ಪ್ರಾಮಾಣಿಕತೆಗೆ ವಿಧಿಯೂ ವಿಲವಿಲನೆ ಒದ್ದಾಡೀತು. ಜಗತ್ತು ಅವರನ್ನು ಕಂಡು ಮುದ್ದಾಡೀತು.; ಲೋಹಿತಶರ್ಮಾ ಇಡುವಾಣಿ

ಲೇಖನ

ಪ್ರಾಮಾಣಿಕತೆಗೆ ವಿಧಿಯೂ ವಿಲವಿಲನೆ ಒದ್ದಾಡೀತು. ಜಗತ್ತು ಅವರನ್ನು ಕಂಡು ಮುದ್ದಾಡೀತು.

ಓದಬೇಕಿಂದಿಲ್ಲ ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು. ಅದರೆ ನೊಡಲೇಬೇಕು ಅವುಗಳಲ್ಲಿ ಕೆಲವನ್ನು. ದಿನಪತ್ರಿಕೆಗಳಲ್ಲಿ ಇರುತ್ತವೆ ಹೆಚ್ಚು ಇನ್ಪರ್ಮೇಷನ್, ಅಲ್ಲಲ್ಲಿ ಜ್ಞಾನವೂ. ಜ್ಞಾನ ಸೂಚಿಸುತ್ತವವು ಹೊಸತನ್ನು, ಖುಷಿಯಾಗಿಡುತ್ತವೆ ದಿನವನ್ನು. ಅವಕ್ಕಿರುವ ವೈಶಿಷ್ಟ್ಯವದು. ಸುದ್ದಿಯ ನಡುವೆ ಇದ್ದು, ಬುದ್ಧಿಗೆ ಕೆಲಸಕೊಡುವ ಸುದ್ದಿ ಇದು.

ಅಮೆರಿಕ ನೈಜ ಘಟನೆ ಇದೊಂದು. ಮೊರಾ ಗ್ರೆಗ್ ಗೆ ಆಗಿನ್ನು ವರ್ಷ ಮೂರು. ಆಕೆಯ ತಾಯಿ 1946ರಲ್ಲಿ ಅಮೆರಿಕದ ಮಾಂಟ್ ಗೊಮೆರಿ ಕೌಂಟಿಯ ಸಿಲ್ವರ್ ಸ್ಟ್ರಿಂಗ್ ಲೈಬ್ರರಿಯಿಂದ ಪುಸ್ತಕ ತಂದಳು ಮೊರಾ ಗ್ರೆಗ್ ಗೆ ಓದಲು. ‘ದಿ ಪೋಸ್ಟ್ ಮ್ಯಾನ್’ ಪುಸ್ತಕದ ಹೆಸರು.

ಕಳೆಯಿತು ಕೆಲವು ವರ್ಷ. ಸ್ಥಳಾಂತರಗೊಂಡರು ಕೆನಡಾಗವರು. ಒಂದು ದಿನ ಮನೆಯ ಸಾಮಗ್ರಿಗಳನ್ನು ವ್ಯವಸ್ಥಿತವಾಗಿ ಇಡುವಾಗ ಸಿಕ್ಕಿತು 1946ರಲ್ಲಿ ಲೈಬ್ರರಿಯಿಂದ ಪಡೆದ ‘ದಿ ಪೋಸ್ಟ್ ಮ್ಯಾನ್’. ಹಿಂತಿರುಗಿಸಿದಳು ಸುದೀರ್ಘ 73 ವರ್ಷಗಳ ಬಳಿಕ ಸಿಕ್ಕ ಪುಸ್ತಕವನ್ನು. ಒಂಭತ್ತು ಸಾವಿರ ಡಾಲರ್ ಅಂದರೆ ಸುಮಾರು ಆರು ಲಕ್ಷ ರೂಪಾಯಿಗಳಷ್ಟು ದಂಡವಾಗಿತ್ತು ಇಷ್ಟು ವರ್ಷ ಪುಸ್ತಕ ಇಟ್ಟುಕೊಂಡಿದ್ದಕ್ಕೆ. ಆದರೆ ತೆಗೆದುಕೊಳ್ಳಲೇ ಇಲ್ಲ ಲೈಬ್ರರಿಯನ್ ಅವರ ಬಳಿ ಒಂದು ಕಾಸನ್ನೂ. ನಿಶ್ಶುಲ್ಕಗೊಳಿಸಿದ ಅವರ ದಂಡವನ್ನು.

ವಿಷಯವಿದು. ಬೆರಗಾಗಿತ್ತು ಓದಿ ಮುಗಿಸುವಾಗ ಇದನ್ನು. ತೆರೆದಿತ್ತು ಪ್ರಾಮಾಣಿಕ ಜಗದ ಬಾಗಿಲು. ದೃಷ್ಟಾಂತದಂತೆ ಕಂಡಿತಿದು.

ಪ್ರಾಮಾಣಿಕತೆಗೆ ಇಂತಹ ಸಾಮರ್ಥ್ಯವಿದೆ. ಭಕ್ತಿಯಲ್ಲಿ, ಶ್ರದ್ಧೆಯಲ್ಲಿ, ಸೇವೆಯಲ್ಲಿ, ಕಾರ್ಯದಲ್ಲಿ, ಪ್ರೀತಿಯಲ್ಲಿ ಪ್ರಾಮಾಣಿಕತೆ ಇದ್ದರೆ ದೋಷಗಳನ್ನು ನಿರ್ದೋಷಗೊಳಿಸುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಆದದ್ದು ಆಯಿತು, ಇನ್ನು ಮುಂದೆ ಪ್ರಾಮಾಣಿಕನಾಗಿ ಬದುಕುತ್ತೇನೆಂದು ಬದುಕಿದರೆ ಮೊದಲಿನ ತಪ್ಪೆಲ್ಲ ಒಪ್ಪಾಗುತ್ತದೆ. ಪಾಪಗಳನ್ನು ಮಾಡಿ ದೇವರಲ್ಲಿ ಪ್ರಾಮಾಣಿಕವಾಗಿ ಪ್ರಾರ್ಥಿಸಿದರೆ ಆತ ಪಾಪಗಳನ್ನೆಲ್ಲ ಪರಿಹರಿಸುತ್ತಾನೆ ಅಥವಾ ಪಾಪಪರಿಹಾರದ ಮಾರ್ಗ ಸೂಚಿಸುತ್ತಾನೆ. ಇದೇ ಎಲ್ಲ ಕಡೆಗಳಿಗೂ ಅನ್ವಯ. ಮಾಡುವ ಪ್ರತಿಯೊಂದು ಕಾರ್ಯದಲ್ಲಿ ನಿಷ್ಠೆಯಿದ್ದರೆ ಅದೇ ಇನ್ನಷ್ಟು ಉತ್ತಮಮಾರ್ಗವನ್ನು ತೆರೆಸುತ್ತದೆ.

ಮೊರಾ ಗ್ರೆಗ್ ಮಾಡಿದ್ದು ತಪ್ಪೇ. ಆದರೆ ತಪ್ಪು ಅವಳು ಮಾಡಿಲ್ಲ. ಅವರ ತಾಯಿ ಮಾಡಿದ್ದು. ಹಾಗಾಗಿ ತಪ್ಪಿನ ದಂಡ ಅವಳ ಮಗಳಿಗೆ ಬಂದಿದೆ. ಆಕೆ ನಿಸ್ಪೃಹದಿಂದ ಮತ್ತೆ ಮರಳಿಸಿದಳು. ದಂಡ ಇಲ್ಲವಾಯಿತು. ಆದರೆ ಅದನ್ನು ಮೊರಾ ಗ್ರೆಗ್ ಕೊಡದೇ ಅವಳ ಮಕ್ಕಳು ಅದನ್ನು ಕೊಟ್ಟಿದ್ದರೆ ದಂಡವಾಗಬಹುದಿತ್ತು.

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |


ಪ್ರಾಮಾಣಿಕ ಕರ್ಮಕ್ಕೆ ಸುಫಲವೇ ಫಲ. ಒಳ್ಳೆಯದಾಗಲಿ ಎಂದು ಪ್ರಾರ್ಥಿಸಬೇಕೆಂದಿಲ್ಲ.

ಪ್ರಾಮಾಣಿಕತೆಯೇ ಸುಖದ ಬದುಕಿಗೆ ಪ್ರಮಾಣ.

 

 

Leave a Reply

Your email address will not be published. Required fields are marked *