ಕಾಯಿಸಿದ ಅಯ್ಯಪ್ಪ ಕಾಯದಿರುವನೇ

ದೇಶದಲ್ಲಿ ಸನಾತನ ಧರ್ಮಕೇಂದ್ರಗಳ ಮೇಲೆ ಆಕ್ರಮಣ ಹೊಸದೇನಲ್ಲ. ಘಜ್ನಿ ನಡೆಸಿದ ಸೋಮನಾಥ ದೇವಾಲಯ ಆಕ್ರಮಣದಿಂದ ತೊಡಗಿ, ನಮ್ಮ ಶ್ರೀಮಠದ ಮೇಲಿನ ಆಕ್ರಮಣಗಳವರೆಗೆ ಸಮಾಜದ ಶ್ರದ್ಧಾಬಿಂದುಗಳ ಮೇಲೆ ಅನೇಕ ಆಕ್ರಮಣಗಳು ನಡೆಯುತ್ತಲೇ ಬಂದಿವೆ.   ಇದೆಲ್ಲ ಆಕ್ರಮಣಗಳನ್ನೂ ಮೆಟ್ಟಿ, ಎದುರಿಸಿ, ಹೊಳಹಿನೊಂದಿಗೆ ಮತ್ತೆ ಬೆಳೆಯುವ ಶಕ್ತಿ ಸಾಮರ್ಥ್ಯಗಳು ಸನಾತನಧರ್ಮಕ್ಕಷ್ಟೇ ಇರಬಲ್ಲುದು. ಆದರೂ ಆಕ್ರಮಣಗಳನ್ನು ಎದುರಿಸುವ ಕಾಲಘಟ್ಟದಲ್ಲಿ ಸಾಮಾಜಿಕ ಆಂದೋಲನ, ಕ್ರಾಂತಿಯೊಂದರ ಅಗತ್ಯವಿರುತ್ತದೆ ಎಂಬುದನ್ನು ನಮ್ಮ ಮಠದ ಶಿಷ್ಯಸಮಾಜವೂ ಸೇರಿದಂತೆ, ಒಟ್ಟಾರೆ ಸಮಾಜವು ಮನಗಂಡಿದೆ.   ಇಂದು, ಅದೇ ರೀತಿಯ […]

Continue Reading

ಕಬ್ಬು ಸಿಹಿ; ತಿಂದವರೂ ಸಿಹಿಯಾಗಬಾರದೇ?

ಬದುಕು ಸಿಹಿಕಹಿಗಳ ಮಿಶ್ರಣ. ಆದರೆ ಇಲ್ಲಿ ಎಲ್ಲರೂ ಇಷ್ಟ ಪಡುವುದು ಕೇವಲ ಸಿಹಿಯನ್ನೇ. ಅಂತಹ ಸಿಹಿ ನೀಡೋ ಕಬ್ಬು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಆಲೆಮನೆ ಅಂದ್ರೆ ಏನೋ ಸಂಭ್ರಮ. ಬಾಲ್ಯದಲ್ಲಿ ಆಲೆಮನೆ ಅಂದ್ರೆ ಮೊದಲ ಹಾಜರಿ ನಮ್ಮದೇ. ಆಗ ಆಲೆ ಕಣೆಯಲ್ಲಿ ಆಲೆಮನೆ. ಅದಕ್ಕೆ ಕೋಣವನ್ನ ಕಟ್ಟಿ, ಅದರಲ್ಲಿ ಆಲೆಮನೆ. ಹೊಟ್ಟೆ ತುಂಬ ಹಾಲು ಕುಡಿದು, ಬಿಸಿ ಬಿಸಿ ನೊರೆ ಬೆಲ್ಲ ತಿಂದು ಮನೆಗೆ ಕಬ್ಬನ್ನು ಹಿಡ್ಕೊಂಡು ತಿಂತ ಹೋಗೋ ಮಜಾನೇ ಬೇರೆ. ಕಾಲ […]

Continue Reading

ಭವದ ಬಂಧ ಕಳೆಯುವ ಕುಂಭಮೇಳ

ಸನಾತನ ಪರಂಪರೆ ಹಿಂದಿನಿಂದಲೂ ನಿಸರ್ಗವನ್ನು ಆರಾಧಿಸುತ್ತಲೇ ಬಂದಿದೆ. ನೀರು, ಗಾಳಿ, ಅಗ್ನಿ, ಮರಗಿಡಗಳು, ಪರ್ವತ ಶಿಖರಗಳು ಇತ್ಯಾದಿ. ನದಿಗಳು ಪುರಾಣಗಳಲ್ಲಿ ಅತಿ ಮಹತ್ತ್ವದ ಸ್ಥಾನವನ್ನು ಹೊಂದಿದೆ. ಹರಿಯುವ ನದಿಗಳು ಮನುಷ್ಯನ ಜೀವನದ‌ ಮೂಲಾಧಾರವಾಗಿವೆ. ಸನಾತನಧರ್ಮದ ಹಲವಾರು ಆಚರಣೆಗಳು, ಹಬ್ಬಗಳು ನದಿಯನ್ನು ಒಳಗೊಂಡಿದೆ. ಮನುಷ್ಯ ತನ್ನ ಅಸ್ತಿತ್ವವನ್ನು, ಕೃತಜ್ಞತೆಯನ್ನು ನದಿಗಳ ಆರಾಧನೆಯ ಮೂಲಕ ಅನಾದಿಕಾಲದಿಂದಲೂ ಮಾಡುತ್ತಾ ಬಂದಿದ್ದಾನೆ. ತೀರ್ಥಕ್ಷೇತ್ರಗಳು ಬಹುತೇಕ ಜಲಸಂಪನ್ಮೂಲಗಳ ದಂಡೆಯಲ್ಲಿ ಇರುವುದು ಇನ್ನೂ ವಿಶೇಷ. ಇಲ್ಲಿ ನಡೆಯುವ ಯಜ್ಞಯಾಗಾದಿಗಳು, ಮಂತ್ರಾನುಷ್ಠಾನಗಳು, ಸಾಧನೆಗಳು ಇಲ್ಲಿನ ಪವಿತ್ರತೆಯನ್ನು ಹೆಚ್ಚಿಸಿವೆ. […]

Continue Reading

ಸಂಗೀತದ ವಿಶೇಷ ಭಾಷೆ – ‘ಭಾಂಡೀರ

ಸನಾತನ – ಪದೋ ದಾತಾ ನಿತ್ಯಂ ಚೈವ ಸನಾತನಃ | ಭಾಂಡೀರವನವಾಸೀ ಚ ಶ್ರೀವೃಂದಾವನ ನಾಯಕಃ ||59||   ಬಾಲಕ್ರೀಣಾऽತಿ ಚಪಲೋ ಭಾಂಡೀರ – ವನ – ನಂದನಃ | ಮಹಾಶಾಲಃ ಶ್ರುತಿ – ಮುಖೋ ಗಂಗಾ – ಚರಣ – ಸೇವನಃ ||103||   (ಶ್ರೀಗೋಪಾಲ ಸಹಸ್ರನಾಮ ಸ್ತೋತ್ರಮ್ – ಶ್ರೀನಾರದ ಪಂಚರಾತ್ರಮ್)   ಉತ್ತರಪ್ರದೇಶದ  ವೃಂದಾವನವೆಂಬುದು ಭಾರತೀಯ ಸಾಂಸ್ಕೃತಿಕ, ಆಧ್ಯಾತ್ಮಿಕ, ಚಾರಿತ್ರಿಕ ಪರಂಪರೆಗಳ ಅಸ್ಮಿತೆಗಳಲ್ಲೊಂದು. ಭಾಗವತದ, ಭಕ್ತರ ಹೃದಯನಾಯಕನಾದ ಯಾದವ ಕೃಷ್ಣನ, ಆತನ ಸ್ನೇಹಿತರ […]

Continue Reading

ಮಕ್ಕಳ ಸಂಗದೊಳೆಚ್ಚರಗೊಳ್ಳಲಿ…

ದೊಡ್ಡವರೆಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ದಿವ್ಯ ಕಿಶೋರತೆ ನಿದ್ರಿಸುತಿಹುದು ವಿಸ್ಮೃತ ನಾಕದಲಿ | ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯಶಿಶು ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಜಪಶು ||  ಇದು ರಾಷ್ಟ್ರಕವಿ ಕುವೆಂಪು ಅವರ ಕವಿತೆಯ ಸಾಲುಗಳು. ಅವರ ಪ್ರಕಾರ, ತಮ್ಮನ್ನು ತಾವು ದೊಡ್ಡವರು ಎಂದುಕೊಂಡವರ, ಸಮಾಜ ದೊಡ್ಡವರೆಂದು ಹೇಳುವವರ ಅಥವಾ ವಯಸ್ಸಿನ ಕಾರಣದಿಂದ ದೊಡ್ಡವರು ಎನ್ನಲಾಗುವ ಎಲ್ಲರ ಹೃದಯದಲ್ಲೂ ಒಂದು ಪುಟ್ಟ ತೊಟ್ಟಿಲ ಲೋಕವಿದ್ದು ಅದರಲ್ಲಿ  ‘ದಿವ್ಯಕಿಶೋರತೆ’ ನೆಮ್ಮದಿಯಲ್ಲಿ ನಿದ್ರಿಸುತ್ತಿರುತ್ತದೆ. ಅದು […]

Continue Reading

ಎಲ್ಲರೊಳಗೂ ಇರುವ ಭಗವಂತ

ಝೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಯಲ್ಲಿ ಋತ್ವಿಕ್ ಎಂಬ ಹೆಸರಿನ ಅಪ್ರತಿಮ ಗಾಯಕನೊಬ್ಬನಿದ್ದಾನೆ. ಅವನ ಹೆಸರನ್ನು ಇಲ್ಲಿ ಹೇಳುವುದಕ್ಕೊಂದು ಕಾರಣವಿದೆ.  ಸ್ಪರ್ಧೆಯಲ್ಲಿರುವ ಉಳಿದ ಗಾಯಕರು ಕಾಣುವ ಈ ಲೋಕವನ್ನು ಅವನು ಕಾಣುವುದೇ ಇಲ್ಲ. ಹುಟ್ಟಿನಿಂದ ಕುರುಡನಾಗಿರುವ ಆತ ನಮ್ಮ ನಿಮ್ಮ ನಡುವೆಯೇ ಇದ್ದರೂ ಜೀವಿಸುತ್ತಿರುವುದು ನಾದಲೋಕದಲ್ಲಿ. ಅವನು ಹಾಡುತ್ತಿರಬೇಕಾದರೆ, ಸುತ್ತಲೂ ಕುಳಿತು ತಲೆದೂಗುವ ಪ್ರೇಕ್ಷಕರ ಚಪ್ಪಾಳೆಗಳು, ನಿರ್ಣಾಯಕರಾಗಿ ಕುಳಿತ ಮಹಾನುಭಾವರ ಬಿಚ್ಚು ನುಡಿಗಳು ಅವನ ಕಿವಿಗಳಿಗೆ ಕೇಳಿಸುತ್ತವೆಯೇ ಹೊರತು, ಆ ಹಾಡಿಗೆ ಮೈಮರೆತು ತಲೆದೂಗುವ ಅವರ ಭಾವಾಭಿವ್ಯಕ್ತಿಯು […]

Continue Reading

ಮಗನ ಕಣ್ಣೀರೂ, ನೆನಪಾದ ಮೋಹಿನಿಯೂ

ಒಬ್ಬ ಕಳ್ಳ. ಅರಮನೆಯ ಖಜಾನೆಯನ್ನೇ ಕದಿಯಲು ಹೋಗಿ ಸಿಕ್ಕಿಹಾಕಿಕೊಂಡ. ತುಂಬ ಕಟ್ಟುನಿಟ್ಟಿನ ರಾಜ. ಅಲ್ಲಿ ಕದ್ದವರಿಗೆ ಗಲ್ಲುಶಿಕ್ಷೆ. ಇವನಿಗೂ ಅದೇ ಆಯಿತು. ಕೊನೆಯಾಸೆ ಕೇಳಿದರು ಕಳ್ಳನ ಬಳಿ. ನನ್ನ ಅಮ್ಮನನ್ನು ಭೇಟಿಯಾಗಬೇಕು ಎಂದ. ಕರೆಸಿದರು ಅವನ ತಾಯಿಯನ್ನು. ಅಮ್ಮನನ್ನು ಕಂಡವನೇ ತಾಯಿಯ ಕಿವಿಯನ್ನು ಕಚ್ಚಿ ಹರಿದುಬಿಟ್ಟ. “ಸಣ್ಣವನಿದ್ದಾಗ ಎಲ್ಲಿಂದಲೋ ಒಂದು  ಹಣ್ಣನ್ನು ಕದ್ದು ತಂದಿದ್ದೆ. ಇದೇ ಕಿವಿಯಲ್ಲಿ ನಿನಗೆ ಗುಟ್ಟು ಹೇಳಿದ್ದೆ. ನೀನು ಅಂದು ಬೆನ್ನು ತಟ್ಟುವ ಬದಲು ಶಿಕ್ಷಿಸಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ” ಎಂದನಂತೆ […]

Continue Reading

ಗುರುವಿನೆಡೆಗೆ ಅವನ ನಡಿಗೆ

ಯಜ್ಞಕ್ಕೆಂದು ಕರೆದನವ ಭೂಮಿಯನ್ನು. ಸಸ್ಯಕ್ಕೆಂದು ಸ್ವರ್ಗವನ್ನು ಕರೆದ ಇಂದ್ರ. ಸಂಪತ್ತಿನ ವಿನಿಮಯದಿಂದ ಇಬ್ಬರೂ ಎರಡು ಭುವನಗಳನ್ನೂ ಪೋಷಿಸಿದರು.   ರಕ್ಷಕನಾದ ಅವನ ಯಶಸ್ಸನ್ನು ಕದಿಯಲಾಗಲಿಲ್ಲ ದೊರೆಗಳಿಗೆ. ಯಾಕೆಂದರೆ ಪರಸ್ವತ್ತುಗಳಿಂದ ಹಿಂದಿರುಗಿದ ಕಳ್ಳತನ ಶಬ್ದವಾಗಿ ಮಾತ್ರ ಉಳಿದಿತ್ತು.   ಸಜ್ಜನನಾದವ ದ್ವೇಷಿಯಾದರೂ ಅವನಿಗೆ ಸಮ್ಮತನಾಗಿದ್ದ. ರೋಗಿಗೆ ಔಷಧದಂತೆ. ದುಷ್ಟ ಪ್ರಿಯನಾಗಿದ್ದರೂ ತ್ಯಾಜ್ಯನಾಗಿದ್ದ ಅವನಿಗೆ. ಹಾವು ಕಡಿದ ಬೆರಳಿನಂತೆ.   ಸೃಷ್ಟಿಕರ್ತ ಮಹಾಭೂತಗಳಿಂದ ಅವನನ್ನು ಸೃಷ್ಟಿಸಿದ್ದನಷ್ಟೇ. ಹಾಗಾಗಿ ಅವನ ಗುಣಗಳೆಲ್ಲವೂ ಬೇರೆಯವರಿಗೆ ಅನುಕೂಲ ಒದಗಿಸಲೆಂದೇ ಇದ್ದವು.   ಸಮುದ್ರ ತೀರವೇ […]

Continue Reading

ಶ್ರೀ ರಾಮನ ನಿರ್ಣಯದತ್ತ ಒಂದು ನೋಟ

    ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ | ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||   ಅಯೋಧ್ಯೆಯ ಅರಸುಗಳಲ್ಲಿಯೇ ಅತಿಶ್ರೇಷ್ಠನಾದ ಅರಸು ಶ್ರೀರಾಮಚಂದ್ರ. ಮರ್ಯಾದಾಪುರುಷೋತ್ತಮ ಎಂಬ ಅಭಿದಾನವನ್ನು ಹೊಂದಿದ ಭಾರತವರ್ಷದ ಏಕಮೇವ ಚಕ್ರವರ್ತಿ. ತನ್ನ ಜೀವಿತ ಕಾಲದಲ್ಲಿ  ಮಾಡಿದ ಸಾಧನೆಯನ್ನು ಮನುಕುಲ ಇಂದಿಗೂ ಮರೆತಿಲ್ಲ. ಸುಭಿಕ್ಷ, ಶಾಂತಿ, ಸಮಾಧಾನಗಳಿಂದ ಕೂಡಿದ ರಾಜ್ಯವ್ಯವಸ್ಥೆಗೆ ಪರ್ಯಾಯ ಏನೆಂದು ಉದಾಹರಣೆಯ ಮೂಲಕ ವಿವರಿಸಿ ಎಂದರೆ ರಾಮರಾಜ್ಯ ಎಂದೇ ಕೇಳಿಬರುತ್ತದೆ. ಎಷ್ಟೋ ವರ್ಷಗಳ ಇತಿಹಾಸವನ್ನು ಹೊಂದಿದ  ಭಾರತವರ್ಷಕ್ಕೆ ಇನ್ನೊಂದು ಅಂತಹ ಸಮೃದ್ಧ, […]

Continue Reading

ಅವನೊಬ್ಬನೇ ಅವನಂಥವನು

ವೈವಸ್ವತ ಮನು ಎಂದೊಬ್ಬನಿದ್ದ. ಮನೀಷಿಗಳಿಗೆ ಮಾನನೀಯ ಆತ. ರಾಜರೆಲ್ಲರಿಗೆ ಮೊದಲಿಗ. ವೇದಗಳಿಗೆ ಪ್ರಣವವಿದ್ದಂತೆ ಇದ್ದನವ.   ಅವನ ಶುದ್ಧವಾದ ವಂಶದಲ್ಲಿ ಜನಿಸಿದ‌ ದಿಲೀಪ. ಕ್ಷೀರಸಾಗರದಲ್ಲಿ ಚಂದ್ರ ಉದಿಸಿ ಬಂದಂತೆ. ಶುದ್ಧರಲ್ಲೇ ಶುದ್ಧನವ. ರಾಜರಲ್ಲಿ ಚಂದ್ರನವ.   ವಿಶಾಲವಾದ ಎದೆಯವ. ವೃಷಭದಂಥ ಹೆಗಲಿನವ. ಶಾಲವೃಕ್ಷದಂತೆ ಎತ್ತರದವ. ಮಹಾಭುಜದವ. ತನ್ನ ಕಾರ್ಯಕ್ಕೆ ಅನುಗುಣವಾದ ದೇಹವಿರುವವ. ಕ್ಷಾತ್ತ್ರಧರ್ಮವೇ ಆಶ್ರಯಿಸಿಕೊಂಡಂತೆ ಇರುವವ.   ಎಲ್ಲರನ್ನೂ ಮೀರಿದ ಬಲ ಅವನದಾಗಿತ್ತು. ಎಲ್ಲ ಜೀವಿಗಳನ್ನು ತನ್ನ ತೇಜಸ್ಸಿನಿಂದ ಮೀರಿ ನಿಂತಿದ್ದನಾತ. ಎಲ್ಲರಿಗಿಂತ ಎತ್ತರದ ವ್ಯಕ್ತಿತ್ವದಿಂದ ಭೂಮಿಯನ್ನೇ […]

Continue Reading

ಪರೀಕ್ಷಾಗಾಲದಲ್ಲಿ ಜನಿಸುವ ಕಥೆಗಳು

‘ಪರೀಕ್ಷೆ’ ಹತ್ತಿರ ಬಂತೆಂದರೆ ನಮಗೆಲ್ಲ ಹೊಕ್ಕಳಬಳ್ಳಿಯಿಂದ ಛಳುಕೆದ್ದ ಅನುಭವವಾಗುತ್ತಿತ್ತು. ‘ಪರೀಕ್ಷೆಗೆ ಓದಲು ಬಿಡುವುದು’ ಎಂಬ ವಾಕ್ಯವನ್ನೇ ದ್ವೇಷಿಸುತ್ತಿದ್ದೆ ನಾನಾಗ. ಅದರಲ್ಲೂ ಹಿಂದಿ ಮತ್ತು ಗಣಿತವೆಂದರೆ ತುರಿಕೆಸೊಪ್ಪು ತಾಕಿಸಿಕೊಂಡಷ್ಟು ಅಲರ್ಜಿ. ಕಥೆಪುಸ್ತಕಗಳನ್ನು ಕಂಡರೆ ತಂಪೆನಿಸುವ ಹಾಗೆ ಶಾಲೆಯ ಪುಸ್ತಕಗಳ್ಯಾವುದೂ ಜೀವಕ್ಕೆ ತಂಪೆರೆಯಲಿಲ್ಲ. ಓದಲು ಕುಳಿತಾಗ ಕೈಗೆ ಸಿಗುವ ಸಣ್ಣಪುಟ್ಟ ಕಾಗದದ ಚೂರುಗಳಲ್ಲಿನ ಅಕ್ಷರಕ್ಷರವೂ ಪರಮಾದ್ಭುತವೆನಿಸುವ ಕಾಲವದು. ಮನೆಯಲ್ಲಿದ್ದರೆ ಪುಸ್ತಕದ ಮಧ್ಯೆ ಕಥೆಪುಸ್ತಕ ಸೇರಿಸಿ ಓದಿಬಿಡುತ್ತಾಳೆ ಎಂಬುದನ್ನು ಅರಿತ ಅಮ್ಮ, ಓದಲು ಬಿಟ್ಟಾಗಲೆಲ್ಲ ತೋಟಕ್ಕೆ ತೌರಿಬಿಡುತ್ತಿದ್ದಳು. ತೋಟಕ್ಕೆ ಓದಲು ಹೋಗುವ […]

Continue Reading

ಕತ್ತಲಿನ ಪ್ರಶ್ನೆಗೆ ಬೆಳಕಿನ ಉತ್ತರ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಒಂದು ಸಂದೇಶ ಹೀಗಿದೆ: 80-90ರ ದಶಕದ ಮಕ್ಕಳು ಅದೃಷ್ಟವಂತರು. ನಾವು ರಸ್ತೆಯಲ್ಲಿ ಆಡುತ್ತಿದ್ದೆವು. ನಮಗೆ google ಇಲ್ಲದೆಯೇ ಪ್ರಾಜೆಕ್ಟ್ ರೆಡಿ ಮಾಡುವುದು ಗೊತ್ತಿತ್ತು. ನಾವು ಈಗಿನ ಮಕ್ಕಳಂತೆ cell phone, tabಗಳಿಗೆ ಅಂಟಿಕೊಂಡಿರಲಿಲ್ಲ. ನಾವು ಹಳ್ಳಿಗಳಲ್ಲಿ ಬೆಳೆದೆವು. ನಾವು ಮಣ್ಣಿನಲ್ಲಿ ಆಡಿದೆವು. ಈಗಿನ ಮಕ್ಕಳಿಗೆ ಇದೆಲ್ಲ ಅವಕಾಶ ಇಲ್ಲ. ಹೀಗೇ ಏನೋ ಒಂದಷ್ಟು ಉದಾಹರಣೆಗಳು. ನಾವು 80-90ರ ದಶಕದಲ್ಲಿ ಕಳೆದ ಬಾಲ್ಯದ ನೆನಪುಗಳು ಮಧುರವೇ. ಆದರೆ ಇಂದಿನವರ ಬಾಲ್ಯ ಚೆನ್ನಾಗಿಲ್ಲ ಎಂಬುದಾಗಿ ನಾವೇ […]

Continue Reading

ಸಮಾಜಕ್ಕೆ ವಿಷವುಣಿಸುವವರಷ್ಟೇ ಅಪಾಯಕಾರಿ, ಮನಸ್ಸಿಗೆ ವಿಷವುಣಿಸುವವರೂ

ಕಳೆದೊಂದು ವಾರದಿಂದ ವೃತ್ತಪತ್ರಿಕೆಗಳ ಮುಖಪುಟ ಸುದ್ದಿ – ಚಾಮರಾಜನಗರದ ರಾಮಾಪುರ ಠಾಣೆಯ ಸರಹದ್ದಿನ ಸುಳ್ವಾಡಿ ಎಂಬಲ್ಲಿರುವ ಕಿಚ್ಚುಗತ್ತಿ ಮಾರಮ್ಮ ದೇವಾಲಯದ ಆವರಣದಲ್ಲಿ ನಡೆದ ದುರಂತದ್ದು. ದೇವಾಲಯಕ್ಕೆ ಗೋಪುರ ಹಾಗೂ ಸುತ್ತುಗೋಡೆ ನಿರ್ಮಾಣ ನಡೆಸುವುದೆಂದು ನಿರ್ಣಯಿಸಿದ ವ್ಯವಸ್ಥಾಪಕರು ಶುಭ ಶುಕ್ರವಾರದಂದು ಭೂಮಿಪೂಜೆ ಏರ್ಪಡಿಸಿದ್ದರು. ಕಾರ್ಯಕ್ರಮದ ಕೊನೆಗೆ ನೆರೆದ ಭಕ್ತರಿಗೆ ಚಿತ್ರಾನ್ನ ಸಂತರ್ಪಣೆಯು ಏರ್ಪಾಡಾಗಿತ್ತು.   ಈ ಅನ್ನ ಪ್ರಸಾದಕ್ಕೆ ವಿಷ ಸೇರಿದ್ದುದರಿಂದ ಸೇವಿಸಿದ ಅನೇಕ ಅಮಾಯಕ ಭಕ್ತರು ಸ್ವಾಸ್ಥ್ಯ ಕಳೆದುಕೊಂಡರು, ಕೂಡಲೇ ಚಿಕಿತ್ಸೆಗೆ ದಾಖಲಿಸುವ ವ್ಯವಸ್ಥೆಯಾಯಿತು. ಹಲವರು ತೀವ್ರವಾಗಿ […]

Continue Reading

ಬಾಗಿ ನೆಡೆಯೋಣ

ಪ್ರತಿ ದಿನವೂ ನಮ್ಮ ಪಾಲಿಗೆ ಹೊಸತೇ. ಏಳುವಾಗಲೇ ಕೆಲ ನೀರಿಕ್ಷೆಯೊಂದಿಗೆ, ಕೆಲವು ಕನಸುಗಳೊಂದಿಗೆ ಏಳುತ್ತೇವೆ. ಈ ದಿನ ನನ್ನ ಪಾಲಿಗೆ ಈ ಎಲ್ಲ ಕನಸುಗಳನ್ನು ಈಡೇರಿಸಲಿ ಎಂಬ ಹಂಬಲ ಮನದಲ್ಲಿ. ಈ ಕೆಲಸ ಮಾಡಬೇಕು, ಅಲ್ಲಿಗೆ ಹೋಗಬೇಕು ಹೀಗೆ ಹತ್ತು ಹಲವು ಯೋಚನೆ. ಅದರಂತೆ ಕಾರ್ಯ. ಬೆಳಗಿನಿಂದ ರಾತ್ರಿಯ ವರೆಗೆ ನೆಡೆದ ಘಟನೆಗಳೆಲ್ಲವನ್ನೂ ಅವಲೋಕಿಸಿದರೆ ಅದೇ ನಮಗೆ ದೊಡ್ಡ ಅನುಭವದ ಬುತ್ತಿ. ನಿರೀಕ್ಷೆಯೊಂದಿಗೆ ಉದಯಿಸಿ  ಅನುಭವದೊಂದಿಗೆ ಮುಕ್ತಾಯವಾಗೋದು ನಮ್ಮ ದೈನಂದಿನ ಬದುಕು.      ಅದೊಂದು ಮುಂಜಾವು. ಮಲೆನಾಡ […]

Continue Reading

ಮಹಿಳಾ ಶಿಕ್ಷಣದ ‘ಜ್ಯೋತಿ’ಯನ್ನು ಹೊತ್ತಿಸಿದ ಸಾವಿತ್ರಿಬಾಯಿ ಫುಲೆ

ಜ್ಞಾನವೇ ಅರಿವೆಂಬ ಬೆಳಕಿನ ಮೂಲ. ಅಕ್ಷರವೇ ಜ್ಞಾನದ ಮೂಲ. ಕ್ರಾಂತಿಯೇ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ. ಹೀಗೆ ಮಹಿಳೆಯರಿಗೆ ಅಕ್ಷರದ ಅರಿವು ಮೂಡಿಸುವ ಕ್ರಾಂತಿಯ ಮೂಲಕ ಸಾಮಾಜಿಕ ಪರಿವರ್ತನೆಯ ಬೀಜ ಬಿತ್ತು ಭಾರತದಲ್ಲಿ ಮಹಿಳೆಯರಿಗೆ ಹೊಸ ದಿಕ್ಕು ತೋರಿಸಿದವರು ಸಾವಿತ್ರಿಬಾಯಿ ಫುಲೆ. ನಿನ್ನೆ, ಜನವರಿ 3ನೆಯ ತಾರೀಕು ಅವರ ಜನ್ಮಜಯಂತಿ. ಈ ಸಂದರ್ಭದಲ್ಲಿ ಸಮಾಜದ ಜ್ಯೋತಿಯಾಗಿದ್ದ ಅವರ ಬದುಕಿನ ಕಡೆಗೊಂದು ಬೆಳಕು ಚೆಲ್ಲುವ ಪ್ರಯತ್ನ.   ಬಾಲ್ಯವಿವಾಹ ವ್ಯಾಪಕವಾಗಿ ರೂಢಿಯಲ್ಲಿದ್ದ ಆ ಕಾಲಕ್ಕೆ  ಏನೂ ಅರಿಯದ‌, ಕೇವಲ 8ನೆಯ […]

Continue Reading

ಮೆದುಳಿನ ಮೇಲೆ ಸಂಗೀತದ ಪರಿಣಾಮಗಳು

ದಿನಾಂಕ 17.12.2018ರ ಪ್ರಜಾವಾಣಿ ಪತ್ರಿಕೆಯಲ್ಲಿ ಹೀಗೊಂದು ಸುದ್ದಿ ಪ್ರಕಟವಾಯಿತು. ಸ್ವರಚಿಕಿತ್ಸೆಯಿಂದಾಗಿ, ಕೋಮಾದಿಂದ ಹೊರಬಂದ ಪಶ್ಚಿಮಬಂಗಾಳದ ಯುವತಿ – ಸಂಗೀತಾ ಎನ್ನುವವರ ಜೀವವನ್ನು ಉಳಿಸಿದ ಪಿಟೀಲು ವಾದನ! – ಈಗ ಚಿಕಿತ್ಸೆಯನ್ನು ಪಡೆಯುತ್ತಿರುವ ಸಂಗೀತಾ. ಇದನ್ನು ಎಂ. ಎನ್‌. ಯೋಗೇಶ್‌ ಮಂಡ್ಯ ಪ್ರಕಟಿಸಿದರು. ಈ ಸುದ್ದಿಯು ಪ್ರಜಾವಾಣಿಯಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿಯೂ, ಇನ್ನೂ ಅನೇಕ ವಾರ್ತಾಪತ್ರಿಕೆಗಳಲ್ಲಿಯೂ ಬಹಳವಾಗಿ ಸುತ್ತಿ, ಪ್ರಸಿದ್ಧಿಯನ್ನೂ ಪಡೆಯಿತು.   ವಿಷಯವೇನೆಂದರೆ, ಹಿಂದೂಸ್ಥಾನೀ ಸಂಗೀತದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಪಿಟೀಲುವಾದಕಿಯಾದ ಡಾ. ಎನ್‌. ರಾಜಂ ಅವರ […]

Continue Reading

ಭರವಸೆಯು ಬಾಡದಿರಲಿ,ನಂಬುಗೆ ಬಗೆ ತುಂಬಲಿ

ಬೆಳ್ಳಂಬೆಳಿಗ್ಗೆ ಮನೆಯ ಮೂಲೆಯಲ್ಲಿದ್ದ ತನ್ನ ಉಳಿತಾಯದ ಮಣ್ಣಿನ ಗೋಲಕವನ್ನು ಎತ್ತಿಹಾಕಿ‌, ಚದುರಿ ಬಿದ್ದ ಚಿಲ್ಲರೆ ಕಾಸನ್ನೆಲ್ಲ ಹೆಕ್ಕಿ ಎಣಿಸಿ, ಬೊಗಸೆಗೂಡಿಸಿಕೊಂಡು, ಓಡಿಬಂದು ಊರ ದೇಗುಲದ ದೇವರಮೂರ್ತಿಯೆದುರು  ನಿಂತಿದ್ದಳು ಆ ಆರರ ಪುಟ್ಟಬಾಲೆ. ಎಳೆನೀರ ತಿರುಳಿನಂತಿದ್ದ ಆಕೆಯ ಮೃದುಕಪೋಲದ ಮೇಲೆ ಕಂಬನಿ, ಧಾರೆ ಧಾರೆಯಾಗಿ ಜಾರುತ್ತಿತ್ತು. ಜಗತ್ತಿನ ಆತಂಕವೆಲ್ಲ ಆಕೆಯ ಪುಟ್ಟ ಬಟ್ಟಲುಗಣ್ಣುಗಳಲ್ಲಿ ಮನೆ ಮಾಡಿಕೊಂಡಿತ್ತು. ಏನನ್ನೋ ಕೇಳಲು ಆಕೆ ಅರ್ಚಕರ ಮುಖವನ್ನೇ ನೋಡುತ್ತ ಕ್ಷಣಕಾಲ ನಿಲ್ಲುತ್ತಾಳೆ. ಊಹುಂ, ಅರ್ಚಕರು ಮಂತ್ರ ಹೇಳುವುದರಲ್ಲಿ ತನ್ಮಯರು. ಯಾರೋ ಶ್ರೀಮಂತರು ಅರ್ಚನೆ […]

Continue Reading

ನಕ್ಷತ್ರಗಳ ಕಥೆ

ಕಿಟಕಿಯಾಚೆ ಆಗಸದಲ್ಲಿ ಮಿನುಗುವ ಕೋಟಿ ನಕ್ಷತ್ರಗಳನ್ನು ನೋಡುತ್ತಾ ಮಗುವೊಂದು ತಾಯಿಯಲ್ಲಿ ಪ್ರಶ್ನಿಸುತ್ತಿತ್ತು, “ಅಮ್ಮಾ, ನಕ್ಷತ್ರಗಳೇಕೆ ಮಿನುಗುತ್ತವೆ?” ತಾಯಿ ಉತ್ತರಿಸಿದಳು, “ಮಗನೇ, ನಕ್ಷತ್ರಗಳು ಮಿನುಗುವುದಿಲ್ಲ. ಅವು ನಿರಂತರವಾಗಿ ನಾನಾ ಬಗೆಯ ಕಿರಣಗಳನ್ನು ಹೊರಡಿಸುತ್ತಲೇ ಇರುತ್ತವೆ‌. ಆ ಕಿರಣಗಳು ಭೂಮಿಯ ಗುರುತ್ವಾಕರ್ಷಣ ಮಂಡಲವನ್ನು ಪ್ರವೇಶಿಸುವಾಗ ಛಿದ್ರವಾಗುತ್ತವೆ. ಆ ರೀತಿಯಲ್ಲಿ ಕಿರಣಗಳು ಛಿದ್ರವಾಗುವುದರಿಂದಲೇ ನಮ್ಮ ಕಣ್ಣಿಗದು ಮಿನುಗಿದಂತೆ ಗೋಚರಿಸುತ್ತದೆ.”   “ನಕ್ಷತ್ರಗಳೇಕೆ ಕಿರಣಗಳನ್ನು ಹೊರಡಿಸುತ್ತವೆ?” ಮತ್ತೆ ಕುತೂಹಲದಿಂದಲೇ ಪ್ರಶ್ನಿಸಿತು ಮಗು. ತಾಯಿ ತಾಳ್ಮೆಯಿಂದಲೇ ಉತ್ತರಿಸಿದಳು. “ಮಗೂ ಈ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ […]

Continue Reading

ನಮ್ಮೂರೇ ವಾಸಿ

ಬೆಳ್ಳಂಬೆಳಗ್ಗೆ ದಡಬಡಿಸಿ ಎದ್ದು, ಹಾಲಿನ ಪ್ಯಾಕೆಟ್ ಕತ್ತರಿಸಿ ಹಾಲನ್ನು ಪಾತ್ರೆಗೆ ಬಗ್ಗಿಸುವಾಗ, ದಿನವೂ ಆಗತಾನೆ ಹಟ್ಟಿಯಿಂದ ಕರೆದುತಂದ ನೊರೆಹಾಲಿನಲ್ಲಿ ಮಾಡುವ ಫಿಲ್ಟರ್ ಕಾಫಿಯ ಪರಿಮಳ ಮೂಗಿಗೆ ಬಡಿದಂತಾಗುವುದು. ತರಕಾರಿ ಸಿಪ್ಪೆಯನ್ನು, ಅಳಿದುಳಿದ ಪದಾರ್ಥಗಳನ್ನು ಕಸದ ತೊಟ್ಟಿಗೆ ಸುರಿವಾಗ, ಅಲ್ಲಿದ್ದರೆ ಗೊಬ್ಬರದ ಗುಂಡಿಗೆ ಹಾಕಬಹುದಿತ್ತು ಎಂದೆನಿಸುವುದು. ಅಕ್ಕಿ-ಬೇಳೆ ತೊಳೆದ ನೀರನ್ನು ಸಿಂಕ್ ಗೆ ಚೆಲ್ಲುವಾಗ, ಅಲ್ಲಿ ಕೊಟ್ಟಿಗೆಯಲ್ಲಿರುವ ನಂದಿನಿ, “ಚೆಲ್ಲುವ ಬದಲು ನನಗಾದರೂ ಕೊಟ್ಟಿದ್ದರೆ ಖುಷಿಯಿಂದ ಕುಡಿಯುತ್ತಿದ್ದೆ ಕಣೇ” ಎಂದಂತೆನಿಸಿ, ಅಲ್ಲಿ ಅಡುಗೆಮನೆಯ ಮೂಲೆಯಲ್ಲಿಡುವ ಅಕ್ಕಚ್ಚಿನ ಬಕೆಟ್ ನ […]

Continue Reading

ಹವ್ಯಕ ಸಮಾಜದ ಹೊಣೆಗಾರಿಕೆಗಳು

  ನಮ್ಮ ಹವ್ಯಕ ಸಮಾಜ ಒಂದು ವಿಶೇಷವಾದ ಸಮಾಜವಾಗಿದ್ದು ಹಲವಾರು ವಿಷಯಗಳಲ್ಲಿ ತನ್ನದೇ ಆದ ಅಸ್ಮಿತೆಯನ್ನು ಹೊಂದಿದೆ. ಸಹ್ಯಾದ್ರಿಯ ಮಡಿಲಿನ ಬನವಾಸಿಯ ಸುತ್ತಮುತ್ತ ವ್ಯಾಪಕವಾಗಿದ್ದಂತಹ ಈ ನಮ್ಮ ಸಮುದಾಯ, ಕಾಲಾಂತರದಲ್ಲಿ ದೇಶದ ಬೇರೆ ಬೇರೆ ಕಡೆಗಳಲ್ಲಿ ವ್ಯಾಪಿಸಿತು. ಅಂತೆಯೇ ಅಹಿಚ್ಛತ್ರದಲ್ಲಿಯೂ ಕೂಡ ಅಸ್ಮಿತೆಯನ್ನು ತೋರಿಸಿತು. ಮಯೂರವರ್ಮನ ಆಳ್ವಿಕೆಯ ಕಾಲದಲ್ಲಿ ವಿಶೇಷವಾದ ಆದರಣೆಗೆ ಒಳಪಟ್ಟು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಸನಿಹದ ಹೈಗುಂದ ಎಂಬ, ಶರಾವತೀ ನದಿಯಿಂದ ಆವರಿಸಲ್ಪಟ್ಟ ಒಂದು ಪುಟ್ಟ ನಡುಗಡ್ಡೆಯಲ್ಲಿ ಪುನಶ್ಚೇತನವನ್ನು ಹೊಂದಿತು. ಅಲ್ಲಿಂದ ಮುಂದಕ್ಕೆ ದಕ್ಷಿಣೋತ್ತರ […]

Continue Reading