ನಮ್ಮ ಅನೇಕ ಸಂಶೋಧನಾ ಪ್ರಕಾರ ಮಾಂಸಾಹಾರ ಮನುಷ್ಯನ ಆಹಾರ ಪದ್ಧತಿ ಅಲ್ಲವೆಂಬುದನ್ನು ಪ್ರಕೃತಿ ನಮ್ಮ ಶಾರೀರಿಕ ರಚನೆಯಿಂದಲೇ ತೋರಿಸಿಕೊಟ್ಟಿದೆ ಶಾಖಾಹಾರ ಆತನ ದೈಹಿಕ ಮತ್ತು ಸಾಂಸ್ಕೃತಿಕ ಸ್ವಭಾವಗಳನ್ನು ಮೃದುಗೊಳಿಸಿ ಮಿತ್ರ ಭಾವವನ್ನು ಸೂಚಿಸುತ್ತದೆ.
ಗೋವು ಅಂದು ದಾರಿಯಲ್ಲಿ,ಮನೆ ಎದುರು ಎಲ್ಲಾ ಕಡೆ ನೋಡುವ ಅವಕಾಶ ಇತ್ತು ಆದರೆ ಇಂದು ಹುಡುಕಿಕೊಂಡು ಹೋದರು ಸಿಗದು ಹಾಗಾಗಿ ಗೋಗ್ರಾಸ ಕೊಡಲು ನಾವು ಗೋಶಾಲೆಗೆ ಹೋಗಬೇಕಾದ ಪರಿಸ್ಥಿತಿ ಅಥವಾ ರಾತ್ರಿ ಗೋವು ಸಿಗದೆ ಚಲ್ಲುವ ಕೆಟ್ಟ ಸ್ಥಿತಿ.
ಗೋವು ನೀಡುವ ಸಂಪನ್ಮೂಲ ಮಾತ್ರ ಎಂದಿಗೂ ಮುಗಿಯದಂಥವು. ಸಗಣಿ ಗೋಮೂತ್ರ ಹಾಗೂ ಗೋಸಂತನದಿಂದ ಸಿಗುವ ಶಕ್ತಿ ನಿರಂತರ .ಆ ಕಾರಣಕ್ಕೆ ಭಾರತದಲ್ಲಿರುವ ಶಾಂತಿ ಸಮಾಜದ ಹಾಗೂ ಅರ್ಥಶಾಸ್ತ್ರದ ಬೆನ್ನೆಲುಬು ಎಂದು ನಂಬಲಾಗಿದೆ . ಅಹಿಂಸೆ, ಶಾಂತಿ,ಸಮೃದ್ಧಿಯ ನೀತಿಯು ಗೋಪಾಲನೆಯಿಂದ ಸಿದ್ಧಿಸುತ್ತದೆ ಎಲ್ಲಾ ಜಾತಿ, ರಾಷ್ಟ್ರ , ಸಂಪ್ರದಾಯ ,ವರ್ಗ, ವಂಶಕ್ಕೆ ಸಮಾನರೂಪದಿಂದ ನಿಸ್ವಾರ್ಥ ಸೇವೆ ಸಲ್ಲಿಸುವ ಕಾರಣಕ್ಕೆಗೋಮಾತೆ ವಿಶ್ವಮಾನ್ಯಳು. ಭೂಮಿತಾಯಿಯಂತೆ ನಮ್ಮನ್ನ ಸಲಹುವ ಮತ್ತೋಂದು ಜೀವ ಇದ್ದರೆ ಮೊದಲು ಎದೆಹಾಲು ಕೊಟ್ಟವಳು ಹಾಗೂ ಕೊನೆಉಸಿರವರೆಗೂ ಹಾಲು ಕೊಟ್ಟವಳು ನೆನಪಿಡಿ. ಆದರೆ ಈ ನಂಬಿಕೆಯನ್ನು ಬ್ರಿಟಿಷರ ಕುಸಿತ ನೀತಿ ಅಲ್ಲಾಡಿಸಿತು ಭಾರತದ ಸಂಪನ್ಮೂಲಗಳ ಮೂಲವೇ ಗೋತಳಿಗಳು ಎಂಬುದನ್ನು ಅರಿತು ಬ್ರಿಟಿಷರು ಇದನ್ನು ನಿರ್ಮೂಲನಗೊಳಿಸಲು ಸಂಚು ಹೂಡಿದರು ಪರಿಣಾಮ ಗೋಹತ್ಯಾ ಭಯಾನಕ ಪರಂಪರೆ ಭಾರತಕ್ಕೆ ಕಾಲಿಟ್ಟದ್ದು.
ಬೆರಳೆಣಿಕೆಯ ಮೂರ್ಖರು ಹಾಗೂ ಪಶ್ಚಿಮ ತಜ್ಞರು ಮಾತ್ರ ಬಲಹೀನ ಹಾಗೂ ವೃದ್ಧ ಪಶುಗಳಿಂದ ಉಪಯೋಗವಿಲ್ಲ ಅದರ ಮಾಂಸದ ಹಣದಿಂದ ಉಳಿದ ಹಸುಗಳಿಗೆ ಪೋಷಣೆ ಒದಗಿಸಬಹುದೆಂದು ಅವೈಜ್ಞಾನಿಕ ಧೋರಣೆಯನ್ನು ಮುಂದಿಡುತ್ತಾರೆ. ಇಂತಹ ಹೀನ ಆಲೋಚನೆಗೆ ಬರುವ ಮುನ್ನ ಭಾರತೀಯರೇ ಹಾಗಾದರೆ ದೇಶದ ಮುದುಕರನ್ನು ಕೊಂದುಬಿಟ್ಟರೆ ಯುವಪೀಳಿಗೆಯ ಪೋಷಣೆಯಾಗುತ್ತದೆಯೇ. ನಿಮಗಾಗಿ ಎಷ್ಟೋ ವರ್ಷಗಳ ಕಾಲ ಹಾಲನ್ನ ಉಣಿಸಲಿಲ್ಲವೇ ಯೋಚಿಸಿ ನೋಡಿ…