ವಿವಿವಿಯಲ್ಲಿ ಎರಡು ದಿನಗಳ ಸಂಗೀತೋತ್ಸವಕ್ಕೆ ತೆರೆ ಸಂಗೀತ ಮೋಕ್ಷಕ್ಕೆ ಸಾಧನ: ರಾಘವೇಶ್ವರ ಶ್ರೀ

ವಿದ್ಯಾಲಯ

ಗೋಕರ್ಣ: ಸಂಗೀತ ಮೋಕ್ಷಕ್ಕೆ ಸಾಧನ; ಇದು ಕೇವಲ ಮನಸ್ಸಿಗೆ ಮುದನೀಡುವ ಸಾಧನವಲ್ಲ. ಸಂಗೀತದ ಮೂಲಕ ಜನತೆ ಮತ್ತು ಜನಾರ್ದನನನ್ನು ಕೂಡಾ ಮೆಚ್ಚಿಸಬಹುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು,
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಂಗೀತೋತ್ಸವದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, “ಸಂಗೀತ ಮೋಕ್ಷಕ್ಕೆ ಸಾಧನ ಎಂದು ಯಾಜ್ಞವಲ್ಕ್ಯ ಸ್ಮøತಿಯಲ್ಲಿ ಹೇಳಲಾಗಿದೆ. ಆದ್ದರಿಂದ ಸಂಗೀತ ಕೇವಲ ಮನೋರಂಜನೆಯಲ್ಲ ಸಾಧನವಲ್ಲ. ಜನರನ್ನು ಮಾತ್ರವಲ್ಲದೇ ಇದರಿಂದ ಜನಾರ್ದನನ್ನೂ ಮೆಚ್ಚಿಸಬಹುದು. ವಿದ್ಯಾರ್ಥಿಗಳು ಮೇರು ಕಲಾವಿದರಿಂದ ಸ್ಫೂರ್ತಿ ಪಡೆದು ಇಂಥ ಅಪೂರ್ವ ಭಾರತೀಯ ಕಲಾಪ್ರಕಾರವನ್ನು ಸಿದ್ಧಿಸಿಕೊಳ್ಳಬೇಕು” ಎಂದು ಸಲಹೆ ಮಾಡಿದರು.
ವಿದ್ಯಾರ್ಥಿಗಳು ಕೇವಲ ಆಧುನಿಕ ವಿದ್ಯೆಗಳನ್ನು ಕಲಿತರೆ ಸಾಲದು. ಪಾರಂಪರಿಕವಾದ ಕಲೆಗಳನ್ನೂ ಅಭ್ಯಾಸ ಮಾಡಬೇಕು, ಭಾರತೀಯ ವಿದ್ಯೆ ಮತ್ತು ಕಲೆಗಳನ್ನು ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡುವ ಸದುದ್ದೇಶದಿಂದ ವಿದ್ಯಾರ್ಥಿಗಳೇ ಸಂಗೀತ ಕಾರ್ಯಕ್ರವನ್ನು ಕೇಳಿ, ಅದರ ಮೂಲಕ ತಮಗೆ ಬೇಕಾದ ವ್ಯಾದ್ಯಪ್ರಕಾರಗಳನ್ನು ಆಯ್ಕೆಯ ಮಾಡುವ ದೃಷ್ಟಿಯಿಂದ ಇಂಥ ಸಂಗೀತೋತ್ಸವ ಆಯೋಜಿಸಿರುವುದು ಅರ್ಥಪೂರ್ಣ ಎಂದು ಸ್ವಾಮೀಜಿ ನುಡಿದರು.
ಸಂಗೀತೋತ್ಸವದ ಎರಡನೇ ದಿನವಾದ ಗುರುವಾರ ಹಿಂದೂಸ್ತಾನಿ ಸಂಗೀತದ ವೈವಿಧ್ಯಮಯ ಪ್ರಕಾರಗಳು ಪ್ರಸ್ತುತಗೊಂಡವು. ಪಂಡಿತ ಪರಮೇಶ್ವರ ಹೆಗಡೆ, ಡಾ.ಅಶೋಕ ಹುಗ್ಗಣ್ಣವರ್, ವಿದ್ವಾನ್ ವಿಶ್ವೇಶ್ವರ ಭಟ್ ಖರ್ವ, ವಿದ್ವಾನ್ ಶ್ರೀಧರ ಹೆಗಡೆ ಅವರ ಗಾಯನ, ಪ್ರೊ.ರಾಮಚಂದ್ರ ವಿ.ಹೆಗಡೆ ಹಳ್ಳದಕೈ ಅವರಿಂದ ರುದ್ರವೀಣಾ, ಗೋಪಾಲಕೃಷ್ಣ ಹೆಗಡೆ ಮತ್ತು ಡಾ.ಉದಯ ಕುಲಕರ್ಣಿಯವರಿಂದ ತಬಲಾ ವಾದನ, ರಾಮಕೃಷ್ಣ ಹೆಗಡೆಯವರ ಸಿತಾರ್, ಸುಧೀರ್ ಹೆಗಡೆವರ ಬಾನ್ಸುರಿ, ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ (ಸೂರಿ) ಅವರಿಂದ ಹಾರ್ಮೋನಿಯಂ ವಾದನ ಸಂಗೀತ ರಸಿಕರಿಗೆ ರಸದೌತಣ ಒದಗಿಸಿದವು. ವಿವಿಧ ವಾದ್ಯಗಳೂ ಹೇಗೆ ಸಂಗೀತದಲ್ಲಿ ಬಳಕೆಯಾಗುತ್ತದೆ ಎನ್ನುವುದು ಪ್ರತ್ಯಕ್ಷವಾಗಿ ಮಕ್ಕಳಿಗೆ ತೋರಿಸಿಕೊಡಲಾಯಿತು.
ಕರ್ನಾಟಕ ಸಂಗೀತ ಕಾರ್ಯಕ್ರಮದ ನಿರ್ದೇಶಕರೂ, ವಿವಿವಿಯ ಕರ್ನಾಟಕ ಸಂಗೀತವಿಭಾಧ್ಯಕ್ಷರೂ ಆದ ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ, ಗುರುಕುಲದ ವರಿಷ್ಠಾಚಾರ್ಯರಾದ ವಿದ್ವಾನ್ ಸತ್ಯನಾರಾಯಣ ಶರ್ಮ, ಗುರುಕುಲದ ಕರ್ನಾಟಕ ಸಂಗೀತದ ಆಚಾರ್ಯರಾದ ವಿದ್ವಾನ್ ರಘುನಂದನ ಬೇರ್ಕಡವು, ಪ್ರಾಂಶುಪಾಲರಾದ ಮಹೇಶ್ ಹೊನ್ನಾವರ ಮತ್ತಿತರರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *