ಪೆರ್ಲ: ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಇಂದಿನಿಂದ ನವೆಂಬರ 15ರ ತನಕ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮಿ ಮಹೋತ್ಸವ ನಡೆಯಲಿದೆ.
ನವೆಂಬರ್ ೭ ಬುಧವಾರ ಸಂಜೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ದೇವತಾ ಪ್ರಾರ್ಥನೆ, ಸಪ್ತಶುದ್ಧಿ, ಪುಣ್ಯಾಹ, ಮಂಟಪ ಸಂಸ್ಕಾರ, ವಾಸ್ತು ಪೂಜೆ, ರಾಕ್ಷೋಘ್ನ ಹವನ, ನ.8ರಂದು ಬೆಳಗ್ಗೆ 7ರಿಂದ ಗಣಪತಿ ಹವನ, ಕಾಮಧೇನು ಹವನ, ಸಂಜೆ 4.30ರಿಂದ ಭಜನರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಗೋಪೂಜೆ, ತುಳಸೀಪೂಜೆ, ಗೋಪಾಲಕೃಷ್ಣ ಪೂಜೆ, ರಾತ್ರಿ 7ರಿಂದ ದೀಪೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ, ಉಪಾಹಾರ ವಿತರಣೆ ನಡೆಯಲಿದೆ.
ನ.10ರಂದು ಬೆಳಗ್ಗೆ 9.30ರಿಂದ ಶನಿದೋಶ ನಿವಾರಣೆಗಾಗಿ ಆಂಜನೇಯ ಕಲ್ಪೋಕ್ತ ಪೂಜೆ ಹಾಗೂ ಹವನ, ಮಧ್ಯಾಹ್ನ 12ರಿಂದ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ, ನ.14ರಂದು ಸಂಜೆ 5ರಿಂದ ಶ್ರೀ ಲಕ್ಷ್ಮೀ ನಾರಾಯಣ ಪೂಜೆ, ನ.15ರಂದು ಗೋಪಾಷ್ಟಮೀ ಮಹೋತ್ಸವ ಪ್ರಯುಕ್ತ ಬೆಳಗ್ಗೆ 7ರಿಂದ ಗಣಪತಿ ಹವನ, ಕಾಮಧೇನು ಹವನ, ಗೋವರ್ಧನ ಹವನ, ಬೆಳಗ್ಗೆ 10ರಿಂದ ಮಾತೆಯರಿಂದ ಕುಂಕುಮಾರ್ಚನೆ, ಭಜನೆ, ಮಧ್ಯಾಹ್ನ 12ರಿಂದ ಹವನ ಪೂರ್ಣಾಹುತಿ, 12.30ರಿಂದ ಪ್ರಸಾದ ವಿತರಣೆ, ಪ್ರಸಾದ ಭೋಜನವಿದೆ.
ಸಂಜೆ 4.30ರಿಂದ ಗೋವರ್ಧನ ಪೂಜೆ, ಭಜನ ರಾಮಾಯಣ, ವಿಷ್ಣು ಸಹಸ್ರ ನಾಮ ಪಾರಾಯಣ, ಸಂಜೆ 5ರಿಂದ ಗೋಪೂಜೆ, ತುಳಸೀ ಪೂಜೆ, ಗೋಪಾಲಕೃಷ್ಣ ಪೂಜೆ, ಭಜನೆ, 7ರಿಂದ ದೇಪೋತ್ಸವ, ಮಹಾ ಮಂಗಳಾರತಿ, ಅಷ್ಟಾವಧಾನ ಸೇವೆ, 8ರಿಂದ ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.