ಮುಂಬೈನಲ್ಲೂ ನಡೆಯಿತು ಸಂಭ್ರಮದ ಗೋಪೂಜೆ: ನಿಜಾರ್ಥದಲ್ಲಿ ಬೆಳಕಿನ ಹಬ್ಬ ಆಚರಿಸಿದ ಗೋಪ್ರೇಮಿಗಳು

ಉಪಾಸನೆ ಗೋವು ಸುದ್ದಿ

ಮುಂಬೈ: ದೀಪಾವಳಿಗೂ ಗೋಪೂಜೆಗೂ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಕೃಷಿ ಅವಲಂಬಿತ ಎಲ್ಲ ಭಾಗಗಳಲ್ಲೂ ದೀಪಾವಳಿಯಲ್ಲಿ ಗೋಪೂಜೆ ನಡೆಸುವುದು ವಾಡಿಕೆ. ಆದರೆ ಗೋಪೂಜೆ ಕೇವಲ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ಮಹಾನಗರಗಳಲ್ಲೂ ಇದೆ.

ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಂಬಯಿಯ ಕೋಲಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಯಲ್ಲಿ, ಯಾವ ಗ್ರಾಮೀಣ ಪ್ರದೇಶಕ್ಕೂ ಕಡಿಮೆ ಇಲ್ಲದಂತೆ ಗೋಪೂಜೆಯೊಂದಿಗೆ ಸಂಭ್ರಮದಿಂದ ದೀಪಾವಳಿ ಆಚರಿಸಲಾಯಿತು.

 

ನವೆಂಬರ್ 8ರಂದು ನಡೆದ ಗೋಪೂಜೆಯಲ್ಲಿ ಮುಂಬಯಿ ವಲಯ ಅಧ್ಯಕ್ಷ ಶ್ರೀ ಕೃಷ್ಣ ಭಟ್ಟ ಗುಡ್ಡೆಬಾಳ ಪಾಲ್ಗೊಂಡು ಪೂಜೆ‌ ಸಲ್ಲಿಸಿದರು. ಈ ವೇಳೆ ಮುಂಬಯಿ ವಲಯದ 10ಕ್ಕೂ ಸದಸ್ಯರು ಗೋಪೂಜೆಯಲ್ಲಿ ಪಾಲ್ಗೊಂಡು ಗೋಗ್ರಾಸ ನೀಡಿ ಗೋಕೃಪೆಗೆ ಪಾತ್ರರಾದರು.

 

ಮುಂಬಯಿನಿಂದ 130 ಕಿಲೋಮೀಟರ್ ದೂರದ ಕೋಲಾಡನಲ್ಲಿ ಈ ಗೋಶಾಲೆಯಿದ್ದು ಇಲ್ಲಿ 200ಕ್ಕೂ ಹೆಚ್ಚು ಗೋಸಂತತಿಗಳಿವೆ. ಮಹಾನಗರದಲ್ಲಿಯೂ ಗೋಸೇವೆ ಹಾಗೂ ಗೋಪೂಜೆಗೆ ಅವಕಾಶವಿರುವುದು ಗೋಪ್ರೇಮಿಗಳಿಗೆ ಸಂತೋಷ ತಂದಿದ್ದು, ಈ ಬಾರಿ ಅವರು ನಿಜಾರ್ಥದಲ್ಲಿ ದೀಪಾವಳಿ ಆಚರಿಸಿದ್ದಾರೆ.

Leave a Reply

Your email address will not be published. Required fields are marked *