ಸಾಗರ: ನವರಾತ್ರ ನಮಸ್ಯಾ ಕಾರ್ಯಕ್ರಮದ ಪ್ರಯುಕ್ತ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪುರ ಪ್ರವೇಶದ ಅಲಂಕಾರವನ್ನು ಗಣ್ಯರು ವೀಕ್ಷಿಸಿದರು.
ಸಾಗರದಲ್ಲಿ ಭರ್ಜರಿಯಾಗಿ ನಡೆಯುತ್ತಿರುವ ಶ್ರೀ ಗುರುಗಳ ಪುರ ಪ್ರವೇಶದ ಸುಂದರ ಅಲಂಕಾರವನ್ನು ನೋಡಲು ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್, ಮಾಜಿ ಸಚಿವ ಹರತಾಳು ಹಾಲಪ್ಪ, ನಗರಸಭಾ ಸದಸ್ಯ ಟಿ ಡಿ ಮೇಘರಾಜ್, ಪುರ ಪ್ರವೇಶ ಮತ್ತು ನಗರ ಅಲಂಕಾರ ಸಮಿತಿಯ ಸಂಚಾಲಕ ಗಣೇಶ್ ಪ್ರಸಾದ್ ಕೆ. ಆರ್., ಸಾಗರ ಪುರ ಪ್ರವೇಶ ಗೀತೆಯ ಸಂಗೀತ ಸಂಯೋಜಕ ಸುಜಯ್ ಎಸ್. ವಿ. ಶೆಣೈ ಮತ್ತು ಪುರಪ್ರವೇಶ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.