ಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು

ವಿದ್ಯಾಲಯ

ಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು
ವಿವೇಕಾನಂದ ರಸ್ತೆ 6ನೇ ಕ್ರಾಸ್,
ನಂತೂರು ಪದವು, ಮಂಗಳೂರು
ಫೋನ್ : 0824-2214062, 0824-2216464
ಮೊಬೈಲ್ : 9448622674, 6360519232, 9844936701
Email : info@shreebharathicollege.com

ಆತ್ಮೀಯ ಹೆತ್ತವರೇ, ಪೋಷಕರೇ, ವಿದ್ಯಾಭಿಮಾನಿಗಳೇ,

ನಮಸ್ಕಾರ, ಹರೇ ರಾಮ :
ನಮ್ಮ ಸಂಸ್ಥೆಯ ವಿಶೇಷತೆ ಬಗ್ಗೆ, ಇರುವ ಅವಕಾಶಗಳ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ದಯವಿಟ್ಟು ಪೂರ್ತಿಯಾಗಿ ಗಮನವಿಟ್ಟು ಓದಬೇಕಾಗಿ ವಿನಂತಿ.

ಶ್ರೀಗುರುಗಳ ಆಶೀರ್ವಾದವಿದೆ :
ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನ, ಸಂಪೂರ್ಣ ಕೃಪೆ, ಆಶೀರ್ವಾದ ಹಾಗೂ ಅನುಗ್ರಹಗಳೊಂದಿಗೆ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಇಲ್ಲಿ 8, 9, 10ನೇ ತರಗತಿ, ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಹಾಗೂ ಪದವಿ ಬಿಕಾಂ ಮತ್ತು ಬಿಸಿಎ ವಿಭಾಗಗಳಿವೆ. ಅತ್ಯುತ್ತಮ, ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗಳಿಂದ ಕೂಡಿದ ಶಿಕ್ಷಣ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಇಲ್ಲಿನ ವೈಶಿಷ್ಟ್ಯ.

ನಮ್ಮದೇ ಸಂಸ್ಥೆ :
ನಮ್ಮದೇ ಸಂಸ್ಥೆ, ನಮ್ಮ ಸಂಘಟನೆಗಳ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಮಂಗಳೂರು, ಉಪ್ಪಿನಂಗಡಿ ಹಾಗೂ ಮುಳ್ಳೇರಿಯ ಮಂಡಲಗಳ ಸಹಕಾರ, ಸಹಯೋಗ, ಸಹಭಾಗಿತ್ವ ಈ ಸಂಸ್ಥೆಯ ಶ್ರೇಯಸ್ಸಿಗೆ ಕಾರಣವಾಗಿದೆ.

ಅಚ್ಚುಮೆಚ್ಚಿನ ಶಿಕ್ಷಣ ಸಂಸ್ಥೆ:
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಣ ಸಂಸ್ಥೆಯಾಗಿದ್ದು ಉತ್ತಮ ಫಲಿತಾಂಶ ದಾಖಲಿಸಿದೆ. ನಗರ ಪ್ರದೇಶವಾಗಿದ್ದರೂ ಪ್ರಕೃತಿ ರಮಣೀಯ ಪರಿಸರದಲ್ಲಿದೆ. ಹೆಚ್ಚು ಶುಲ್ಕಭಾರವಿಲ್ಲದ, ಸುಂದರ ಆವರಣ, ಸುಸಜ್ಜಿತ ರಸ್ತೆ, ಸುಸಜ್ಜಿತ ಅನ್ನಶ್ರೀ ಅನ್ನಕುಟೀರ, ಸುಸಜ್ಜಿತ ಶಂಕರಶ್ರೀ ಸಭಾಭವನ ವಿದೆ. ಅನುಭವೀ ಹಾಗೂ ಯುವ ಉತ್ಸಾಹೀ ಬೋಧಕ ವೃಂದದವರ ಸಮ್ಮಿಲನ ಇಲ್ಲಿನ ವಿಶೇಷತೆ. ಆಯಾಯ ಕಾಲಕ್ಕನುಗುಣವಾಗಿ ಪರೀಕ್ಷೆ, ಅವಶ್ಯ ಕೋಚಿಂಗ್ ನೀಡಲಾಗುತ್ತಿದೆ.

ಎಲ್ಲರಿಗೂ ಅವಕಾಶ :
ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡಬೇಕೆಂಬ ಶ್ರೀಗುರುಗಳ ಆದೇಶ ಇಲ್ಲಿ ಪಾಲನೆಯಾಗುತ್ತಿದೆ. ಶೇ.90ಕ್ಕಿಂತ ಹೆಚ್ಚು ಅಂಕ ಪಡೆದವರು ಮಾತ್ರವಲ್ಲ, ಜಸ್ಟ್ ಪಾಸ್ ಆದವರನ್ನೂ ನಮ್ಮ ಸಂಸ್ಥೆಗೆ ಸೇರ್ಪಡೆಗೊಳಿಸಿದಲ್ಲಿ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ ಶ್ರೇಷ್ಠ ವಿದ್ಯಾಭ್ಯಾಸ ಒದಗಿಸಲಾಗುತ್ತದೆ. ಅಂದರೆ ಎಲ್ಲ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶವಿದೆ.

ಹೆತ್ತವರಿಗೆ ಮೆಸ್ಸೇಜ್ :
ನಮ್ಮ ಸಂಸ್ಥೆಯ ಹೈಸ್ಕೂಲ್ ಮತ್ತು ಪಿಯುಸಿ ವಿಭಾಗದ ವಿದ್ಯಾರ್ಥಿಗಳ ಹೆತ್ತವರಿಗೆ ಮೊಬೈಲ್ ಮೆಸ್ಸೇಜ್ ಕಳುಹಿಸುವ ಸೌಲಭ್ಯವಿದೆ. ಡಿಗ್ರಿ ಮಕ್ಕಳ ಹೆತ್ತವರಿಗೆ ವಾಟ್ಸಾಪ್ ಮೆಸ್ಸೇಜ್ ಕಳುಹಿಸುವ ವ್ಯವಸ್ಥೆಯಿದೆ. ಆ ಮೂಲಕ ಪರೀಕ್ಷೆ ಫಲಿತಾಂಶ ಇತ್ಯಾದಿಗಳು ನೇರವಾಗಿ ಹೆತ್ತವರನ್ನು ತಲುಪಿಸಲಾಗುತ್ತದೆ.

ಕಂಪ್ಯೂಟರ್ ಲ್ಯಾಬ್ :
40ಕ್ಕೂ ಅಧಿಕ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಕೆಮಿಸ್ಟ್ರಿ, ಫಿಸಿಕ್ಸ್ ಲ್ಯಾಬ್ ಗಳಿವೆ. ಸುಸಜ್ಜಿತ ಗ್ರಂಥಾಲಯವಿದೆ. ವಿಶಾಲ ತರಗತಿ ಕೊಠಡಿಗಳು, ವಿಶಾಲ ಮೈದಾನಗಳಿವೆ.

ಎಲ್ಲವೂ ಇದೆ :
ಇಲ್ಲಿ ಎನ್ನೆಸ್ಸೆಸ್, ರೇಂಜರ್ಸ್, ರೋವರ್ಸ್, ಸ್ಕೌಟ್ಸ್, ಗೈಡ್ಸ್, ವಿದ್ಯಾರ್ಥಿ ಸಂಘ, ರೆಡ್ ಕ್ರಾಸ್ ಇತ್ಯಾದಿಗಳಿವೆ. ಕಲ್ಚರಲ್ ಮತ್ತು ಸ್ಪೋರ್ಟ್ಸ್ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಅಂತರ್ ಕಾಲೇಜು, ಅಂತರ್ ಜಿಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ತಂಡ ಜಿಲ್ಲಾ ಮಟ್ಟಕ್ಕೇರಿದೆ.

ಓದುವ ವಾತಾವರಣಕ್ಕೆ ಪೂರಕ :
ಪಾರದರ್ಶಕ ಆಡಳಿತ ಮಂಡಳಿ, ಪ್ರಾಮಾಣಿಕ ಬೋಧಕ – ಬೋಧಕೇತರ ವೃಂದ, ಸ್ವಚ್ಛ ಹಾಗೂ ಸುರಕ್ಷಿತ ಆವರಣ, 60ಕ್ಕೂ ಅಧಿಕ ತೆಂಗಿನಮರ, ಗೋಶಾಲೆ, ನಕ್ಷತ್ರ ವನ ಇತ್ಯಾದಿಗಳೆಲ್ಲವೂ ಓದುವುದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಲೋಕಕಲ್ಯಾಣಕ್ಕಾಗಿ ಸಂಸ್ಥೆಯ ಏಳಿಗೆಗಾಗಿ ಬೋಧಕ ಬೋಧಕೇತರ ವಿದ್ಯಾರ್ಥಿ ವೃಂದದ ಕ್ಷೇಮಕ್ಕಾಗಿ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳೂ ನಡೆಯುತ್ತಿವೆ.

ಶುಲ್ಕ :
ಖಾಸಗಿ, ಅನುದಾನಿತ, ಅನುದಾನರಹಿತ ವಿದ್ಯಾಸಂಸ್ಥೆ ಅಂದ ಕೂಡಲೇ ಶುಲ್ಕ ಹೆಚ್ಚು ಎಂದು ಸಾಮಾನ್ಯವಾಗಿ ಆರೋಪಿಸಲಾಗುತ್ತದೆ. ಆದರೆ ಇಲ್ಲಿ ಸರಕಾರಿ ಶಾಲೆ, ಸರಕಾರಿ ಕಾಲೇಜುಗಳಲ್ಲಿನ ಶುಲ್ಕಕ್ಕಿಂತ ಭಿನ್ನವಾಗಿಲ್ಲ. ಆದುದರಿಂದ ಬೇರೆ ಶಿಕ್ಷಣ ಸಂಸ್ಥೆಯನ್ನು ಹುಡುಕಬೇಕಾಗಿಲ್ಲ. ನಮ್ಮ ಶ್ರೀ ಭಾರತೀ ಸಮೂಹ ಸಂಸ್ಥೆಯನ್ನೇ ಆಯ್ಕೆ ಮಾಡಬಹುದು.

ಸ್ಟೇಶನರಿ, ಗೋಉತ್ಪನ್ನಗಳು ಇವೆ :

ಈಗ ಅತ್ಯಂತ ಸುಂದರವಾದ ಅನ್ನಶ್ರೀ ಅನ್ನಕುಟೀರ (ಕ್ಯಾಂಟೀನ್) ನಿರ್ಮಾಣವಾಗಿದೆ. ಅಲ್ಲಿ ಸ್ಟೇಶನರಿ, ಗೋಉತ್ಪನ್ನಗಳು, ಗ್ರಾಮರಾಜ್ಯದ ಉತ್ಪನ್ನಗಳು ಸಿಗಲಿವೆ. ಸಂಪೂರ್ಣ ಸುಭದ್ರವಾದ ಆವರಣದಲ್ಲಿ ಎಲ್ಲವೂ ಸಿಗಲಿರುವುದು ಮತ್ತೊಂದು ವಿಶೇಷತೆ.

ಆದುದರಿಂದ ಎಲ್ಲ ಹೆತ್ತವರೂ ಪೋಷಕರೂ ನಮ್ಮ ಶ್ರೀ ಭಾರತೀ ಸಮೂಹ ಸಂಸ್ಥೆಗೆ ಮಕ್ಕಳನ್ನು ಕಳುಹಿಸಿ, ನಿಶ್ಚಿಂತೆಯಿಂದಿರಿ. ನಮ್ಮ ಸಂಸ್ಥೆಯನ್ನು ಬೆಂಬಲಿಸಿರಿ. ಸಂಸ್ಥೆಯೂ ಬೆಳೆಯಲಿ. ವಿದ್ಯಾರ್ಥಿಗಳಿಗೂ ಶ್ರೇಯಸ್ಸಾಗಲಿ ಎಂದು ಹಾರೈಸುತ್ತೇವೆ. ನಿಮ್ಮೆಲ್ಲರ ಸ್ಪಂದನದ ನಿರೀಕ್ಷೆಯಲ್ಲಿ ನಾವಿದ್ದೇವೆ.

ವಿಷ್ಣುಗುಪ್ತ ವಿಶ್ವವಿದ್ಯಾಪೀಠ :

ಶ್ರೀಗುರುಗಳ ಮಾರ್ಗದರ್ಶನದಲ್ಲಿ ಗೋಕರ್ಣದ ಅಶೋಕೆಯಲ್ಲಿ ಸ್ಥಾಪನೆಯಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ವಸತಿ ವ್ಯವಸ್ಥೆ ಸಹಿತ ಗುರುಕುಲ ಪದ್ಧತಿಯ ಶಿಕ್ಷಣ ಅವಶ್ಯವೆಂದರೆ ಅದಕ್ಕೆ ಸೇರ್ಪಡೆಗೊಳಿಸುವ ಅನುಕೂಲವೂ ಅವಕಾಶವೂ ಇದೆ.

Author Details


Srimukha

Leave a Reply

Your email address will not be published. Required fields are marked *