ಅವರಂತಲ್ಲ, ನಮ್ಮಂತಾಗಬೇಕು ನಾವು!

ಅಲ್ಲೊಬ್ಬ ರೈತ. ಸಮೃದ್ಧ ಭೂಮಿ, ಬೇಕಾದಷ್ಟು ನೀರು, ವಾಸಕ್ಕೆ ಯೋಗ್ಯ ಮನೆ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದ ಎಂಬಂತೆ ಹಳೆ ಅಡಿಕೆ ತೋಟಕ್ಕೆ ಬೇಸಾಯ ಮಾಡಿಕೊಂಡು ಅದರಲ್ಲೇ ಜೀವನ. ಅಲ್ಲೇ ಪಕ್ಕದಲ್ಲಿ ಇನ್ನೊಬ್ಬರ ಮನೆ. ಆತ ಸರ್ಕಾರಿ ನೌಕರ. ದಿನ ಬೆಳಗ್ಗೆ ರೆಡಿ ಆಗಿ ನೌಕರಿಗೆ ಹೋಗೋದು ಆತನ ಕೆಲಸ.   ಈ ರೈತ ಪ್ರತಿ ದಿನ ನೌಕರ ಕೆಲಸಕ್ಕೆ ಹೊರಡೊದನ್ನ ನೋಡಿ ಮನದಲ್ಲೇ ಕೊರಗಿ ಅಸೂಯೆ ಪಡುತ್ತಿದ್ದ. ಅವನಾದರೆ ಸೂಟು ಬೂಟು ಹಾಕಿ […]

Continue Reading

ಪೂರ್ತಿ ಲೆಕ್ಕ ತಪ್ಪಿಸುವ ಒಂದು ಚುಕ್ಕಿ!

ಕೆಲ ದಿನಗಳ ಹಿಂದೆ ನಮ್ಮ ಮನೆ ಬಳಿಯ ಸರ್ಕಾರಿ ಶಾಲೆಯಲ್ಲಿ ಶಾರದಾ ಪೂಜೆ ಕಾರ್ಯಕ್ರಮ ವಿತ್ತು. ಅಲ್ಲಿನ ಪೋಷಕರಿಗೆಂದು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ನಾನೂ ಭಾಗವಹಿಸಿದ್ದೆ. ಹೀಗೆ ರಂಗೋಲಿ ಬಿಡಿಸುವಾಗ ಒಂದು ಚುಕ್ಕಿ ತಪ್ಪಾಗಿ ಇಟ್ಟೆ. ಅಲ್ಲೇ ಇದ್ದ ಒಬ್ಬರು ಅಜ್ಜಿ ನಾ ಇಡುತ್ತಿದ್ದ ಚುಕ್ಕಿ ನೋಡಿ ‘ಮಗಾ, ಒಂದು ಚುಕ್ಕಿ ತಪ್ಪಾಯಿತ್ತಲ್ಲ  ಸರಿ ಮಾಡು’ ಅಂದರು. ನಾನು, ‘ಹೇಗೂ ಒಂದೇ ಚುಕ್ಕಿ ಅಲ್ವಾ ಬಿಡಜ್ಜೀ, ರಂಗೋಲಿ ಬಿಡಿಸುವಾಗ ಸರಿ ಆಗತ್ತೆ’ ಅಂತ ಹಾಗೆ ಮುಂದು ವರೆಸಿದೆ. […]

Continue Reading

ಕಳೆಯುತ್ತಿರುವುದು ಏನು – ಸಮಯವೇ? ಸಂಸ್ಕೃತಿಯೇ?

ಬೇಸಿಗೆಯ ಬಿಸಿಲು ಜೋರಾಗಿದೆ. ಇನ್ನು ಮಕ್ಕಳಿಗೆ ರಜೆ ಬೇರೆ ಪ್ರಾರಂಭ. ಜೊತೆಗೆ ಮಾವು ಹಲಸು ಎಲ್ಲಾ ನಮಗಾಗೇ ಫಲ ಬಿಟ್ಟು ನಿಂತಿವೆ. ಬೇಸಿಗೆ ಬಂತು ಎಂದರೆ ಹಳ್ಳಿ ಹೆಂಗಸರಿಗೆ ಬಿಡುವಿಲ್ಲದ ಕೆಲಸ. ಹಪ್ಪಳ, ಸಂಡಿಗೆ, ತರ ತರದ ಉಪ್ಪಿನಕಾಯಿ, ಮಾವಿನ ಮಿಡಿ ಹಾಕೋದು. ನಡುವೆ ಅಲ್ಲಿ ಇಲ್ಲಿ ಊಟದ ಮನೆ. ಜೊತೆಗೆ ರಜೆಗೆ ಬರೋ ನೆಂಟರು. ತಾವು ಮಕ್ಕಳ ಜೊತೆ ರಜೆಯ ತಿರುಗಾಟ ಹೀಗೆ.   ಮೊನ್ನೆ ಯಾವುದೋ ಕಾರ್ಯಕ್ರಮದಲ್ಲಿ ಎರಡು ಹೆಂಗಸರ ಸಂಭಾಷಣೆ ಕೇಳಿಸಿಕೊಂಡೆ. ಹಳ್ಳಿ […]

Continue Reading

ನಾವೇ ಬತ್ತಿಸಿದ ಬಾವಿ – ಬತ್ತಿಸೀತು ನಮ್ಮ ಬದುಕನ್ನೇ

ಹೀಗೊಂದು ವಿಡಿಯೋ ವಾಟ್ಸ್ಯಾಪಲ್ಲಿ ಹರಿದಾಡುತಿತ್ತು. ಒಂದು ಬೈಕಲ್ಲಿ ಅಪ್ಪ ಮತ್ತು ಪುಟ್ಟ ಮಗು. ರೈಲ್ವೇ ಹಳಿ ದಾಟುವಾಗ ಆ ಬೈಕ್ ರೈಲು ಹಳಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿತು. ಅದನ್ನು ತಪ್ಪಿಸಲು ಹರಸಾಹಸ ಮಾಡಿದರೂ ಆಗಲೇ ಇಲ್ಲ ಅಪ್ಪನ ಕೈಯಲ್ಲಿ. ಇನ್ನೇನು ರೈಲು ಹತ್ತಿರವೇ ಬರುತ್ತಾ ಇತ್ತು. ಕಡೆಗೆ ಹೇಗೂ ತಾನು ಮತ್ತು ಮಗು ಆಚೆ ಕಡೆ ಹಾರಿಕೊಂಡರು. ಆದರೂ ಬೈಕ್ ಸಿಕ್ಕಿ ಹಾಕಿಕೊಂಡಿತ್ತಲ್ಲ. ಅದರ ಮೇಲೆ ವ್ಯಾಮೋಹ. ಮಗು, ಬಿಟ್ಟು ಹೋಗಬೇಡ ಅಂತ ಎಸ್ಟೇ ಕಾಲು ಹಿಡಿದು ಜಗ್ಗಿದರೂ […]

Continue Reading

ಶ್ರಮದಷ್ಟೇ ಮುಖ್ಯ ಮಾಡುವ ಕ್ರಮ!

ಹೀಗೊಂದು ಕಾಡಿದ ಪ್ರಶ್ನೆ. ಕೆಲಸವನ್ನು ಕಷ್ಟಪಟ್ಟು ಮಾಡ್ತೀವಾ? ಇಷ್ಟಪಟ್ಟು ಮಾಡ್ತೀವಾ? ಕೇವಲ ಕಷ್ಟಪಟ್ಟು ಮಾಡಿದ ಕೆಲಸ ಯಶಸ್ಸು ಕಾಣತ್ತ?    ಕಷ್ಟಪಟ್ಟು ಕೆಲಸ ಮಾಡಿದರೆ ಉದ್ಧಾರ ಆಗಬಹುದು. ಕಷ್ಟಪಟ್ಟು ಓದಿದ್ರೆ ಒಳ್ಳೆ ಮಾರ್ಕ್ಸ್ ಬರತ್ತೆ. ಬೆಳಗ್ಗೆಯಿಂದ  ಮನೆ ಕೆಲಸನ ಪಾಪ, ಕಷ್ಟಪಟ್ಕೊಂಡು ಮಾಡತಾನೇ ಇದಾಳೆ. ಕಷ್ಟ ಪಟ್ಟರೆ ಸುಖ. ಹೀಗೆ ಕಷ್ಟ ಎಂಬ ಪದಗಳ ಸರಮಾಲೆ. ಅಯ್ಯೋ ದೇವರೇ ಕಷ್ಟ ಕೊಡಬೇಡಪ್ಪ ಅಂತ ಬೇಡಿಕೊಳ್ಳೋದೂ ನಾವೇ. ಇಲ್ಲಿ ಎಲ್ಲ ಕೆಲಸವನ್ನು ಕಷ್ಟಪಟ್ಟು ಮಾಡಬೇಕು ಅನ್ನೋದೂ ನಾವೇ. ಹಾಗಾದ್ರೆ […]

Continue Reading

ಬೆಳಕಿನೊಳಗೊಂದು ಕತ್ತಲು

ನಮ್ಮೂರಲ್ಲೊಂದು ಮಾರಿಜಾತ್ರೆ. ಹಳ್ಳಿಯಲ್ಲಿ ಜಾತ್ರೆಯೆಂದರೆ ಅದೇನೋ ಸಂಭ್ರಮ. ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸೋ ಕ್ಷಣ. ಹಳೆ ಗೆಳೆಯ ಗೆಳತಿಯರು, ಪರಿಚಿತರು. ಹೀಗೆ ಊರ ಜಾತ್ರೆಯೆಂದರೆ ಒಂಥರ ಹಬ್ಬವೆಂದೇ ಹೇಳಬಹುದು. ಎಲ್ಲೆಡೆ ಬೆಳಕಿನ ಮೆರಗು. ವಿವಿಧ ಬಗೆಯ ಆಟಿಕೆಯ ಅಂಗಡಿ, ಹೂವಿನ ಅಲಂಕಾರಿಕ ಮಳಿಗೆ. ವಿವಿಧ ತಿಂಡಿ ತಿನಿಸುಗಳ ಅಂಗಡಿ. ಬಳೆ ಅಂಗಡಿಗಳಂತೂ ಲೆಕ್ಕವಿಲ್ಲದಷ್ಟು ಬಗೆಯವು. ಪ್ಲಾಸ್ಟಿಕ್ ಆಟಿಕೆ ಅಂಗಡಿ, ವಿವಿಧ ಗಾಜಿನ ಪಾತ್ರೆಯ ಮಳಿಗೆ. ಹೀಗೆ ಹತ್ತು ಹಲವು. ಬಣ್ಣದ ಬಲೂನು ಊದುತ್ತಾ, ಮಾರುತ್ತ ಸಾಗುವ ಹುಡುಗರು, […]

Continue Reading

ಒಪ್ಪಿಕೊಂಡಿದ್ದನ್ನು ಅಪ್ಪಿಕೊಳ್ಳೋಣ…

  ಬದುಕಿಗೊಂದು ಬದ್ಧತೆ ಬೇಕು. ನಾ ಹೀಗೆ ಬದುಕುವುದೆಂಬ ನಿರ್ಧಾರ ಬೇಕು. ಅದಕ್ಕೆ ಬೇಕಾದಂತೆ ತನ್ನ ಸುತ್ತಲಿನ ವಾತವರಣವನ್ನು ಸೃಷ್ಟಿಸಿಕೊಳ್ಳುವುದೇ ಜಾಣತನ. ಆಯ್ದುಕೊಂಡದನ್ನ ಪ್ರೀತಿಸಿದರೆ, ಒಪ್ಪಿಕೊಂಡಿದ್ದನ್ನ ಅಪ್ಪಿಕೊಂಡರೆ ಬದುಕು ನಿರಾಳ. ಕೆಲವೊಮ್ಮೆ ಆಲೋಚನೆ ಇಲ್ಲದೆಯೇ ಬದುಕು ನಿರ್ಧಾರವಾಗಿ ಬಿಡುವುದು. ಆಗ ಬಂದಿದ್ದನ್ನ ಸ್ವೀಕರಿಸಿ ಒಪ್ಪಿಕೊಳ್ಳೋದು ಅನಿವಾರ್ಯ.      ಗೆಳತಿಯೊಬ್ಬಳ ಮಾತಿನ ದಾಟಿ ಹೀಗಿತ್ತು. ‘ಹೋಗಿ ಹೋಗಿ ಹಳ್ಳಿ ಮನೆ ಒಪ್ಪಿಕೊಂಡು ಮದುವೆ ಆಗಿ ಬಿಟ್ಟೆಯಲ್ಲೇ. ಪೇಟೆ ಎಷ್ಟು ಚನ್ನಾಗಿದೆ ಗೊತ್ತಾ?’ ಅವಳ ಮಾತಿನ ದಾಟಿ ಅವಳ ಮನಸಿನ […]

Continue Reading

ಕಬ್ಬು ಸಿಹಿ; ತಿಂದವರೂ ಸಿಹಿಯಾಗಬಾರದೇ?

ಬದುಕು ಸಿಹಿಕಹಿಗಳ ಮಿಶ್ರಣ. ಆದರೆ ಇಲ್ಲಿ ಎಲ್ಲರೂ ಇಷ್ಟ ಪಡುವುದು ಕೇವಲ ಸಿಹಿಯನ್ನೇ. ಅಂತಹ ಸಿಹಿ ನೀಡೋ ಕಬ್ಬು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಆಲೆಮನೆ ಅಂದ್ರೆ ಏನೋ ಸಂಭ್ರಮ. ಬಾಲ್ಯದಲ್ಲಿ ಆಲೆಮನೆ ಅಂದ್ರೆ ಮೊದಲ ಹಾಜರಿ ನಮ್ಮದೇ. ಆಗ ಆಲೆ ಕಣೆಯಲ್ಲಿ ಆಲೆಮನೆ. ಅದಕ್ಕೆ ಕೋಣವನ್ನ ಕಟ್ಟಿ, ಅದರಲ್ಲಿ ಆಲೆಮನೆ. ಹೊಟ್ಟೆ ತುಂಬ ಹಾಲು ಕುಡಿದು, ಬಿಸಿ ಬಿಸಿ ನೊರೆ ಬೆಲ್ಲ ತಿಂದು ಮನೆಗೆ ಕಬ್ಬನ್ನು ಹಿಡ್ಕೊಂಡು ತಿಂತ ಹೋಗೋ ಮಜಾನೇ ಬೇರೆ. ಕಾಲ […]

Continue Reading

ಬಾಗಿ ನೆಡೆಯೋಣ

ಪ್ರತಿ ದಿನವೂ ನಮ್ಮ ಪಾಲಿಗೆ ಹೊಸತೇ. ಏಳುವಾಗಲೇ ಕೆಲ ನೀರಿಕ್ಷೆಯೊಂದಿಗೆ, ಕೆಲವು ಕನಸುಗಳೊಂದಿಗೆ ಏಳುತ್ತೇವೆ. ಈ ದಿನ ನನ್ನ ಪಾಲಿಗೆ ಈ ಎಲ್ಲ ಕನಸುಗಳನ್ನು ಈಡೇರಿಸಲಿ ಎಂಬ ಹಂಬಲ ಮನದಲ್ಲಿ. ಈ ಕೆಲಸ ಮಾಡಬೇಕು, ಅಲ್ಲಿಗೆ ಹೋಗಬೇಕು ಹೀಗೆ ಹತ್ತು ಹಲವು ಯೋಚನೆ. ಅದರಂತೆ ಕಾರ್ಯ. ಬೆಳಗಿನಿಂದ ರಾತ್ರಿಯ ವರೆಗೆ ನೆಡೆದ ಘಟನೆಗಳೆಲ್ಲವನ್ನೂ ಅವಲೋಕಿಸಿದರೆ ಅದೇ ನಮಗೆ ದೊಡ್ಡ ಅನುಭವದ ಬುತ್ತಿ. ನಿರೀಕ್ಷೆಯೊಂದಿಗೆ ಉದಯಿಸಿ  ಅನುಭವದೊಂದಿಗೆ ಮುಕ್ತಾಯವಾಗೋದು ನಮ್ಮ ದೈನಂದಿನ ಬದುಕು.      ಅದೊಂದು ಮುಂಜಾವು. ಮಲೆನಾಡ […]

Continue Reading

ಭೂತಾಯಿಯ ಸೀಮಂತ

 ಭೂಮಿ ಹುಣ್ಣಿಮೆ ಹಬ್ಬ. ಆಹಾ, ಬಾಲ್ಯದಲ್ಲಿ ಈ ಹಬ್ಬ ಅಂದ್ರೆ ಏನೋ ಸಂಭ್ರಮ. ಆಚರಣೆಯ ಬಗ್ಗೆ ಅರಿವಿಲ್ಲದೆ ಹೋದರೂ ಕಡುಬು ತೋಟದಲ್ಲಿ ತಿನ್ನಬಹುದಲ್ಲ ಅನ್ನೋ ಖುಷಿ.    ಪರಿಸರದಲ್ಲಿ ಆಗೋ ಪ್ರತಿ ಬದಲಾವಣೆಯನ್ನೂ ಗಮನಿಸಿ ನಮ್ಮ ಹಿರಿಯರು ಹಬ್ಬಗಳ ಆಚರಣೆ ತಂದರು. ಈ ಹಬ್ಬ ಬರುವುದು ಭೂಮಿತಾಯಿ ಮೈದುಂಬಿ ಬಸಿರಾದ ಕಾಲದಲ್ಲಿ. ಹೊಲ ಹಸಿರನುಟ್ಟು ಸೀಮಂತಕ್ಕೆ ಸಿಂಗಾರಗೊಂಡ ಕಾಲವದು. ಈ ಹಬ್ಬದ ಆಚರಣೆ ಊರಿಂದ ಊರಿಗೆ ಭಿನ್ನ. ಆದರೇನಂತೆ ಭಾವ ಅದೇ ತಾನೇ. ಭೂಮಿಯನ್ನು ಹೆಣ್ಣಿಗೆ ಹೋಲಿಸಿದ್ದೇವೆ […]

Continue Reading