ಗೋ ಆಶ್ರಮದಲ್ಲಿ ತಂತ್ರಜ್ಞರಿಂದ ಶ್ರಮ ಸೇವೆ.

ಸುದ್ದಿ

ಮಾಲೂರು: ತಾಲೂಕಿನ ಗಂಗಾಪುರ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಡೆಲ್ – ಇಎಂಸಿ ಗೋಪಾಲ್ಸ್ ಸ್ವಯಂಸೇವಕರು ಗುರುವಾರ ಶ್ರಮ ಸೇವೆ ನಡೆಸಿದರು.

 

ಸೋಮವಾರ ಸುರಿದ ಬಾರಿ ಮಳೆಯಿಂದ ಗೋಆಶ್ರಮದ ಕೊಟ್ಟಿಗೆಯೊಂದರ ಗೋಡೆ ಭಾಗಶಃ ಕುಸಿದಿದ್ದು, ಇದರ ಕಲ್ಲುಗಳ ಸ್ಥಳಾಂತರಿಸಿ, ಸ್ವಚ್ಛ ಮಾಡಿದರು.

 

ಗೋಶಾಲೆಯಲ್ಲಿರುವ ಸುಮಾರು ಎಂಟು ಗೋತಳಿಗಳ ವಿಶೇಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಗೋಶಾಲೆಯ ಆವರಣದಲ್ಲಿ ವರ್ಷದ ಹಿಂದೆ ತಾವು ನೆಟ್ಟ ಗಿಡಗಳ ನಡುವೆ ಬೆಳೆದ ಕಳೆಗಳನ್ನು ಕಿತ್ತು ಸ್ವಚ್ಛ ಗೊಳಿಸಿದರು.

ಡೆಲ್ ಇಎಂಸಿ ಯ ಸೀನಿಯರ್ ಕನ್ಸಲ್ಟೆಂಟ್ ಮತ್ತು ಸಿ ಎಸ್ ಆರ್ ಸಂಯೋಜಕ ಅಬ್ದುಲ್ ಮತೀನ್ ನೇತೃತ್ವದಲ್ಲಿ ಅಮಿತ್, ಸತೀಶ್ ಸೇರಿ ಇಪ್ಪತ್ತಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು.

 

ಗೋಪಾಲ್ಸ್ ತಂಡದ ಕಿರಣ್, ರಾಮ್ ಸುಬ್ರಹ್ಮಣ್ಯನ್, ಗೋಆಶ್ರಮದ ವಿಶೇಷಕರ್ತವ್ಯಾಧಿಕಾರಿ ರಾಮಚಂದ್ರ ಅಜ್ಜಕಾನ, ಕೃಷ್ಣ ಭಟ್, ಅನಂತ ಹೆಗಡೆ, ಲಕ್ಷ್ಮೀಶ್ ಮತ್ತಿತರರು ಉಪಸ್ಥಿತರಿದ್ದರು.

Author Details


Srimukha

1 thought on “ಗೋ ಆಶ್ರಮದಲ್ಲಿ ತಂತ್ರಜ್ಞರಿಂದ ಶ್ರಮ ಸೇವೆ.

  1. ಸಮಾಜದಲ್ಲಿ ಕೇವಲ ಸ್ವಾರ್ಥ ಪ್ರತಿಷ್ಠೆ ತೋರ್ಪಡಿಕೆ ವ್ಯವಹಾರಿಕ ಲಾಭದಾಯಕ ಅವಕಾಶಗಳನ್ನೇ ನಿರೀಕ್ಷಿಸುವ ಈ ಕಾಲಘಟ್ಟದಲ್ಲಿ ನಿಮ್ಮ ಅಪೂರ್ವವಾದ ಗೋ ಸೇವೆ ಅತ್ಯಮೂಲ್ಯವಾದುದು ನಿಮ್ಮ ಸೇವೆಗೆ ನಮ್ಮ ಅನಂತ ಧನ್ಯವಾದಗಳು ನಿಮ್ಮೊಂದಿಗೆ
    ನಿಮ್ಮ
    ವಿಶ್ವ ಪಾಂಡವರ ಗೋ ಆಶ್ರಮ
    ಶಿವನಪುರ.
    ಗೊಲ್ಲಹಳ್ಳಿ ಗೇಟ್ ಬಳಿ. ಮಾಲೂರು – ಚಿಂತಾಮಣಿ ರಸ್ತೆ ನಂದಗುಡಿ ಹೋಬಳಿ ಹೊಸಕೋಟೆ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ

Leave a Reply

Your email address will not be published. Required fields are marked *