ಪಾತಂಜಲ ಮಹಾಭಾಷ್ಯ ಕನ್ನಡಿ : ಪುಸ್ತಕ ಪರಿಚಯ ಮತ್ತು ಲೇಖಕ ಸಮ್ಮಾನ ಕಾರ್ಯಕ್ರಮ

ಶಿಕ್ಷಣ

 

ಹೊನ್ನಾವರ : ನಗರದ ಕವಲಕ್ಕಿಯ ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕೃತ ಕಾಲೇಜಿನ ಆವರಣದ ಶ್ರೀರಾಘವೇಶ್ವರಭಾರತೀ ಸಭಾಭವನದಲ್ಲಿ ಮಾ.17ರಂದು ಡಾ. ಗಣಪತಿ ಭಟ್ಟ ರಚಿಸಿದ ‘ಪಾತಂಜಲ ಮಹಾಭಾಷ್ಯ ಕನ್ನಡಿ’ ಪುಸ್ತಕ-ಪರಿಚಯ ಕಾರ್ಯಕ್ರಮ ಸಂಪನ್ನವಾಯಿತು. ಗ್ರಂಥಕಾರಾದ ಡಾ. ಗಣಪತಿ ಭಟ್ಟ ಪುಸ್ತಕದ ವಿಷಯದ ಕುರಿತು ಸಮಗ್ರ ಮಾಹಿತಿ ನೀಡಿದರು. ಅನಂತರ ಕಾಲೇಜಿನ ಪ್ರಾಚಾರ್ಯ ವಿದ್ವಾನ್ ಗಣೇಶ ವಿ. ಭಟ್ಟ ಗ್ರಂಥವನ್ನು ವಿಮರ್ಶಿಸಿ ಅದರಲ್ಲಿರುವ ವೈಶಿಷ್ಟ್ಯ ಮತ್ತು ಪ್ರಸ್ತುತತೆಯನ್ನು ಸಭೆಗೆ ಪರಿಚಯಿಸಿದರು.

ಕೊನೆಯಲ್ಲಿ ಗ್ರಂಥಕರ್ತೃ ಡಾ. ಗಣಪತಿ ಭಟ್ಟರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಅದೇ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ವಿದ್ವಾನ್ ವಿ.ಜಿ. ಹೆಗಡೆ ಗುಡ್ಗೆ ಕಾರ್ಯಕ್ರಮದಲ್ಲಿ ಉಪಸ್ಥಿತಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Author Details


Srimukha

Leave a Reply

Your email address will not be published. Required fields are marked *