ಬೆಂಗಳೂರು:- ದೇವರಿಗೆ ಹರಕೆ ರೂಪದಲ್ಲಿ ಹೂವು-ಹಣ್ಣು ಕಾಣಿಕೆ ಸಮರ್ಪಿಸುವಂತೆ ಸಂಗೀತ ಕಲಾವಿದರಾದ ಶ್ರೀರಘುನಂದನ ಬೇರ್ಕಡವುರವರು ಶ್ರೀಕರಾರ್ಚಿತ ದೇವರ ಸಮ್ಮುಖದಲ್ಲಿ ತಮ್ಮ ಗಾನಸುಧೆಯ ಮೂಲಕ ಹರಕೆ ಸಲ್ಲಿಸಿದರು.
ಗುರುವಾರ(೧-೧೧-೨೦೧೮) ಗಿರಿನಗರದ ಶ್ರೀರಾಮಾಶ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟರು. ರಾಗ ನಾಟದಿಂದ ಆರಂಭಿಸಿ, ಬಹುದಾರಿ, ದೇವಗಾಂಧಾರಿ, ರೀತಿಗೌಳ, ದರ್ಬಾರ್, ಪಂತುವರಾಳಿ, ಕಾನಡ, ಸಿಂಧುಬೈರವಿ, ದುರ್ಗಾ, ಮಿಶ್ರ ಪಹಾಡಿ, ಮೋಹನ, ಕಲ್ಯಾಣಿ, ಸೌರಾಷ್ಟ್ರ ರಾಗದಲ್ಲಿ ಹಾಡಿ ಶ್ರೀರಾಮನಿಗೆ ಕಲಾಸೇವೆಗೈದರು.
ಶ್ರೀಸಂಸ್ಥಾನದವರ ಆಶೀರ್ವಾದ ಹಾಗೂ ಸೂಚನೆಯ ಮೇರೆಗೆ ರಘುನಂದನ ಅವರು ಈ ಸಂಗೀತ ಸೇವೆಯ ಮೂಲಕ ಅವರ ಹರಕೆಯನ್ನು ನೆರವೇರಿಸಿ ದೇವರ ಕೃಪೆಗೆ ಪಾತ್ರರಾದರು. ಅವರ ಸಂಗೀತ ಕಾರ್ಯಕ್ರಮಕ್ಕೆ
ಮೃದಂಗದಲ್ಲಿ ಅನಿರುದ್ಧ ಭಟ್
ಪಿಟೀಲುವಾದನದಲ್ಲಿ ಅಚ್ಯುತ ರಾವ್ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಕಾಂಚನ ರೋಹಿಣಿ ಸುಬ್ಬರತ್ನಂ ಹಾಗೂ ಕಾಂಚನ ಶ್ರುತಿರಂಜನಿಯವರು ಉಪಸ್ಥಿತರಿದ್ದರು.