿರ್ಸಿ, ಜ್ಯೋತಿ ಪ್ರಕಾಸಮ್ ಮಧುರೈ, ಶ್ರೀನಿಧಿ ಶ್ರೀಪತಿ ಚೆನ್ನೈ, ಸ್ವರಾಜ್ ಪಾಲಿಟ್ ಜಾರ್ಖಂಡ್, ಕಪಿಲ್ ಲೋಹಾನ್ ಪೂನಾ ಅವರ ಬಳಿ ಚೆಸ್ ತರಬೇತಿ ಪಡಿದಿರುತ್ತಾನೆ.
ಇವನು ಹೊನ್ನಾವರ ಮಂಡಲಾಂತರ್ಗತ ಹೊನ್ನಾವರ ವಲಯದ ಜಗದೀಶ ರಾವ್ ಹಾಗೂ ವಿನುತ ಭಟ್ ಇವರ ಸುಪುತ್ರ.