ತಪ್ಪು ಮಾಡಿದವ ಯಮನಾದರೂ ಅಷ್ಟೇ!
ಕಾಲವನ್ನು ನಿರೀಕ್ಷಿಸುತ್ತಿದ್ದ ಸತ್ಯವತಿ ಒಂದು ದಿನ ಅಂಬಾಲಿಕೆಯ ಬಳಿ ಹೋದಳು. ಅಂಬಿಕೆಯ ಜೊತೆಗಿನ ಮಾತುಕತೆಯ ಪುನರಾವರ್ತನೆಯಾಯಿತು. ನಿಯೋಗದಿಂದ ಮಗುವನ್ನು ಪಡೆಯುವ ಮಾತು. ಅಂಬಾಲಿಕೆ ಒಪ್ಪಲ್ಲಿಲ್ಲ. ಸತ್ಯವತಿ ಬಿಡಲಿಲ್ಲ. ಧರ್ಮದ ಮಾತುಗಳು, ಹಳೆಯ ನಿದರ್ಶನಗಳು, ತರ್ಕಗಳು ಪರಸ್ಪರ ವಿನಿಮಯಗೊಂಡವು. ಕೊನೆಗೆ ಅಂಬಾಲಿಕೆ ತಲೆಬಾಗಿದಳು. ಸತ್ಯವತಿ ಸಂತಸಗೊಂಡಳು. ವ್ಯಾಸರನ್ನು ಆಹ್ವಾನಿಸಿದಳು. ವ್ಯಾಸರು ಬಂದರು. ಅಂಬಾಲಿಕೆಯ ಶಯನಮಂದಿರವನ್ನು ಪ್ರವೇಶಿಸಿದರು. ವ್ಯಾಸರನ್ನು ಕಂಡ ಅಂಬಾಲಿಕೆ ಅಂಬಿಕೆಯಂತೆಯೇ ಭಯಗೊಂಡಳು. ನಡುಗಿದಳು, ಶರೀರವು ಬೆವರಿತು, ಬಿಳುಪೇರಿತು, ಬಿಳುಚಿಗೊಂಡಳು. ನಿರ್ವಿಕಾರಚಿತ್ತದಿಂದ ವ್ಯಾಸರು ಮಗುವನ್ನು ಅನುಗ್ರಹಿಸಿದರು. ಮುಂದಾಗುವುದನ್ನು […]
Continue Reading