ಗ್ರಹಣ

ಲೇಖನ

ವಿಕಾರಿ ನಾಮ ಸಂವತ್ಸರ ಆಶಾಢ ಮಾಸ ಶುಕ್ಲ ಪಕ್ಷ ಪೂರ್ಣಿಮಾ ತಿಥಿ 16.7.2019 ಮಂಗಳವಾರ ಉತ್ತರ ಆಷಾಢ ನಕ್ಷತ್ರ ಧನು/ ಮಕರ ರಾಶಿ ಎಲ್ಲಿ ಕೇತುಗ್ರಸ್ತ ಖಂಡಗ್ರಾಸ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಆಚರಿಸ ತಕ್ಕದ್ದು

 

16ನೇ ತಾರೀಕು ರಾತ್ರಿ ಗಂಟೆ 01:32:35 ನಿಮಿಷ ಗ್ರಹಣ ಸ್ಪರ್ಶ ವಾಗುವುದು. 3: 1.12 ಕ್ಕೆ ಮಧ್ಯಕಾಲಮಧ್ಯಕಾಲ
4.29:50 ಕ್ಕೆಮೋಕ್ಷಕಾಲ

 

ಗ್ರಹಣ ಕಾಲಗಳಲ್ಲಿ ಮಾಡಬೇಕಾದ ಕರ್ತವ್ಯಗಳು

 

ಭೋಜನ ವಿಚಾರ

16.07.2019 ಮಂಗಳವಾರ ಮಧ್ಯಾಹ್ನ ಗಂಟೆ 03:55 ರಿಂದ ಗ್ರಹಣ ಮೋಕ್ಷ ಪರಿಯಂತ ಭೋಜನ ನಿಷಿದ್ಧ
ಬಾಲ, ವೃದ್ಧ, ರೋಗಿಗಳು ರಾತ್ರಿ ಗಂಟೆ 09:55 ತನಕ ಅಲ್ಪ ಆಹಾರ ಸೇವನೆ ಮಾಡಬಹುದು

 

ಸ್ನಾನ

ಗ್ರಹಣ ಸ್ಪರ್ಶ ಕಾಲದಲ್ಲಿ ಸ್ನಾನ
ಗ್ರಹಣ ಮಧ್ಯಕಾಲದಲ್ಲಿ ಹೋಮ ದೇವತಾರ್ಚನೆ
ಗ್ರಹಣ ಬಿಡುವ ಸಮಯದಲ್ಲಿ ದಾನ
ಗ್ರಹಣ ಮೊಕ್ಷದ ಅಂದರ ಪುನಃ ಸ್ನಾನ( ಪುಟ್ಟ ಬಟ್ಟೆಯ ಸಹಿತ)

 

ಧನು, ಮಕರ, ಕುಂಭ, ಕನ್ಯಾ, ತುಲಾ, ವೃಷಭ, ಮಿಥುನ, ವೃಶ್ಚಿಕ ಈ ರಾಶಿಗಳಿಗೆ ಅಶುಭ ಫಲ

ಕರ್ಕಾಟಕ , ಮೀನ ರಾಶಿಗಳಿಗೆ ಶುಭ ಫಲ

ಮೇಷ, ಸಿಂಹ ರಾಶಿಗೆ ಮಧ್ಯಮ ಫಲ

 

ಧನು, ಮಕರ ,ಕುಂಭ ,ಕನ್ಯಾ , ತುಲಾ, ವೃಷಭ ,ಮಿಥುನ ,ವೃಶ್ಚಿಕ ರಾಶಿಯವರು ತುಪ್ಪದ ದೀಪವನ್ನು ಹಚ್ಚಿ ದೇವರ ಧ್ಯಾನವನ್ನು ಮಾಡಬೇಕು, ಮಾನಸಿಕ ತೊಂದರೆ, ಆರೋಗ್ಯ ತೊಂದರೆ, ಮನೆಯಲ್ಲಿ ಅಶಾಂತಿ ನೆಲೆಗೊಳ್ಳುವುದು, ದಾಂಪತ್ಯ ಜೀವನದಲ್ಲಿ ತೊಂದರೆಗಳು ಎದುರಾಗುವ ಲಕ್ಷಣಗಳು, ಹಿರಿಯ ಅಧಿಕಾರಿಗಳಿಂದ ಬರುವಂತಹ ತೊಂದರೆಗಳು, ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಕಷ್ಟ ನಷ್ಟವನ್ನು ಎದುರಿಸಬೇಕಾಗುತ್ತದೆ, ವಾಹನ ಪ್ರಯಾಣದ ಸಂದರ್ಭಗಳಲ್ಲಿ ಆಗುವ ಅಪಘಾತಗಳು ಸಂಭವಿಸುವ ಲಕ್ಷಣಗಳು ಇರುವುದರಿಂದ, ಸಹೋದರರೊಂದಿಗೆ ಜಗಳ, ಮುನಿಸು ಮನೆಯಲ್ಲಿ ಅಶಾಂತಿ, ಅಲ್ಪಾಯುಷ್ಯ, ಮಾಂಗಲ್ಯತ್ವವನ್ನು ಕಳೆದುಕೊಳ್ಳುವುದು, ಕುಟುಂಬದಲ್ಲಿ ಕಲಹಗಳು, ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಆಗುವ ಲಕ್ಷಣಗಳು ಇರುವುದರಿಂದ ಗ್ರಹಣಕಾಲದಲ್ಲಿ ಗ್ರಹಣ ಶಾಂತಿ, ಯಥಾಶಕ್ತಿ ದೇವರ ಆರಾಧನೆ ಮಾಡಿಕೊಂಡು ಬರಬೇಕು.ಅಸಾಧ್ಯವಾದಲ್ಲಿ ಅಕ್ಕಿ ಹಾಗೂ ಚಿತ್ರ ವಸ್ತ್ರದಲ್ಲಿ ಹುರುಳಿಯನ್ನು ದಾನಮಾಡಬೇಕು .ದೇವರ ಆರಾಧನೆಯನ್ನು ಮಾಡಿಕೊಂಡು ಬಂದಲ್ಲಿ ಬಂದಿರುವಂತಹ ಕಷ್ಟಗಳೆಲ್ಲ ದೂರವಾಗಿ ಭಗವಂತನ ಅನುಗ್ರಹ ದೊರೆಯುವುದು.

 

ಗ್ರಹಣದಲ್ಲಿ ಗೋವು ಭೂಮಿ ಹಿರಣ್ಯ ಧಾನ್ಯ ಮೊದಲಾದ ದಾನಗಳನ್ನು ಮಾಡುವುದರಿಂದ ಉತ್ತಮವಾದ ಪಲ ದೊರೆಯಲಿದೆ. ವಿಶೇಷವಾಗಿ ಕೇತುಗ್ರಸ್ತ ಚಂದ್ರಗ್ರಹಣದಲ್ಲಿ ಬೆಳ್ಳಿಯ ಚಂದ್ರಬಿಂಬ, ಸುವರ್ಣ ನಾಗಬಿಂಬ,ಅಥವಾ ದುರ್ಗಾ ಪ್ರತಿಮೆ,ಕಂಚಿನಪಾತ್ರೆಯಲ್ಲಿ ತುಪ್ಪವನ್ನು ದಾನವನ್ನು ಮಾಡಬೇಕು.ಹೀಗೆ ಮಾಡುವುದರಿಂದ ಗ್ರಹಣ ಸಂಬಂಧಿ ದೋಷಗಳು ನಿವಾರಣೆಯಾಗುತ್ತದೆ.

 

ಗ್ರಹಣದ ಸಮಯದಲ್ಲಿ ದೇವರ ಧ್ಯಾನ ಜಪ ಮಾಡಬೇಕು. ಗರ್ಭಿಣಿ ಹೆಂಗಸರು, ಮಕ್ಕಳು, ರೋಗಿಗಳು ಈಸಂದರ್ಭದಲ್ಲಿ ಹೊರಗಡೆ ಓಡಾಡುವುದು ಶುಭವಲ್ಲ.

 

ಈ ಶ್ಲೋಕವನ್ನು ಗ್ರಹಣ ದೋಷ ನಿವಾರಣೆ ಗೋಸ್ಕರವಾಗಿ ಪ್ರಾರ್ಥನೆ ಮಾಡಿ

 

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||

 

ಶುಭಂ

Author Details


Srimukha

Leave a Reply

Your email address will not be published. Required fields are marked *