ಮುಳ್ಳೇರಿಯಾ : ಕೊಡಗು ವಲಯದ ನೆರೆ ಸಂತ್ರಸ್ತೆ ಶ್ರೀಮತಿ ಸರಸ್ವತಿ ಅಮ್ಮನವರಿಗೆ ಶ್ರೀಮಠದ ಸಹಾಯನಿಧಿ ವತಿಯಿಂದ ಧನಸಹಾಯ ನೀಡಲಾಯಿತು.
ನವೆಂಬರ್ 6ರಂದು ನಡೆದ ಸಭೆಯಲ್ಲಿ ಶ್ರೀಮಠದ ವತಿಯಿಂದ ₹ 1,00,000/- ವನ್ನು ಚೆಕ್ ಮೂಲಕ, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹರಿಪ್ರಸಾದ್ ಪೆರಿಯಾಪ್ಪು, ಮಂಡಲದ ಅಶೋಕೆ ವಿಭಾಗ ಪ್ರತಿನಿಧಿ ಶ್ರೀ ಹರೀಶ್ ಹಾರದೂರ್, ಅಧ್ಯಕ್ಷರಾದ ಶ್ರೀ ನಾರಾಯಣ್ ಮೂರ್ತಿ ಮತ್ತು ಗುರಿಕ್ಕಾರರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹರಿಪ್ರಸಾದ್ ಪೆರಿಯಾಪ್ಪು 10.11.2018ರಂದು ನಡೆಸಬೇಕಾದ ಸಮೂಹ ಪ್ರಾರ್ಥನೆ ಸ್ವರೂಪವನ್ನು ಮನದಟ್ಟು ಮಾಡಿಕೊಟ್ಟು ಶ್ರೀಮಠದ ಸಂರಕ್ಷಣೆಯ ಅಗತ್ಯತೆ ಹಾಗೂ ಅದಕ್ಕೆ ನಮ್ಮ ಬದ್ಧತೆಯ ಬಗ್ಗೆ ಮಾಹಿತಿಗಳನ್ನಿತ್ತರು.