ಮೂರೂರು: ದಿನಾಂಕ 12.01.2019, ಶನಿವಾರದಂದು ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರೂ ಶಾಲೆಯ ಮುಖ್ಯ ಅಧ್ಯಾಪಕರೂ ಆದ ಶ್ರೀ ಎಮ್. ಜಿ. ಭಟ್ಟ ಮಾತನಾಡಿ ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರ ತತ್ತ್ವದ ಸಾರಾಂಶವನ್ನು ಕಥೆಯ ರೂಪದಲ್ಲಿ ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆರೆಸ್ಸೆಸ್ಸಿನ ಉತ್ತರಪ್ರಾಂತದ ಮಹಿಳಾ ಸಂಘಟಕರಾದ ಕುನಾರಿ ಸ್ನೇಹಾ ಹೆಗಡೆ ಉಪಸ್ಥಿತರಿದ್ದರು. ಪ್ರಗತಿ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಸ್ವಾತಿ ಭಟ್ಟ ಸ್ವಾಗತಿಸಿದರು, ಕುಮಾರಿ ಶಾಂಭವಿ ಶೆಟ್ಟಿ ವಂದನಾರ್ಪಣೆ ನೆರವೇರಿಸಿದರು.