ಮಾತು~ಮುತ್ತು : ಪ್ರೀತಿ ಇದ್ದಲ್ಲಿ ನೋವು ಇರುತ್ತದೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

ಅವನು ಒಬ್ಬ ಯುವಕ. ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ. ಅವನು ಅವಳನ್ನು ತುಂಬ ಹಚ್ಚಿಕೊಂಡಿದ್ದ. ಅವಳಲ್ಲದೇ ಬದುಕೇ ಇಲ್ಲ ಎಂದುಕೊಂಡಿದ್ದ. ಆದರೆ ಇವನ ಪ್ರೀತಿಯನ್ನು ತಿರಸ್ಕರಿಸಿ ಆ ಯುವತಿ ಬೇರೆಯೊಬ್ಬನನ್ನು ಇಷ್ಟಪಡುತ್ತಿರುತ್ತಾಳೆ. ಆದರೆ ಆ ಬೇರೊಬ್ಬ ಯುವಕ ಇವಳನ್ನು ಇಷ್ಟಪಡದೇ ಇನ್ನೊಬ್ಬಳ ಬಗ್ಗೆ ಆಸಕ್ತಿ ಹೊಂದಿದ್ದ. ಹೀಗಿರುವಾಗ ಎಲ್ಲರಿಗೂ ಪ್ರೀತಿಯಿಂದ ನೋವೇ ಉಂಟಾಗುತ್ತದೆ.

 

ಜೀವನದಲ್ಲಿ ನೋವು ಇಲ್ಲದೇ ಇರುವ ಪ್ರೀತಿಯೆಂದರೆ ಭಗವಂತನಲ್ಲಿ ಇರುವ ಪ್ರೀತಿ ಮಾತ್ರ. ಅಲ್ಲಿ ಯಾವ ನೋವು ಇಲ್ಲ. ಜೀವನದಲ್ಲಿ ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರಿಂದ ಅಪಾರವಾದ ನೋವು ಉಂಟಾಗಬಹುದು. ಆದರೆ ಅದನ್ನು ಸಹಿಸಿಕೊಳ್ಳಲೇ ಬೇಕು. ಪ್ರೀತಿಯೆಂದರೆ ತ್ಯಾಗ. ತ್ಯಾಗದಲ್ಲಿ ನಿಜವಾದ ಪ್ರೀತಿ ಇದೆ. ನೋವಿಲ್ಲದ ಪ್ರೀತಿ ಈ ಜಗತ್ತಿನಲ್ಲಿ ಇಲ್ಲ.  ಆದರೆ ನೋವಾಗುತ್ತದೆ, ತ್ಯಾಗ ಮಾಡಬೇಕಾಗುತ್ತದೆ ಎಂದು ಪ್ರೀತಿಯಿಂದ ವಂಚಿತರಾಗಬಾರದು. ಈ ಜಗತ್ತನ್ನು ಮತ್ತು ಆ ದಯಾಮಯನಾದ ಭಗವಂತನನ್ನು ಪ್ರೀತಿಸೋಣ ಮತ್ತು ಅದರಿಂದ ಧನ್ಯತೆಯನ್ನು ಪಡೆಯೋಣ.

Leave a Reply

Your email address will not be published. Required fields are marked *