ಪ್ರಾತಃಸ್ಮರಣೀಯರಾದ ಶ್ರೀಸಿದ್ಧಗಂಗಾಶ್ರೀಗಳು ಗಂಗಾಸಿದ್ಧಿಯನ್ನು ಪಡೆದು ಗಂಗಾಧರನ ಸಾಯುಜ್ಯವನ್ನು ಪಡೆದರು..!!! ಈ ಪೃಷ್ಠಭೂಮಿಯಲ್ಲಿ ಅವರಿಗೊಂದು ಶ್ರದ್ಧಾಂಜಲಿವಾಕ್ಯ

ಲೇಖನ

 

ನಮ್ಮ ಭಾರತದ ಭೂಷಣವೇ ಸಂತರು..!! ಸ್ವಂತಕ್ಕಾಗಿ ಏನನ್ನೂ ಇಟ್ಟುಕೊಳ್ಳದೇ ಸಮಾಜಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆಯುವ ದೈವೀಶಕ್ತಿಯ ಖನಿಗಳು ಸಂತರು…!!! ರಾಮ-ಕೃಷ್ಣರು ನಡೆದಾಡಿದ ಈ ಭೂಮಿಯಲ್ಲಿ ಸಂತರೇ ನಡೆದಾಡಿದರೆ ಚೆಂದ…!!! ಯಾಕೆ..? ಸಂತರಾಗಿ ಮಾರ್ಪಡುವುದೇ ತಮ್ಮ ಆಂತರಂಗಿಕಸಾಧನೆಯಿಂದ..!!! ಆ ಆಂತರಂಗಿಕಸಾಧನೆಯೇ ಲೋಕಕ್ಷೇಮಕ್ಕಾಗಿ ವಿನಿಯೋಗಿಸಲ್ಪಡುತ್ತದೆ..!!! ಭಗವಾನ್ ವೇದವ್ಯಾಸರಿಂದ ಆಚಾರ್ಯಶಂಕರರ ವರೆಗೆ, ಶಂಕರಾದಿಗಳಿಂದ ವಿವೇಕಾನಂದರ ವರೆಗೆ ಅನೇಕ ಸಂತ-ಮಹಾಂತರು ದೇಶಕ್ಕೆ ವಿಶೇಷವಾದ ಶೋಭೆಯನ್ನು ತಂದಿಟ್ಟರು..!!! ತದನಂತರದ ಕಾಲದಲ್ಲಿ ಶಾಂಕರಪರಂಪರೆಯಲ್ಲಿ ಹಾಗೂ ಜಂಗಮಪರಂಪರೆಯಲ್ಲಿ ಬಂದ ಅನೇಕ ಸಂತರು-ಪೀಠಾಧಿಪತಿಗಳು ದೇಶಕ್ಕಾಗಿ ತನುವನ್ನು ತೆತ್ತರು…!!! ಪ್ರಕೃತ ವರ್ತಮಾನಕಾಲದಲ್ಲಿ ನಮ್ಮ ಕಣ್ಣೆದುರು ಕಾಣುವ, ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ತನುವನ್ನು ದಂಡಿಸಿದ-ದಂಡಿಸುವ, ವಿಶ್ವಮಾನವರಾಗಿ ಸುಖ್ಯಾತಿಯನ್ನು ಪಡೆದ ನಿಜವಾದ ಅರ್ಥದ ಯತಿವರರು ಪೇಜಾವರಶ್ರೀಗಳು, ಸಿದ್ಧಗಂಗಾಶ್ರೀಗಳು ಮತ್ತು ರಾಘವೇಶ್ವರಶ್ರೀಗಳು ಮಾತ್ರ…!!!

 

ಹ್ಮು..!! ದೈವನಿಯತಿಯನ್ನು ಯಾರೂ ಮೀರಲಾರರು..!!! ಕರ್ಮಕ್ಷಯವಾದಾಗ ಸರ್ವರೂ ಕರ್ಮಾಧ್ಯಕ್ಷನಲ್ಲಿಗೆ ತೆರಳಲೇಬೇಕು…!!! ಸಮಗ್ರವಿಶ್ವವನ್ನೇ ತನ್ನೆಡೆಗೆ ಸೆಳೆದ ಪೂಜ್ಯಸಿದ್ಧಗಂಗಾಶ್ರೀಗಳು ಇಹಲೋಕದ ಕರ್ತವ್ಯವನ್ನು ಮುಗಿಸಿ, ನೂರಹನ್ನೊಂದುಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ ಶಿವಲೋಕವನ್ನೈದಿದರು…!!! ಹೃದಯಕ್ಕೆ ಹತ್ತಿರವಾದವರು ದೂರವಾದಾಗ ಸಹಜವಾಗಿಯೇ ಹೃದಯವು ಭಾರವಾಗುತ್ತದೆ..!!! ಕಣ್ಣಂಚು ಆರ್ದ್ರವಾಗುತ್ತದೆ…!!! ಆದರೆ ಅವರ ಲೋಕಸಂಗ್ರಹವೆಂಬ ಮಹೋದ್ಯಮವನ್ನು ಕಂಡಾಗ ಸಮಾಧಾನವಾಗುತ್ತದೆ..!! ಬದುಕುವುದಾದರೆ ಹೀಗೆ ಬದುಕಬೇಕು..!!! ಅವರ ಬದುಕಿನ ಅಂಗಳದಲ್ಲೆಲ್ಲೂ ಕಸವನ್ನು ನಾ ಕಾಣೆ..!!! ಇತ್ತೀಚೆಗಿನ ಕೆಲದಶಕಗಳಿಂದ ಸಹಜವಾಗಿ ತಲೆಯನ್ನು ತಗ್ಗಿಸಿ ನಡೆಯುತ್ತಿದ್ದರೂ ಲೋಕೋದ್ಧಾರದ ಕಾರ್ಯದಲ್ಲಿ ಮತ್ತು ಬದುಕಿನ ದಾರಿಯುದ್ದಕ್ಕೂ ತಲೆಯೆತ್ತಿಯೇ ನಡೆದ ಮಹಾತ್ಮರು ಸಿದ್ಧಗಂಗಾಶ್ರೀಗಳು..!!! ಅವರ ಸಮಾಜಕಾರ್ಯಗಳು ಅಗಣಿತ..!!! ಆತ್ಮೋನ್ನತಿಯ ಮಜಲುಗಳೂ ಅನೂಹ್ಯ…!!! ಅವರು ಮಾತಾಡಿದ್ದಕ್ಕಿಂತ ನಡೆದಾಡಿದ್ದೇ ಹೆಚ್ಚು…!!!! ಆ ನಡೆಯೇ ಲೋಕಕ್ಕೆ ಮಾತಾಯಿತು…!!!! ಆ ಮಾತೇ ನಮ್ಮ ಬದುಕಿಗೆ ಪಾಠವಾಯಿತು…!!! ಸಾಧನೆಯನ್ನು ಮಾಡುವವರು ಅನೇಕರಿರುತ್ತಾರೆ..!!! ಆದರೆ “ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ” ಎಂಬ ಗೀತೋಕ್ತಿಯಂತೆ ಸಾಧಿಸುತ್ತಾ ಸಾಧಿಸುತ್ತಾ ಮುನ್ನಡೆದು ಭಗವಂತನನ್ನು ಅರಿತರಿವರು…!!! ಭಗವಂತನೇ ಆದರು…!!! ಸಾವಿರಲೋಕಕಾರ್ಯಗಳನ್ನು ಮಾಡಿ ಸಾವಿರದ ಲೋಕವನ್ನು ಸೇರಿದರು…!!! ಶಿವಲೋಕವನ್ನೈದುವುದಕ್ಕೆ ಅವರಾರಿಸಿದ ದಿನವು ಶಿವಪ್ರಾಧಾನ್ಯವನ್ನು ಹೊಂದಿದ ದಿನ..!!! ಇನ್ನೂ ಕೆಲವು ಪ್ರಾಶಸ್ತ್ಯಗಳಿವೆ ಈ ದಿನಕ್ಕೆ…!!!! “ಶರಣರನ್ನು ಮರಣದಲ್ಲಿ ಕಾಣು” ಎಂಬ ಲೋಕೋಕ್ತಿಯಂತೆ ಅವರ ಸಾಧನೆಗಳೆಲ್ಲಾ ಲೋಕದ ಅರಿವಿಗೆ ಬರುವುದು ಅಂತ್ಯಕಾಲದಲ್ಲಿ…!!!! ಜೀವಿತಾವಧಿಯಲ್ಲಿ ಲೋಕೋತ್ತರವಾದ ಕಾರ್ಯಗಳನ್ನು ಮಾಡಿದವನಿಗೆ ಮಾತ್ರ ಇಂಥಹ ಯೋಗವು ಕೈಗೂಡುತ್ತದಂತೆ…!!!! ಅಂಥವನಿಗೆ ಮರಣವೇ ಅವಭೃಥವಂತೆ…!!!! ಇದು ಜೀವನಲಕ್ಷ್ಯ…!!! ಇದು ನಮಗೆಲ್ಲಾ ಆದರ್ಶ…!!!! ಅವರಿಗೊಂದು ಸಾವಿರದ ನಮನ…!!

 

ಅಂಥಹ ಸತ್ಪದವಿಗೇರಿದ ಸಿದ್ಧಗಂಗಾಶ್ರೀಗಳು ಮಾಡಿದ ಲೋಕಸಂಗ್ರಹಕ್ಕೆ ಬೆನ್ನೆಲುಬಾಗಿ, ಅವರಂತೆ ವಿಶ್ವಮಾನವರಾಗಿ ಪ್ರಕಟಗೊಂಡವರು ನಮ್ಮ ಪರಮಪೂಜ್ಯಗುರುಗಳಾದ ಪ್ರೀತಿಯ ಶ್ರೀರಾಘವೇಶ್ವರಶ್ರೀಗಳು..!! ಅವರಂತೆ ಸಕಲಜನಾನುರಾಗವನ್ನು ಪಡೆದವರು ನಮ್ಮ ಶ್ರೀಸಂಸ್ಥಾನದವರು..!! ಇಂಥವರು ದೇಶಕ್ಕಾಗಿ ಒಬ್ಬೊಬ್ಬರು ಅವತರಿಸುತ್ತಾರೆ…!!! ನೂರುಸಂತರು ಮಾಡುವ ಲೋಕಕಾರ್ಯಗಳನ್ನು ಇಂಥವರು ಒಬ್ಬೊಬ್ಬರೇ ಮಾಡುತ್ತಾರೆ…!!! ಅಂಥಹ ಊಹೆಗೂ ಸಿಗದ ಪರಮ-ಆತ್ಮಶಕ್ತಿಯನ್ನೂ ಮತ್ತು ಧೀರೋದಾತ್ತತೆಯನ್ನೂ ಪ್ರಕೃತ ನಾವು ಕಾಣುವುದು ನಮ್ಮ ಶ್ರೀಗುರುಗಳಲ್ಲಿ…!!! ಇವರು ಮಾಡುವ ಸಮಾಜಕಾರ್ಯಗಳನ್ನು ಕಂಡಾಗ ಅದೇನಾಗುತ್ತದೆ ಪೀಠಾಧಿಪತಿಗಳೆಂದು ಹೇಳಿಕೊಳ್ಳುವ ಯತಿಚತುಷ್ಟಯ(ದೇಶಭಂಜಕರೆಂಬ ಕುಖ್ಯಾತಿಗೆ ಒಳಗಾಗಿ ಪ್ರಕೃತ ಸಜ್ಜನಹಿಂದೂಬಾಂಧವರ ಕೆಂಗಣ್ಣಿಗೆ ಪಾತ್ರರಾಗಿರುವ)ಗಳಿಗೆ ಅಂತ ಗೊತ್ತಾಗುವುದಿಲ್ಲ…!!!!

 

ಯತಿಚತುಷ್ಟಯರೇ…!!! ಸಂತರಾಗಿ, ಶಾಂತಮೂರ್ತಿಗಳಾಗಿ ವಸಂತಋತುವಿನಂತೆ ಲೋಕಹಿತವನ್ನು ಮಾಡುವುದು ಅಷ್ಟೇನು ಸುಲಭವಲ್ಲ…!!! ಅದಾಗಲಿಲ್ಲ ನಿಮ್ಮಿಂದ…!!! ಲೋಕಹಿತವನ್ನು ಮಾಡುವುದು ಹೇಗೆನ್ನುವುದನ್ನು ಕೇಳಲೂ ಸ್ವಾಭಿಮಾನವು ತಡೆಯಾಯಿತು ನಿಮಗೆ…!!! ಸ್ವಾಭಿಮಾನವು ಮಾನಾಪಮಾನವೇ ಇಲ್ಲದ ಯತಿಗಳಿಗೆ ಭೂಷಣವಲ್ಲವೆಂದು ಸಾರಿ ಹೇಳುತ್ತವೆ ನೀವು ನಂಬದಿದ್ದರೂ ನಾವು ನಂಬುವ ವೇದಾಂತಶಾಸ್ತ್ರಗಳು..!!! ಲೋಕಹಿತವನ್ನು ಮಾಡುವುದು ಹೇಗೆಂದು ಪೇಜಾವರಶ್ರೀಗಳನ್ನು ಕೇಳಬಹುದಿತ್ತು…!!!! ಶಿವೈಕ್ಯರಾದ ಸಿದ್ಧಗಂಗಾಶ್ರೀಗಳನ್ನು ಕೇಳಬಹುದಿತ್ತು…!!!! ಪ್ರಾಯಶಃ ಇಲ್ಲೆಲ್ಲಾ ನಿಮಗೆ ಪೀಠಪರಂಪರೆಯೋ ಅಥವಾ ಸ್ವಾಭಿಮಾನವೋ ತಡೆಯಾಗಿದ್ದಿರಬಹುದು…!!!!! ಬೇಡ….ಬಿಡಿ ಸ್ವಾಮಿಗಳೇ…!!! ಶಾಂಕರಪರಂಪರೆಯಲ್ಲೇ ಬಂದ ಅವಿಚ್ಛಿನ್ನಪೀಠದಲ್ಲಿ ವಿರಾಜಮಾನರಾಗಿ, ಸಮಗ್ರಸಮಾಜದ ಹೃದಯಪೀಠದಲ್ಲೂ ನಿತ್ಯನೆಲೆಯಾಗಿರುವ ಶ್ರೀರಾಘವೇಶ್ವರಶ್ರೀಗಳನ್ನಾದರೂ ಕೇಳಬಹುದಿತ್ತು…!!!! ಅದನ್ನೂ ಮಾಡಲಿಲ್ಲ ನೀವು….!!!! ಅರೇ…..ಏನಾಯಿತು ತಮಗೆ…!!!? ಹೌದು….!!! “ನಮ್ಮ ಪರಂಪರೆಯಲ್ಲೇ ಬಂದು ನಮ್ಮಿಂದಾಗದ ಲೋಕೋತ್ತರಕಾರ್ಯಗಳನ್ನು ರಾಘವೇಶ್ವರಶ್ರೀಗಳು ಮಾಡಿದರಲ್ಲಾ” ಎಂಬ ಮಾತ್ಸರ್ಯವೇ ಅಡ್ಡಬಂತು ನಿಮಗೆಲ್ಲಾ…!!!! ಹಗೆಯನ್ನೇ ಸಾಧಿಸುತ್ತಿದ್ದೀರಿ…!!!! ಚಿತ್ತಪ್ರಸಾದದಿಂದಲೇ ಯತಿತ್ವಕ್ಕೇರುವುದೆಂದು ನಾ ಕೇಳಿಬಲ್ಲೆ ಸ್ವಾಮಿಗಳೇ…!!! ನೀವೂ ಶಾಸ್ತ್ರವಾಕ್ಯಗಳನ್ನು ಉದ್ಧರಿಸುವವರು…!!! ಆದರೂ ಮತ್ತೊಮ್ಮೆ ಮನದಟ್ಟು ಮಾಡುವ ಪ್ರಯತ್ನವಷ್ಟೆ..!!! ಶಂಕರಭಗವತ್ಪಾದರೂ ಒಪ್ಪಿರುವ ಆಸ್ತಿಕದರ್ಶನವೆಂದೆನಿಸಿದ ಪಾತಂಜಲಯೋಗದರ್ಶನವು ಹೀಗೆ ಹೇಳುತ್ತದೆ – “ಮೈತ್ರೀಕರುಣಾಮುದಿತೋಪೇಕ್ಷಾಣಾಂ ಸುಖದುಃಖಪುಣ್ಯಾಪುಣ್ಯವಿಷಯಾಣಾಂ ಭಾವನಾತಶ್ಚಿತ್ತಪ್ರಸಾದನಮ್” ಎಂಬುದಾಗಿ…!!!! ಇಲ್ಲಿ ಸುಖಿಗಳು-ದುಃಖಿಗಳು-ಪುಣ್ಯಾತ್ಮರು-ಪಾಪಿಗಳು ಎಂಬ ನಾಲ್ಕುವರ್ಗದವರಲ್ಲಿ ಕ್ರಮವಾಗಿ ಮೈತ್ರಿಯನ್ನೂ, ಕರುಣೆಯನ್ನೂ, ಸಂತೋಷವನ್ನೂ ಮತ್ತು ಉಪೇಕ್ಷೆಯನ್ನೂ ತೋರಬೇಕೆಂದು ಪಾಠಮಾಡಿದ್ದಾರೆ ನನಗೆ…!!! ಆವಾಗ ಮಾತ್ರ ಚಿತ್ತವು ಉಪಶಮನದತ್ತ ಸಾಗುತ್ತದಂತೆ…!!!! ಗೊತ್ತಿಲ್ಲ…ನೀವೇ ಹೇಳಬೇಕು…!!!! “ಯಾಕೆ ಮನಬಂದಂತೆ ಮಾತಾಡುತ್ತೀರಿ; ನಮ್ಮನ್ನು ಉಪೇಕ್ಷೆಮಾಡಿ ಮಾರಾಯರೇ” ಅಂತ ನೀವು ಹೇಳಲೂಬಹುದು…!!!! ಹ್ಮು…!!! ಆವಾಗ ನೀವೇ ಒಪ್ಪಿದ ಹಾಗಾಗುತ್ತದೆ “ನಾವು ಪಾಪಾತ್ಮರು” ಎಂದು…!!!! ಈಗ ಹೇಳಿ…ಸಮಾಜದಿಂದ ದೂರವುಳಿಯಬೇಕಾದ್ದು ನೀವೋ ಅಥವಾ ರಾಘವೇಶ್ವರಶ್ರೀಗಳೋ..? ಪೀಠತ್ಯಾಗವನ್ನು ಮಾಡಬೇಕಾದ್ದು ನೀವೋ ರಾಘವೇಶ್ವರಶ್ರೀಗಳೋ..? ಪಾಪಾತ್ಮರಿಗೆ ಪೀಠವಿಲ್ವಲ್ಲಾ ನಮ್ಮ ಶಾಂಕರಪರಂಪರೆಯಲ್ಲಿ…!!!

 

ಸಂಸಾರಿಗಳಿಂದ ಯತಿಗಳು ಪಾಠಮಾಡಿಸಿಕೊಳ್ಳಬಾರದು…!!!! ಪೀಠವೇರಿದ ತತ್ಕ್ಷಣದಲ್ಲಿ ಯೋಗ್ಯವಿದ್ವಾಂಸರಿಂದ ವೇದಾಂತಪಾಠ ಮಾತ್ರ ಯತಿಗಳಿಗಿರುವುದು…!!!! ಮತ್ತವರು ಹೇಳಬೇಕಾದವರೇ ಹೊರತು ಕೇಳಬೇಕಾದವರಲ್ಲ…!!!! ಬೇಸರವಾಗುತ್ತದೆ….ಏನು ಮಾಡುವುದು….ಹೇಳುವ ಅನಿವಾರ್ಯ ಬಂದಿದೆ…!!! ನಮ್ಮಂಥಹ ಅಲ್ಪಜ್ಞರು ಹೇಳಿದ್ದನ್ನಾದರೂ ಕೇಳಿ ಸ್ವಾಮಿಗಳೇ…!!! ತಲೆತಗ್ಗಿಸಿ ನಡೆಯಬೇಡಿ…!!!! ಕಾಮಾದ್ಯರಿಷಡ್ವರ್ಗದೊಂದಿಗೆ ಸ್ನೇಹ ಬೇಡ…!!!! ಸಿದ್ಧಗಂಗಾಶ್ರೀಗಳಂತೆ ಬದುಕಿ ಸಮಾಜಕ್ಕೆ ಮಾದರಿಯಾಗಿ…!!!! ರಾಘವೇಶ್ವರಶ್ರೀಗಳಂತೆ ಬದುಕುವುದಕ್ಕೆ ಯತ್ನಶೀಲರಾಗಿ…!!!! ಈಗ ರಾಘವೇಶ್ವರಶ್ರೀಗಳನ್ನು ಇಡೀ ಜಗತ್ತೇ ಓಲೈಸುವಂತೆ ನಿಮ್ಮನ್ನೂ ಓಲೈಸೀತು ಈ ಜಗತ್ತು…!!!! ಯಾರು ಯಾರಿಗೂ ಅಡಿಯಾಳುಗಳಾಗಬೇಡಿ…!!! ಬನ್ನಿ….ಶ್ರೀಶಂಕರರ ಸಂದೇಶವನ್ನು ಜಗತ್ತಿಗೆ ಸಾರೋಣ…!!! ಇತಿ ನಿಮ್ಮ ಆತ್ಮಶ್ರೇಯಸ್ಸನ್ನು ಹೃದಯದಿಂದ ಬಯಸುವ ರಾಘವೇಶ್ವರಶ್ರೀಚರಣರ ನಿಷ್ಕಲ್ಮಷಭಕ್ತ…..ಶ್ರೀವಾಸುದೇವಸಖ……ಹರೇರಾಮ..

 

Leave a Reply

Your email address will not be published. Required fields are marked *