ಚಿತ್ರಕಲೆ, ಸಂಗೀತ ಸಾಧನೆಯತ್ತ ಭಾವನಾ ಯಾನ

ಅಂಕುರ

ಚಿಕ್ಕಂದಿನಿಂದಲೂ ಸಂಗೀತವನ್ನು ಕೇಳುತ್ತಲೇ ಬೆಳೆದ ಈ ಪ್ರತಿಭೆ ಇಂದು ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ್ದಾಳೆ.

ಬೆಂಗಳೂರಿನ ವಿದ್ಯಾರಣ್ಯಪುರದ ಬಾಲಚಂದ್ರ ಹೆಗಡೆ ಮತ್ತು ನಾಗರತ್ನ ಹೆಗಡೆ ದಂಪತಿಯ ಪುತ್ರಿ ಭಾವನಾ ಬಾಲಚಂದ್ರ ಹೆಗಡೆ ಇಂದಿನ ‘ಅಂಕುರ’ ದ ಅಪರೂಪದ ಸಾಧಕಿ.

ಚಿಕ್ಕವಳಿದ್ದಾಗ ಅಮ್ಮ ಮನೆಯಲ್ಲಿ ಭಜನೆಯನ್ನು ಹೇಳಿಕೊಡುತ್ತಿದ್ದಳು. ಊರಿನ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಗಳಲ್ಲಿ ತಂದೆ, ಅಜ್ಜ ಎಲ್ಲಾ ಭಾಗವಹಿಸುತ್ತಿದ್ದರು. ಹೀಗೆ ನಾನೂ ಕೂಡಾ ಸಂಗೀತ ಕಲಿಯಲು ಆರಂಭಿಸಿದೆ ಎನ್ನುತ್ತಾಳೆ ಭಾವನಾ.

ವಿ. ಉಮಾ ಭಟ್ ಮತ್ತು ವಿ. ವಾಣಿಶ್ರೀ ಹೆಗಡೆ ಅವರಲ್ಲಿ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿರುವ ಈಕೆ, ಸಂಗೀತ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾಳೆ. ಅಲ್ಲದೇ ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಈಕೆಯದ್ದು.

ಸಾಯಿತೇಜಸ್ ಚಂದ್ರಶೇಖರ ಅವರ ಬಳಿಯಲ್ಲಿ ಹಾರ್ಮೋನಿಕಾ ವಾದನವನ್ನು ಕಲಿತಿದ್ದು ಹಲವಾರು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾಳೆ.

ಮಲ್ಲಿಕಾ ಎಸ್. ಮತ್ತು ಎನ್.ಎಸ್.ಕುಂಬಾರ ಅವರಲ್ಲಿ ಚಿತ್ರಕಲೆಯನ್ನೂ ಅಧ್ಯಯನ ಮಾಡುತ್ತಿದ್ದು, ಈಕೆಯ ಕಲೆಗಾಗಿ 2೦17 ರಲ್ಲಿ ರಾಜಾ ರವಿವರ್ಮ ಪ್ರಶಸ್ತಿ, ಹವ್ಯಕ ಪಲ್ಲವ ಪುರಸ್ಕಾರ ಸೇರಿದಂತೆ ಹಲವಾರು ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ.

ವಿದ್ಯಾರಣ್ಯಪುರದ ಎಸ್‌ಎಸ್‌ಆರ್‌ವಿಎಂ ಹೈಸ್ಕೂಲಿನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಭಾವನಾ, ಈಗಿನ ಸಾಧನೆ ಏನೂ ಅಲ್ಲ. ಇನ್ನೂ ಹೆಚ್ಚು ಸಾಧಿಸುವ ತವಕವಿದೆ. ನನ್ನೆಲ್ಲಾ ಸಾಧನೆಯ ಹಿಂದೆ ತಂದೆ-ತಾಯಿಯ ಮತ್ತು ಗುರುಗಳ ಆಶೀರ್ವಾದವೇ ಕಾರಣ’ ಎಂಬುದು ಭಾವನಾಳ ಅಂಬೋಣ.

Author Details


Srimukha

Leave a Reply

Your email address will not be published. Required fields are marked *