ಗೋಕರ್ಣ: ವಿವಿವಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪರಿಸರ ಸ್ನೇಹಿ ಅವಜಲ ಘಟಕವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
ಶ್ರೀಸಂಸ್ಥಾನದವರು ರಾಸಾಯನಿಕ ರಹಿತ, ಕೇವಲ ತುಳಸಿ, ಸ್ಫಟಿಕ ಮತ್ತು ಹಾಸುಗಲ್ಲು ಬಳಸಿ ಘಟಕ ನಿರ್ಮಿಸಿದ ಬಾಲಚಂದ್ರ ಹೆಗಡೆ ಮತ್ತು ಗಜಾನನ ಹೆಗಡೆಯವರನ್ನು ಸನ್ಮಾನಿಸಿ ಆಶೀರ್ವದಿಸಿದರು.
“ಪ್ರಕೃತಿಯಲ್ಲಿ ಸಿಗುವುದೆಲ್ಲವೂ ಶುದ್ಧ. ನಾವು ಅದನ್ನು ಮಲಿನಗೊಳಿಸುತ್ತೇವೆ. ಉಪಯೋಗಿಸಿ ಅಶುದ್ಧವಾದ್ದನ್ನು ಶುದ್ಧ ಮಾಡುವುದು ಪ್ರವಾಹದ ವಿರುದ್ಧ ಈಜಿದಂತೆ. ಕೊಳಚೆ ನೀರನ್ನು ಬಾವಿ ನೀರಿನಷ್ಟೇ ಶುದ್ಧಗೊಳಿಸುವ ಈ ಅವಜಲ ಘಟಕ ಎಲ್ಲೆಡೆಗೆ ಮಾದರಿ. ಇಂಥ ಪರಿಸರ ಸ್ನೇಹಿ ಮಾದರಿ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು” ಎಂದು ಶ್ರೀಸಂಸ್ಥಾನದವರು ಸೂಚಿಸಿದರು.