ಅಚ್ಚರಿ ಆದರೂ ಇದು ನಿಜ !!ಮಾಣಿ ಮಠದ ವಾರ್ಷಿಕೋತ್ಸವ . ಬೆಳಗ್ಗೆ ಹತ್ತುಗಂಟೆಗಾಗಲೇ ತುಂಬಿ ತುಳುಕಿದ ಜನ ಭವನ ! ನಿತ್ಯ ಪೂಜೆ , ಅನುಷ್ಠಾನ ಪೂರೈಸಿ ವೇದಿಕೆಯತ್ತ ಗುರುಗಳ ಆಗಮನ . ಮತ್ತೆರಡು ಜನಭವನ ತುಂಬುವಷ್ಟು ಶಿಷ್ಯರು ಹೊರಾಂಗಣದಲ್ಲಿ !! ಗುರುಗಳನ್ನು ಕಣ್ಣಲ್ಲಿ ತುಂಬಿಕೊಳ್ಳಲು ಕಾತರ , ಮಂತ್ರಾಕ್ಷತೆ ಪಡಕೊಳ್ಳುವ ಆತುರ ! ಎಲ್ಲರ ಬಾಯಲ್ಲೂ ಮಂತ್ರಾಕ್ಷತೆ ಎಷ್ಟು ಹೊತ್ತಿಗೆ ಎಂಬ ಪ್ರಶ್ನೆ !!

ಮಂತ್ರಾಕ್ಷತೆಗೆ ಸರತಿಯ ಸಾಲಿಗೆ ಬನ್ನಿ ಎಂಬ ಕರೆ ಬಂದಾಗ ಎಲ್ಲರ ಚರವಾಣಿಯಿಂದ ದೂರದ ಮನೆಯಲ್ಲಿದ್ದ ತಮ್ಮವರಿಗೆ ಮಂತ್ರಾಕ್ಷತೆ ಸುರುವಾತು ಬೇಗ ಬನ್ನಿ !! ನೋಡ ನೋಡುತ್ತಿದ್ದಂತೆ ಸರತಿಯ ಸಾಲು ಜನಭವನಕ್ಕೆ ಮೂರು ಸುತ್ತು ಸುತ್ತಿ ಹನುಮಂತನ ಬಾಲ ಬೆಳೆದಂತೆ , ದೂರದಲ್ಲಿದ್ದ ಹನುಮಂತನ ಗುಡಿ ಮೀರಿ ಬೆಳೆಯುತ್ತಲೇ ಇತ್ತು!. ಗಂಟೆ ಐದು ಬಾರಿಸುವ ಹೊತ್ತು , ಗುರುಗಳು ನಿತ್ಯಾನುಷ್ಠಾನ , ಪೂಜೆಗೆ ಪೂರೈಸಿ ಮತ್ತೆ ಬರುವರು ಎಂಬ ಕರೆ ಧ್ವನಿವರ್ಧಕಲ್ಲಿ ! ಬೇಯಿಸದ ಅಕ್ಕಿ (ಮಂತ್ರಾಕ್ಷತೆ ) ಇನ್ನಷ್ಟೇ ಸಿಗಬೆಕಿದ್ದವರಿಗೆ ಬೇಯಿಸಿದ ಅಕ್ಕಿ (ಅನ್ನ)ಉಣ್ಣುವ ನೆನಪಾಯಿತು. ಉಂಡು ಬಂದಾಗ ಗಂಟೆ ರಾತ್ರಿ 8.20.
ಮತ್ತೆ ಗುರುಗಳು ಪೀಠಕ್ಕೆ ಬಂದಾಗ ಸರತಿಯ ಸಾಲು ಬೆಳೆಯುತ್ತಲೇ ಸಾಗಿ ಹೊರಾಂಗಣಕ್ಕೂ ಹೊರಕ್ಕೆ !! ರಾತ್ರಿ ಗಂಟೆ ಹನ್ನೊಂದು ! ಜೇಬಿನಲ್ಲಿದ್ದ ಚರವಾಣಿಯ ಸದ್ದು ಅತ್ತಲಿಂದ !! ” ಈಗ ಬಂದರೆ ಮಂತ್ರಾಕ್ಷತೆ ಸಿಕ್ಕುಗಾ “? ಹಲವರ ಮೊಬೈಲಿನಿಂದ ಬೇಗ ಬಂದರೆ ಸಿಕ್ಕುಗು ಎಂಬ ಧ್ವನಿಗೆ ಅತ್ತ!!. ಸೊರಗಿದ ಸರತಿಯ ಸಾಲು ಮತ್ತೆ ಜನಭವನಕ್ಕೆ ಒಂದು ಸುತ್ತು ಬೆಳೆದು ನಿಂತಿತು .ಗಡಿಯಾರದ ಗಂಟೆ ಮುಳ್ಳು ಮೂರನೇ ಸುತ್ತಿಗೆ ಸುತ್ತಲು ಅಣಿಯಾಗುತ್ತಿದ್ದರೂ ಒಂದಿನಿತೂ ಆಯಾಸದ ಕುರುಹು ಇಣುಕದೆ , ಅಮ್ಮನ ವಾತ್ಸಲ್ಯ ತುಂಬಿದ ಕಂಗಳು ಗುರುಗಳ ಮುಖದಲ್ಲಿ , ದಣಿವರಿಯದ ಕರಗಳಿಂದ ಸರತಿಯ ಸಾಲಿನ ಕೊನೆಯ ಶಿಷ್ಯನ ಕೈಗಳಿಗೆ ದಿವ್ಯ ಮಂತ್ರಾಕ್ಷತೆ ತುಂಬಿದಾಗ ಗಂಟೆ ನಡು ರಾತ್ರಿ 12.10 !! .ದಾಖಲೆಯ ಆರು ಗಂಟೆಯಲ್ಲಿ ಮಂತ್ರಾಕ್ಷತೆ ಪಡೆದು ಧನ್ಯರಾದರು !!.
ನಾರಾಯಣ ಭಟ್ಟ ದಂಬೆಮೂಲೆ (ನಾದಂ)