ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ
‘ನಾನು’ ಹೋಗಬೇಕು
ಶ್ರದ್ಧಾವಂತ ಭಕ್ತನೊಬ್ಬ ಒಮ್ಮೆ ದೇವರ ಮನೆಯ ಬಾಗಿಲನ್ನು ತಟ್ಟುತ್ತಾನೆ. ಒಳಗಿನಿಂದ “ಯಾರು?” ಎಂಬ ಧ್ವನಿ ಬರುತ್ತದೆ. ಭಕ್ತ “ನಾನು” ಎನ್ನುತ್ತಾನೆ. ಬಾಗಿಲು ತೆರೆಯುವುದಿಲ್ಲ. ಭಕ್ತ ಹಿಂತಿರುಗಿ ಬಂದು ಘೋರವಾದ ತಪಸ್ಸು ಮಾಡುತ್ತಾನೆ. ತಪಸ್ಸಿನಿಂದ ಅವನಿಗೆ ಜ್ಞಾನೋದಯವಾಗುತ್ತದೆ. ಅನಂತರ ಅವನು ದೇವರ ಮನೆಗೆ ಹೋಗಿ ಬಾಗಿಲು ತಟ್ಟುತ್ತಾನೆ. ಒಳಗಿನಿಂದ ಅದೇ ಧ್ವನಿ “ಯಾರು?” ಎಂದು ಬರುತ್ತದೆ. ಜ್ಞಾನಿಯಾದ ಭಕ್ತ ಹೇಳುತ್ತಾನೆ “ನೀನೇ!” ಆಗ ದೇವರು ಬಾಗಿಲು ತೆಗೆದು ದರ್ಶನ ನೀಡುತ್ತಾನೆ.
ಆದ್ದರಿಂದ ‘ನಾನು’ ಎಂಬ ‘ಅಹಂ’ ಹೋಗಿ ‘ನೀನು’ ಎಂಬ ಭಾವನೆ ಬೆಳೆದಾಗ ಪರಮಾತ್ಮನ ದರ್ಶನವಾಗುತ್ತದೆ.