ಸುಳ್ಯ ವಲಯದಲ್ಲಿ ವೇದವಾಹಿನಿ ಕಾರ್ಯಕ್ರಮ : ಸಂಪನ್ನಗೊಂಡ ಪಾರಾಯಣ – ವೇದಶ್ರವಣ

ಉಪಾಸನೆ ಸುದ್ದಿ

ಸುಳ್ಯ: ಸುಳ್ಯ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗದಿಂದ 112 ಮತ್ತು 113ನೆಯ ವೇದವಾಹಿನಿ ಕಾರ್ಯಕ್ರಮಗಳು ನವೆಂಬರ್ 2ರಂದು ನಡೆದವು.

 

112ನೆಯ ವೇದವಾಹಿನಿ ಕಾರ್ಯಕ್ರಮವನ್ನು ಪಾರೆ ಶ್ರೀ ಕೇಶವಯ್ಯ ಭಟ್ ಅವರ ಮನೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮನೆಯ ಯಜಮಾನರು ಕುಟುಂಬ ಸಮೇತರಾಗಿ ವೇದಶ್ರವಣ ಮಾಡಿದರು. ಘಟಕ ಗುರಿಕಾರರಾದ ಶ್ರೀ ವಿಷ್ಣುಕಿರಣ ಭಟ್ ಅವರು ಉಪಸ್ಥಿತರಿದ್ದರು.
ಇದೇ ದಿನ ನೀರಬಿದರೆ ಶ್ರೀ ವೆಂಕಟರಮಣ ಭಟ್ ಅವರ ಮನೆಯಲ್ಲಿ ನಡೆದ 113ನೆಯ ವೇದವಾಹಿನಿ ಕಾರ್ಯಕ್ರಮದಲ್ಲಿ ಮನೆ ಯಜಮಾನರು ಕುಟುಂಬ ಸಮೇತರಾಗಿ ವೇದಶ್ರವಣ ಮಾಡಿದರು. ಶ್ರೀ ಭಕ್ತವತ್ಸಲ ನೀರಬಿದರೆ ಅವರು ಧನ್ಯವಾದ ಸಮರ್ಪಣೆ ನಡೆಸಿದರು.

 

ಎರಡೂ ಕಾರ್ಯಕ್ರಮಗಳಲ್ಲಿ ವೈದಿಕರಾದ ಎತ್ತುಕಲ್ಲು ಶ್ರೀ ನಾರಾಯಣ ಭಟ್ , ಶ್ರೀವಿಶ್ವಕೀರ್ತಿ ಜೋಯಿಸರು, ಶ್ರೀ ಕೃಷ್ಣ ಭಟ್ ಅರಂಬೂರು ಹಾಗೂ ಶ್ರೀ ವೆಂಕಟೇಶ ಶಾಸ್ತ್ರಿ ಅವರು ಪಾರಾಯಣ ನಡೆಸಿದರು.

 

Author Details


Srimukha

Leave a Reply

Your email address will not be published. Required fields are marked *