ಶ್ರೀಸಂಸ್ಥಾನದವರ 26ನೆಯ ಸಂನ್ಯಾಸಗ್ರಹಣ ದಿನಾಚರಣೆಯ ಅಂಗವಾಗಿ ಜೀವನದಾನ ಹಾಗೂ 26ನೆಯ ಯೋಗಪಟ್ಟಾಭಿಷೇಕ ದಿನಾಚರಣೆಯ ಅಂಗವಾಗಿ ಮಹಾಪಾದುಕಾಪೂಜೆ‌ ಕಾರ್ಯಕ್ರಮಗಳ ಆಯೋಜನೆ

ಪ್ರಕಟಣೆ

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ

 

ಇಪ್ಪತ್ತಾರನೆಯ

ಸಂನ್ಯಾಸಗ್ರಹಣ ದಿನಾಚರಣೆ

ಕಷ್ಟ-ನಷ್ಟಗಳಿಗೆ ಒಳಗಾಗಿ ಬದುಕಿನ ಬೆಳಕು ಕಾಣದ ಕುಟುಂಬಕ್ಕೆ ಸದಾಶ್ರಯ

ಜೀವನದಾನ

 

ಇಪ್ಪತ್ತಾರನೆಯ

ಯೋಗಪಟ್ಟಾಭಿಷೇಕ ದಿನಾಚರಣೆ

ಸಹಸ್ರ-ಸಹಸ್ರ ಶಿಷ್ಯ-ಭಕ್ತರ ಭಕ್ತಿಯ ಸಮರ್ಪಣೆ

ಮಹಾಪಾದುಕಾಪೂಜೆ

 

ದೇಶ: ಶ್ರೀರಾಮಚಂದ್ರಾಪುರಮಠ ಪೆರಾಜೆ, ಮಾಣಿ

ಕಾಲ: ಜೀವನದಾನ – 9 ಏಪ್ರಿಲ್ 2019

ಯೋಗಪಟ್ಟಾಭಿಷೇಕ ದಿನಾಚರಣೆ – 11 ಏಪ್ರಿಲ್ 2019

 

ಸರ್ವರಿಗೂ ಹೃತ್ಪೂರ್ವಕ ಸ್ವಾಗತ

 

ಜೀವನದಾನ ಮತ್ತು ಯೋಗಪಟ್ಟಾಭಿಷೇಕ ದಿನ ಆಯೋಜನಾ ಸಮಿತಿ

ಶ್ರೀರಾಮಚಂದ್ರಾಪುರಮಠ ಪೆರಾಜೆ, ಮಾಣಿ

~~~~~~~~~~~

 

ಗೌರವಾನ್ವಿತ ಶ್ರೀರಾಮಚಂದ್ರಾಪುರಮಠದ ಶಿಷ್ಯ-ಭಕ್ತ ಬಾಂಧವರೇ,

 

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು

ನಮ್ಮ ಬದುಕನ್ನು ಬೆಳಗುವ ಗುರುವರ್ಯರಾಗಿ ಶ್ರೀಪೀಠದಲ್ಲಿ ಸಾನ್ನಿಧ್ಯ ನೀಡಿರುವುದು ನಮ್ಮೆಲ್ಲರ ಪೂರ್ವಪುಣ್ಯ. ಪರಮಪೂಜ್ಯ ಪೂರ್ವಗುರುವರ್ಯರಿಂದ ಸಂನ್ಯಾಸ ಸ್ವೀಕರಿಸಿ ಇಪ್ಪತ್ತೈದು ಸುದೀರ್ಘ ಸಂವತ್ಸರಗಳ ಕಾಲ ಶ್ರೀಪೀಠವನ್ನು ಮುನ್ನಡೆಸಿ, ಗೋರಕ್ಷಣೆಯೇ ಮೊದಲಾದ ಸತ್ಕಾರ್ಯಗಳಿಂದ ಲೋಕಮಾನ್ಯರಾದವರು ಪರಮಪೂಜ್ಯರು. ಜೊತೆಗೆ ಶಿಷ್ಯ-ಭಕ್ತರ ಹೃದಯದಲ್ಲಿ ದೇದೀಪ್ಯಮಾನರಾದವರು.

 

ಪ್ರಕೃತ, ಪರಮಪೂಜ್ಯ ಶ್ರೀಸಂಸ್ಥಾನದವರ ಇಪ್ಪತ್ತಾರನೆಯ ವರ್ಷದ ಸಂನ್ಯಾಸಗ್ರಹಣ ಹಾಗೂ ಯೋಗಪಟ್ಟಾಭಿಷೇಕ ದಿನಾಚರಣೆಗಳು ಕ್ರಮವಾಗಿ ವಿಕಾರಿ ಸಂವತ್ಸರದ ಚೈತ್ರ ಶುಕ್ಲ ಚತುರ್ಥೀ ಮಂಗಳವಾರ (9.04.2019) ಹಾಗೂ ಷಷ್ಟೀ ಗುರುವಾರ (11.04.2019) ಗಳಂದು ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಸಾನ್ನಿಧ್ಯದಲ್ಲಿ ಶ್ರೀರಾಮಚಂದ್ರಾಪುರಮಠ ಪೆರಾಜೆ, ಮಾಣಿಯಲ್ಲಿ ಸಂಪನ್ನಗೊಳ್ಳಲಿವೆ.

 

ಸಂನ್ಯಾಸಗ್ರಹಣ ದಿನವನ್ನು ಸಂಕಷ್ಟಕ್ಕೆ ಒಳಗಾದ ಕುಟುಂಬವನ್ನು ಶ್ರೀಮಠದ ಜೀವನದಾನ ಟ್ರಸ್ಟ್ ಮೂಲಕ ದತ್ತು ಸ್ವೀಕರಿಸುವ ಜೀವನದಾನವಾಗಿ ಆಚರಿಸಲಾಗುತ್ತಿದೆ. ಅಂದು ಮಧ್ಯಾಹ್ನ 12.00 ಗಂಟೆಗೆ ಗಣ್ಯಮಾನ್ಯರ ಸಮ್ಮುಖದಲ್ಲಿ ಜನಾಂಗಣದಲ್ಲಿ ಈ ಹೃದಯಂಗಮ ಕಾರ್ಯಕ್ರಮ ನಡೆಯಲಿದೆ.

 

ಯೋಗಪಟ್ಟಾಭಿಷೇಕದ ದಿನಾಚರಣೆಯನ್ನು ಮಹಾಪಾದುಕಾಪೂಜೆಯಾಗಿ ಆಚರಿಸಲಾಗುತ್ತಿದೆ. ಇಪ್ಪತ್ತೈದು ವರ್ಷಗಳ ಸ್ಮರಣೆಯ ಶಾಶ್ವತತೆಗಾಗಿ ನಿರ್ಮಿಸಲಾಗುತ್ತಿರುವ ಬೃಹತ್ ಶಿಲಾಮಯ ಪಾದುಕೆಯ ಸನ್ನಿಧಿಯಲ್ಲಿ ಪ್ರಾತಃಕಾಲದಿಂದ ಸಹಸ್ರ ಸಹಸ್ರ ಶಿಷ್ಯ-ಭಕ್ತರು ಪಾದುಕಾಪೂಜೆಯ ಉಪಾಸನೆಯ ಪುಣ್ಯಭಾಗಿಗಳಾಗಲಿದ್ದಾರೆ.

 

ತಾವು ಈ ಕಾರ್ಯಕ್ರಮಗಳಲ್ಲಿ ಸಕುಟುಂಬ ಭಾಗಿಗಳಾಗಿ ಗುರುದೇವತಾನುಗ್ರಹಕ್ಕೆ ಪಾತ್ರರಾಗಬೇಕೆಂದು ವಿಜ್ಞಾಪಿಸಿಕೊಳ್ಳುತ್ತೇವೆ.

 

ಅಧ್ಯಕ್ಷರು ಮತ್ತು ಪದಾಧಿಕಾರಿಗಳು

ಜೀವನದಾನ ಮತ್ತು ಯೋಗಪಟ್ಟಾಭಿಷೇಕ ದಿನ ಆಯೋಜನಾ ಸಮಿತಿ

ಶ್ರೀರಾಮಚಂದ್ರಾಪುರಮಠ ಪೆರಾಜೆ, ಮಾಣಿ

 

ಸಂಪರ್ಕ:

ಶ್ರೀರಾಮಚಂದ್ರಾಪುರಮಠ ಪೆರಾಜೆ, ಮಾಣಿ
ಅಂಚೆ: ಬುಡೋಳಿ
ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ – 574253

9449487052
9448261146

 

ಮಹಾಪಾದುಕಾಪೂಜೆ ಸೇವಾ ಕಾಣಿಕೆ 1500/-

{ಸೇವಾಕರ್ತರಿಗೆ ಬೆಳ್ಳಿಯ ಕಿರು ಪಾದುಕೆಯನ್ನು ಪ್ರಸಾದರೂಪದಲ್ಲಿ ನೀಡಲಾಗುವುದು.}

 

ಬ್ಯಾಂಕ್ ಅಕೌಂಟ್ ವಿವರ:

Account Name: Shree Raghaveshwara Bharathi Maha Swamiji
A/c No: 4012500100677501
IFSC Code: KARB0000401
Branch Name: Kabaka
Bank: Karnataka Bank

Author Details


Srimukha

Leave a Reply

Your email address will not be published. Required fields are marked *