ಮೈಸೂರು: ಮೈಸೂರಿನಲ್ಲಿ ನವೆಂಬರ್ 1ರಿಂದ 4ರ ವರೆಗೆ ನಾಲ್ಕು ದಿನಗಳ ಕಾಲ ನಡೆದ ‘ರಾಷ್ಟ್ರೀಯ ಯುವ ಸಂಗೀತೋತ್ಸವ – 2018’ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರಮಠದ ಶಿಷ್ಯೆ ಸಂಗೀತ ವಿದುಷಿ ಶ್ರೀಮತಿ ವಸುಧಾಶರ್ಮಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮೈಸೂರಿನ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮ ಹಾಗೂ ಸಂಸ್ಕಾರ ಭಾರತಿಯ ಸಹಯೋಗದೊಂದಿಗೆ ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಗಿದ್ದು ಇದರಲ್ಲಿ ಶ್ರೀಮತಿ ವಸುಧಾಶರ್ಮಾವರಿಗೂ ಸನ್ಮಾನ ಹಾಗೂ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಷಯವಾಗಿದೆ.
ಶ್ರೀಮತಿ ವಸುಧಾಶರ್ಮಾ ಅವರು ಮೈಸೂರು ಮಹಾರಾಜ ಶ್ರೀಯದುವೀರ ಒಡೆಯರ್ ಹಾಗೂ ರಾಜ್ಯದ ಉನ್ನತ ಶಿಕ್ಷಣ ಸಚಿವ ಶ್ರೀ ಜಿ.ಟಿ. ದೇವೇಗೌಡ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಅವಧೂತ ದತ್ತಪೀಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತವಿಜಯೇಂದ್ರ ಸ್ವಾಮೀಜಿ, ಇಸ್ರೋದ ಮಾಜಿ ಅಧ್ಯಕ್ಷ ಡಾ| ರಾಧಾಕೃಷ್ಣ, ಸಂಸ್ಕಾರ ಭಾರತಿಯ ಅಧ್ಯಕ್ಷರಾದ ಶ್ರೀ ಶ್ರೀಕೃಷ್ಣದೇವರಾಯ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಧನ್ಯವಾದಗಳು ಶ್ರೀ ಮುಖ ಶ್ರೀಸಂಸ್ಥಾನ.