ಕಾಸರಗೋಡು: ಕಾಸರಗೋಡಿನ ಪೆರ್ಲದ ಬಜಕೂಡ್ಲುವಿನಲ್ಲಿರುವ ಅಮೃತಧಾರಾ ಗೋಶಾಲೆಗೆ ಸ್ವಯಂಪ್ರೇರಿತ ಶ್ರಮದಾನದ ಮೂಲಕ ಮೇವಿನ ಹುಲ್ಲನ್ನು ಒದಗಿಸುವ ವಿಭಿನ್ನ ಪ್ರಯತ್ನ ನಡೆಯಿತು.
ಕುಂಬಳೆ ವಲಯದ ಸೀತಾಂಗೋಳಿಯ ಹಮೀದ್ ನೆಲ್ಲಿಕುನ್ನು ಅವರಿಗೆ ಸೇರಿದ ಸ್ಥಳದಲ್ಲಿ ಹಸಿಹುಲ್ಲು ಬೆಳೆದಿತ್ತು. ಈ ಹುಲ್ಲನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಚಂದ್ರಗಿರಿ ಹವ್ಯಕ ವಲಯದ ನೇತೃತ್ವದಲ್ಲಿ ಗೋಪ್ರೇಮಿಗಳು ಈ ಹುಲ್ಲನ್ನು ಕತ್ತರಿಸಿ ವಾಹನದಲ್ಲಿ ತುಂಬಿ ಬಜಕೂಡ್ಲು ಅಮೃತಧಾರ ಗೋಶಾಲೆಗೆ ಕಳುಹಿಸಿಕೊಟ್ಟರು.
ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಕುಂಬ್ಳೆ ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮಾ, ಚಂದ್ರಗಿರಿ ವಲಯ ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ, ಮೂಲಮಠ ಪ್ರತಿನಿಧಿ ಕುಂಜತ್ತೋಡಿ ರಾಜಗೋಪಾಲ ಶರ್ಮ, ಬಿ. ಯಲ್ ಶಂಭು ಹೆಬ್ಬಾರ ಗುಂಪೆ ವಲಯ ಘಟಕದ ಗುರಿಕ್ಕಾರ, ಸೂರ್ಯ ನಾರಾಯಣ ಭಟ್ ಸೇವಾ ಪ್ರಧಾನ ಕುಂಬ್ಳೆ ವಲಯ ಕುಂಜತ್ತೋಡಿ ಗಣೇಶ ಶರ್ಮ, ಶ್ರೀ ರಾಮ ಶರ್ಮ ಎಡಕ್ಕಾನ , ಆನಂದ, ಐತ್ತಪ್ಪ, ಶ್ಯಾಮ ಭಟ್ ಕುದ್ರೆಪ್ಪಾಡಿ ಇವರು ಹುಲ್ಲು ಕಟಾವು ಮಾಡುವ ಯಂತ್ರವನ್ನು ಒದಗಿಸಿದ್ದರು.
ಕತ್ತರಿಸಿದ ಹುಲ್ಲನ್ನು ಅಮೃತಧಾರಾ ಗೋಶಾಲೆಗೆ ಸಾಗಿಸಲು ರಾಜಗೋಪಾಲ ಕೈಪ್ಪಂಗಳ ಟೆಂಪೋ ನೀಡಿ ಸಹಕರಿಸಿದರು. ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಗೋಶಾಲೆಯಲ್ಲಿರುವ ಹಸುಗಳಿಗೆ ಹಸಿ ಹುಲ್ಲಿನ ಆಹಾರ ಒದಗಿಸುವ ಪುಣ್ಯ ಕಾರ್ಯದಲ್ಲಿ ಸದ್ಭಕ್ತರು ಪಾಲ್ಗೊಂಡಿದ್ದರು.
ಹರೇ ರಾಮ