ಶ್ರೀ ಭಾರತೀ ವಿದ್ಯಾಲಯದಲ್ಲಿ ಸಂಸ್ಕೃತೋತ್ಸವ ಸಮಾರೋಪ ಸಮಾರಂಭ

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಸಂಸ್ಕೃತದ ಕುರಿತು ಒಲವು ಮೂಡಿಸುವ ಹಾಗೂ ಭಾಷೆಯ ವ್ಯಾಪಕ ಬಳಕೆಗೆ ಪೂರಕ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಶ್ರೀ ಭಾರತೀ ವಿದ್ಯಾಲಯದಲ್ಲಿ ಒಂದು ವಾರಗಳ ಕಾಲ ನಡೆದ ಸಂಸ್ಕೃತೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು.   ಸಮಾರೋಪ ಸಮಾರಂಭಕ್ಕೆ ಗುರುವಂದನೆ ಹಾಗೂ ದೀಪೋಜ್ವಲನದ ಮೂಲಕ ಚಾಲನೆ‌ ನೀಡಲಾಯಿತು. ಅಲ್ಲದೇ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.   ಶಾಲೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀಮತಿ ಡಾ. ಶಾರದಾ ಜಯಗೋವಿಂದ್ ಇವರು ಉಪಸ್ಥಿತರಿದ್ದರು. […]

Continue Reading

ಶ್ರೀಭಾರತೀವಿದ್ಯಾಲಯಕ್ಕೆ ಪುಸ್ತಕ ಕೊಡುಗೆ: ಸಾವಿರಾರು ರೂಪಾಯಿ‌‌ ಮೌಲ್ಯದ ಪುಸ್ತಕ ಕೊಡುಗೆ ನೀಡಿದ ಶ್ರೀಮತಿ ಡಾ.ಶಾರದಾ ಜಯಗೋವಿಂದ

ಬೆಂಗಳೂರು: ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು‌ ಬೆಳೆಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ಗೋಸ್ವರ್ಗ ಚಾತುರ್ಮಾಸ್ಯ ಪ್ರಶಸ್ತಿ ಪುರಸ್ಕೃತರೂ, ಶಿಕ್ಷಣ ತಜ್ಞರೂ ಆದ ಶ್ರೀಮತಿ ಡಾ. ಶಾರದಾ ಜಯಗೋವಿಂದ ಇಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ 163 ಪುಸ್ತಕವನ್ನು ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯಕ್ಕೆ‌ ಕೊಡುಗೆಯಾಗಿ ನೀಡಿದ್ದಾರೆ.   ಉತ್ತಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಶ್ರೀಮತಿ ಡಾ. ಶಾರದಾ ಜಯಗೋವಿಂದ್ ಅವರು ವಿದ್ಯಾರ್ಥಿಗಳಿಗೆ‌ ಈ ಪುಸ್ತಕಗಳನ್ನು‌ ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವಂತೆ‌ ಕರೆ‌ […]

Continue Reading

ವಿಶಿಷ್ಟವಾಗಿ ಮಕ್ಕಳ‌ ದಿನಾಚರಣೆ ಆಚರಿಸಿದ ಶ್ರೀಭಾರತೀವಿದ್ಯಾಪೀಠ: ಸಂಭ್ರಮಿಸಿದ ವಿದ್ಯಾರ್ಥಿಗಳು

ಮುಜುಂಗಾವು: ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಶ್ರೀಭಾರತೀ ವಿದ್ಯಾಪೀಠ ಮುಜುಂಗಾವಿನಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು.   ಮಕ್ಕಳ‌ ದಿನಾಚರಣೆಯಂದು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ pic and act ಮತ್ತು pic and speech ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಚೀಟಿ ಆಯ್ದುಕೊಂಡು ತಮಗೆ ಬಂದ ವಿಷಯದ ಕುರಿತು ಅಭಿನಯ ಹಾಗೂ ಭಾಷಣ ಪ್ರಸ್ತುತಪಡಿಸಿದರು.   ಬಳಿಕ‌ ನಡೆದ‌‌ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಶ್ರೀ ಶ್ಯಾಂಭಟ್ ದರ್ಬೆಮಾರ್ಗ ಮಾತನಾಡಿ, ಮಕ್ಕಳ ದಿನಾಚರಣೆಯ ಮಹತ್ತ್ವ ಹಾಗೂ ಮಕ್ಕಳ‌ […]

Continue Reading

ಮೂರೂರು ಪ್ರಗತಿ ವಿದ್ಯಾಲಯದಲ್ಲಿ‌ ಮಕ್ಕಳ ದಿನಾಚರಣೆ: ಮಾನವೀಯ ಮೌಲ್ಯ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕಿವಿಮಾತು

ಮೂರೂರು: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ನವೆಂಬರ್ 14ರಂದು ಮಕ್ಕಳ‌ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.   ಮಕ್ಕ‌ಳ‌ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವೈವಿಧ್ಯಮಯ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ‌ ಮುಖ್ಯ ಗುರುಗಳಾದ ಶ್ರೀ‌ ಎಮ್.ಜಿ. ಭಟ್ ಮಾತನಾಡಿ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ‌ ಸೌಂದರ್ಯ ಬೆಳೆಸಿಕೊಳ್ಳಿ.‌ ಮಾನವೀಯ ಮೌಲ್ಯಗಳೊಂದಿಗೆ ಸರ್ವತೋಮುಖವಾಗಿ ಅಧ್ಯಯನದಲ್ಲಿ ಪ್ರಗತಿ ಹೊಂದಿ ಸಾಧಕರಾಗಿ ಎಂದು ಕರೆ ನೀಡಿದರು.   ಅಲ್ಲದೇ ಎಸ್. ಎಸ್. ಎಲ್. ಸಿ. ಮಕ್ಕಳಿಗೆ ಶಾಲೆಯ […]

Continue Reading

ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಗೆ ಛದ್ಮವೇಷದ ಮೆರುಗು

ಬೆಂಗಳೂರು: ನವೆಂಬರ್ 14ರ ಮಕ್ಕಳ‌ ದಿನಾಚರಣೆಯನ್ನು ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಛದ್ಮವೇಷ ಸ್ಪರ್ಧೆಯೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು.   ಮಕ್ಕಳು ಭೂಮಿ, ನೀರು, ಪರಿಸರ, ಭೀಮ, ಶ್ರೀಕೃಷ್ಣ, ರಾಧೆ, ದಾಸರು, ವಾಟ್ಸಪ್ ಹೀಗೆ ವಿವಿಧ ವೇಷ ಧರಿಸಿ ಬಂದು ರಂಜಿಸಿದರು.   ವಿದ್ಯಾರ್ಥಿಗಳಿಗಾಗಿ ಆಟೋಟಗಳು, ಸಂಗೀತ, ಹಿತನುಡಿ ಸೇರಿದಂತೆ ವಿವಿಧ ಸಾಂಸ್ಕೃತಿಕ‌ ಚಟುವಟಿಕೆಗಳನ್ನು ಕೂಡ ಏರ್ಪಡಿಸಲಾಗಿತ್ತು.   ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞೆ ಶ್ರೀಮತಿ ಡಾ.ಶಾರದಾ ಜಯಗೋವಿಂದ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ‌ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

Continue Reading

ಸಂಸ್ಕೃತ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀಭಾರತೀ ವಿದ್ಯಾಲಯದಲ್ಲಿ ಸಂಸ್ಕೃತೋತ್ಸವ

ಬೆಂಗಳೂರು: ಸಂಸ್ಕೃತ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ವಿದ್ಯಾರ್ಥಿಗಳಿಗೆ ಸಂಸ್ಕೃ ತದ ಮಹತ್ತವ ತಿಳಿಸುವ ಉದ್ದೇಶದಿಂದ ಶ್ರೀಭಾರತೀ ವಿದ್ಯಾಲಯವು ಸಂಸ್ಕೃತೋತ್ಸವವನ್ನು ಆಯೋಜಿಸಿದೆ.   ಸಂಸ್ಕೃತ ಅಧ್ಯಯನ‌ದ ಮೂಲಕ ಭಾರತೀಯ ಪರಂಪರೆಯನ್ನು ಜನಮಾನಸದಲ್ಲಿ ಉಳಿಸುವುದು ಹಾಗೂ ಬೆಳೆಸುವುದು, ನವೆಂಬರ್ 13ರಂದು ಆರಂಭವಾಗಿರುವ 17ರ ವರೆಗೆ ನಡೆಯಲಿರುವ, ಈ ಸಂಸ್ಕೃತೋತ್ಸವದ ಉದ್ದೇಶವಾಗಿದೆ. ಸಂಸ್ಕೃತೋತ್ಸವದ ಅಂಗವಾಗಿ ಶ್ರೀಭಾರತೀ ವಿದ್ಯಾಲಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.

Continue Reading

ಶ್ರೀಭಾರತೀ ವಿದ್ಯಾಲಯದಲ್ಲಿ ಮೂರು ದಿನಗಳ ಜಿಲ್ಲಾ ಸ್ಕೌಟ್‌‌ ಮತ್ತು ಗೈಡ್ಸ್ ಶಿಬಿರ‌ ಯಶಸ್ವಿಯಾಗಿ ಸಂಪನ್ನ

ಬದಿಯಡ್ಕ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಮೂರು ದಿನಗಳ ಕಾಲ ಕಾಸರಗೋಡು ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ ನಡೆಯಿತು. ಶಿಬಿರದ ಮೂರನೇ ದಿನವಾದ ಭಾನುವಾರ ರಾಷ್ಟ್ರದ ಇತಿಹಾಸ, ಪರಂಪರೆಗಳ ಪ್ರದರ್ಶನಗಳು ನಡೆದವು. ಮಂಜೇಶ್ವರ ಉಪಜಿಲ್ಲಾವಿದ್ಯಾಧಿಕಾರಿ ಶ್ರೀ ದಿನೇಶ್ ವಿ. ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸದಸ್ಯ ಶ್ರೀ ಹರೀಶ್ ಗಟ್ಟಿ ಪ್ರದರ್ಶನ ಉದ್ಘಾಟಿಸಿದರು. ಶಿಕ್ಷಣ ತಜ್ಞ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಶ್ರೀ ವಿ.ಬಿ. ಕುಳಮರ್ವ ಉಪಸ್ಥಿತರಿದ್ದರು.   ಆ ಬಳಿಕ‌ ಶಿಬಿರದ ಜರುಗಿದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಮಂಜೇಶ್ವರ […]

Continue Reading

ಹವ್ಯಕ ಮಹಾಮಂಡಲದ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ: ವಿವಿಧ ಮಂಡಲಗಳಲ್ಲಿ ಚೆಕ್ ವಿತರಣೆ

ವಿದ್ಯಾಭ್ಯಾಸ ನಡೆಸಲು ಆರ್ಥಿಕ ತೊಂದರೆ ಎದುರಿಸುತ್ತಿರುವ ಶ್ರೀಮಠದ ಶಿಷ್ಯರ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರೀ ರಾಮಚಂದ್ರಾಪುರ ಮಠ ಪ್ರತಿ ವರ್ಷದಂತೆ ಈ ವರ್ಷವೂ, 2018-19 ನೇ ಸಾಲಿನ ಅರ್ಹ 221 ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ₹9,36,000ಗಳನ್ನು ಮಂಜೂರುಗೊಳಿಸಿದೆ.   ದಿನಾಂಕ 11.11.2018ನೆಯ ಭಾನುವಾರದಂದು ಮಹಾಮಂಡಲದ ಏಳು ಮಂಡಲಗಳಲ್ಲಿ ಆರ್ಥಿಕ ಸಹಾಯಧನವನ್ನು ಚೆಕ್ ಮೂಲಕ ವಿತರಣೆ ಮಾಡಲಾಯಿತು. ಕುಮಟಾ, ಹೊನ್ನಾವರ, ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯ, ಉತ್ತರ ಬೆಂಗಳೂರು, ದಕ್ಷಿಣ ಬೆಂಗಳೂರು ಮಂಡಲಗಳ ಒಟ್ಟು 173 ವಿದ್ಯಾರ್ಥಿಗಳಿಗೆ ₹6,70,000ಗಳ ಸಹಾಯಧನ […]

Continue Reading

ಹವ್ಯಕ ಮಂಡಲ ಕುಮಟ ವತಿಯಿಂದ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ

ಕುಮಟಾ: ಕುಮಟಾ ಹವ್ಯಕ ಮಂಡಲದ ವತಿಯಿಂದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯ ಯೋಜನೆಯ ಚೆಕ್ ವಿತರಣೆ ಕಾರ್ಯಕ್ರಮವು ನಡೆಯಿತು. ಕೆಕ್ಕಾರಿನ ಶ್ರೀ ರಘೋತ್ತಮ ಮಠದಲ್ಲಿ‌ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಗಣೇಶ ಹೆಗಡೆ ಪ್ರಾಸ್ತಾವಿಕವಾಗಿ ಶ್ರೀಪೀಠದ ಶಿಷ್ಯಕಳಕಳಿ, ಭಕ್ತವಾತ್ಸಲ್ಯ, ಸಮಾಜ ಮುಖಿ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಬಳಿಕ ಮಂಡಲದ ಅಧ್ಯಕ್ಷರಾದ ಶ್ರೀ ಮಂಜುನಾಥ ಸುವರ್ಣಗದ್ದೆ ಇವರು ಮಾತನಾಡಿ, ವಿದ್ಯಾ ಸಹಾಯವು ಸಮಾಜ ನಿಮ್ಮೊಂದಿಗಿದೆ ಎಂಬುದರ ಸಂಕೇತವಾಗಿದೆ ಎಂದರು. ಇದರೊಂದಿಗೆ ವಿದ್ಯಾರ್ಥಿಗಳ ಭ್ರಮಾಲೋಕ, ಹವ್ಯಕರ ಸಂಖ್ಯೆಯ ಕಳವಳಕಾರಿ ಸ್ಥಿತಿ, […]

Continue Reading

ಶ್ರೀಸಂಸ್ಥಾನದವರಿಂದ ವಿದ್ಯಾ ಸಹಾಯ ಸ್ವೀಕರಿಸಿದ ವಿದ್ಯಾರ್ಥಿಗಳು

ಬೆಂಗಳೂರು: ಬೆಂಗಳೂರು ಉತ್ತರ ಮತ್ತು ದಕ್ಷಿಣ ಮಂಡಲದ ಮೂರು ವಿದ್ಯಾರ್ಥಿಗಳು ಇಂದು ವಿದ್ಯಾ ಸಹಾಯವನ್ನು ಶ್ರೀಸಂಸ್ಥಾನದವರ ಅಮೃತ ಕರಕಮಲಗಳಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಬೆಂಗಳೂರು ಮಂಡಲದ ಅಧ್ಯಕ್ಷರಾದ ಶ್ರೀ ವೈ.ಕೆ.ಎನ್. ಶರ್ಮ, ಕಾರ್ಯದರ್ಶಿಗಳಾದ ಶ್ರೀ ಶ್ರೀಕಾಂತ ಹೆಗಡೆ ಅಂತರವಳ್ಳಿ, ವಿದ್ಯಾರ್ಥಿವಾಹಿನೀ ಪ್ರಧಾನ ಶ್ರೀಮತಿ ಅಶ್ವಿನಿ ಅರವಿಂದ, ಉತ್ತರ ಬೆಂಗಳೂರು ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಶ್ರೀಮತಿ ಸಂಧ್ಯಾ ಕಾನತ್ತೂರು ಉಪಸ್ಥಿತರಿದ್ದರು. ವಿದ್ಯಾಸಹಾಯ ವಿತರಣೆಗೂ ಮುನ್ನ, ಮಹಾಮಂಡಲದ ಸೂಚನೆಯಂತೆ ವಿದ್ಯಾರ್ಥಿಗಳಿಗೆ ಶ್ರೀಮಠದ ಪರಿಚಯ, ವಿದ್ಯಾರ್ಥಿಗಳಿಗಿರುವ ಸೇವಾವಕಾಶ, ಇರಬೇಕಾದ ಬದ್ಧತೆ, […]

Continue Reading

ಗೋಸ್ವರ್ಗದಲ್ಲಿ ಗವ್ಯೋತ್ಪನ್ನ ತರಬೇತಿ ಶಿಬಿರ

ಸಾವಿರದ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ, ಸಪ್ತದೇವತೆಗಳ ಸನ್ನಿಧಿಯಾದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಸ್ವರ್ಗದಲ್ಲಿ ಕರ್ನಾಟಕ ರಾಜ್ಯ ಗೋಪರಿವಾರದ ಆಶ್ರಯದಲ್ಲಿ ನವೆಂಬರ್ 23,24,25 ರಂದು ಗವ್ಯೋತ್ಪನ್ನಗಳ ತಯಾರಿಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರ ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಗೋಮಯ, ಗೋಮೂತ್ರ ಸೇರಿದಂತೆ ಆರೋಗ್ಯ, ಕೃಷಿ, ಪರಿಸರದ ಸಮೃದ್ಧಿಗೆ ಸಹಕಾರವಾಗುವ ವಿವಿಧ ಗವ್ಯೋತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿಕೆಯ ಜೊತೆ ತರಬೇತಿ ನೀಡಲಾಗುವುದು. ಮೂರು ದಿನಗಳ ವಸತಿ ಸಹಿತ ಶಿಬಿರದಲ್ಲಿ ಊಟೋಪಚಾರ ಹಾಗೂ ಸಾಮೂಹಿಕ ವಸತಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಆಸಕ್ತರು ನವೆಂಬರ್ 20ನೇ […]

Continue Reading

ಉರುವಾಲಿನಲ್ಲಿ ಅರ್ಥಪೂರ್ಣ ರಾಜ್ಯೋತ್ಸವ ಆಚರಣೆ – ಆಂಗ್ಲಮಾಧ್ಯಮ ಮಕ್ಕಳಿಗೂ ಕನ್ನಡ ಪಾಠ – ಭಾಷೆ ಉಳಿಸಿ ನಾಡು ಬೆಳೆಸಿ ಎಂದ ಗಣ್ಯರು.

ಉರುವಾಲು: ಇಲ್ಲಿನ ಶ್ರೀಭಾರತೀವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನವೆಂಬರ್ ೧ ರಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯೋತ್ಸವಕ್ಕೆ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು.   ರಾಜ್ಯೋತ್ಸವದ ಆಚರಣೆಗೆ ಮೂಲಕಾರಣವಾದ ಕನ್ನಡ ಏಕೀಕರಣದ‌ ಕುರಿತು, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಜಯಲಕ್ಷ್ಮೀ, ಸಹಶಿಕ್ಷಕರಾದ ಶ್ರೀಮತಿ ಕಮರುನ್ನೀಸಾ, ಶ್ರೀ ಲಕ್ಷ್ಮಣ ಗೌಡ ಅವರು ವಿವರಿಸಿದರು.   ಶಾಲಾ‌ಸಂಸತ್ತಿನ ವಿರೋಧ ಪಕ್ಷದ ನಾಯಕ ಕಾರ್ತೀಕ್ ರಾಜ್ಯೋತ್ಸವದ ಮಹತ್ತ್ವ ತಿಳಿಸಿದರು. […]

Continue Reading

ಮಾತಾಪಿತೃಗಳಿಗೆ ಪಾದಪೂಜೆ ನೆರವೇರಿಸಿದ ಮಕ್ಕಳು : ಸಂಸ್ಕೃತಿ ಅರಿವು ಮೂಡಿಸಲು ನಡೆಯಿತು ವಿಶಿಷ್ಟ ಕಾರ್ಯಕ್ರಮ..

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಹಾಗೂ ಹೆತ್ತವರ ಮಹತ್ತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಇಂದು ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಶ್ರೀಭಾರತೀವಿದ್ಯಾಲಯದಲ್ಲಿ ಜನ್ಮದಾತರಿಗೆ ಪೂಜೆ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ ಜರುಗಿತು. ಕನ್ನಡ ರಾಜ್ಯೋತ್ಸವದ ಈ ಶುಭದಿನದಂದು ಹೆತ್ತವರ ಪಾದ ತೊಳೆದು ಪೂಜೆ ಸಲ್ಲಿಸಿದ ಮಕ್ಕಳು, ಬದುಕಿಡಿ ತಮ್ಮನ್ನು ಸಲಹುವ ತಂದೆ-ತಾಯಿಗಳನ್ನು ಗೌರವದಿಂದ ಕೊನೆತನಕ ಸಲಹುವ ಶಪಥ ಗೈಯ್ದರು. ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಹಾಗೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ […]

Continue Reading