ಶ್ರೀ ಕ್ಷೇತ್ರ ವರದಹಳ್ಳಿಯ ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮಿಗಳ ದಿವ್ಯ ಪಾದುಕೆ ದಿನಾಂಕ13/03/2019ರಿಂದ17/03/2019_ರವರೆಗೆ ಗೋವಾದಲ್ಲಿ ಮೊಕ್ಕಾಂ ಮಾಡಿ ವಿವಿಧ ಭಕ್ತರ ಮನೆಗೆ ತೆರಳಿ ಪಾದಪೂಜಾ ಹಾಗೂ ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಅನುಗ್ರಹ ಮಾಡಿತು.
ಅಂತೆಯೇ ದಿನಾಂಕ 17/03/2019 ಭಾನುವಾರದ ಏಕಾದಶಿಯ ದಿನ ಪಾದಪೂಜೆ ಮಾಡುವ ಭಾಗ್ಯ ನಮ್ಮ ಗೋವಾ ಹವ್ಯಕ ವಲಯಕ್ಕೆ ಲಭಿಸಿದ್ದು ನಮ್ಮ ಪುಣ್ಯ. ಪಾದುಕಾ ಸವಾರಿಯು ಮೊಕ್ಕಾಂ ಇದ್ದ ಮಡಗಾಂವಿನ ಶ್ರೀಮತಿ ರೇಖಾ ಮತ್ತು ಶ್ರೀ ಎಂ.ಕೆ ಹೆಗಡೆಯವರ ಮನೆಯಲ್ಲಿ ಪಾದಪೂಜೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ವಲಯದ 50 ಕ್ಕೂ ಹೆಚ್ಚಿನ ಭಕ್ತರು ಭಾಗವಹಿಸಿ ಕೃತಾರ್ಥರಾದರು.
ವಲಯದ ಪರವಾಗಿ ಶ್ರೀ ಡಿ.ಕೆ ಹೆಗಡೆ ಮತ್ತು ಶ್ರೀ ಕೃಷ್ಣಮೂರ್ತಿ ಹೆಗಡೆ ದಂಪತಿಗಳು ಶ್ರೀ ಪಾದುಕಾಪೂಜೆಯನ್ನು ನೆರವೇರಿಸಿದರು.
ಅತ್ಯಂತ ಅಭೂತಪೂರ್ವ ಕಾರ್ಯಕ್ರಮ ನಡೆದಿದ್ದು ನಮ್ಮ ವಲಯದ ಪುಣ್ಯವೇ ಸರಿ.